ಏಪ್ರಿಲ್‌ 26ಕ್ಕೆ ಮತದಾನ: 5 ಲೋಕಸಭಾ ಕ್ಷೇತ್ರಗಳಲ್ಲಿ ನಿಷೇಧಾಜ್ಞೆ!

masthmagaa.com:

ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕದ ಒಟ್ಟು 14 ಕ್ಷೇತ್ರಗಳಲ್ಲಿ ಮೊದಲ ಹಂತಕ್ಕೆ ಏಪ್ರಿಲ್‌ 26ರಂದು ಮತದಾನ ನಡೆಯಲಿದೆ. ಹೀಗಾಗಿ ಏಪ್ರಿಲ್ 24ರ ಸಂಜೆ 6ಗಂಟೆಯಿಂದ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ.ಇದ್ರ ಬೆನ್ನಲೆ ರಾಜಧಾನಿ ಬೆಂಗಳೂರಿನ 5 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಮಾಡಲಾಗಿದೆ. ಬೆಂಗಳೂರು ನಗರದಲ್ಲಿ 13ಸಾವಿರಕ್ಕೂ ಅಧಿಕ ಪೋಲಿಸರ ನಿಯೋಜನೆ ಮಾಡಲಾಗಿದೆ. ಏಪ್ರಿಲ್‌ 26ರ ಮಧ್ಯ ರಾತ್ರಿವರೆಗೆ ಮದ್ಯ ಮಾರಾಟವನ್ನ ನಿಷೇಧಿಸಲಾಗಿದೆ. ಸಂಜೆ 6ರಿಂದ ಸಂಜೆ 6ರ ಬಳಿಕ ಮನೆ ಮನೆಗೆ ತೆರಳಿ ಎಲೆಕ್ಷನ್‌ ಪ್ರಚಾರ ನಡೆಸಲು ಮಾತ್ರ ಅವಕಾಶ ನೀಡಲಾಗಿದೆ.

-masthmagaa.com

Contact Us for Advertisement

Leave a Reply