ವೆಸ್ಟ್‌ ಇಂಡೀಸ್‌ನಲ್ಲಿ ಟಿ-20 ವಿಶ್ವಕಪ್ ಟೂರ್ನಿಗೆ ಉಗ್ರರ ಬೆದರಿಕೆ!

masthmagaa.com:

ಜೂನ್‌ 2ರಂದು ಅಮೆರಿಕ ಹಾಗೂ ವೆಸ್ಟ್‌ ಇಂಡೀಸ್‌ನಲ್ಲಿ ನಡೆಯಲಿರೊ ಟಿ-20 ವಿಶ್ವಕಪ್‌ಗೆ ಉಗ್ರದಾಳಿಯ ಬೆದರಿಕೆ ಬಂದಿದೆ. ಈ ಬಗ್ಗೆ ಆನ್ಲೈನ್‌ ಕ್ರಿಕೆಟ್‌ ನ್ಯೂಸ್‌ ಅಪ್ಲಿಕೇಶನ್‌ ಕ್ರಿಕ್‌ಬಜ್‌ ಮಾಹಿತಿ ಹಂಚಿಕೊಂಡಿದೆ. ಟಿ-20 ವಿಶ್ವಕಪ್‌ ಟೂರ್ನಿ ಆಯೋಜನೆಯ ಭಾಗವಾಗಿರೊ ವೆಸ್ಟ್‌ ಇಂಡೀಸ್‌ಗೆ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಬೆದರಿಕೆಗಳು ಹಾಕಿವೆ. ಇಸ್ಲಾಮಿಕ್‌ ಉಗ್ರವಾದ ಪರ ಇರೋ ಮೀಡಿಯಾಗಳು ಕ್ರೀಡಾಕೂಟಗಳಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡೊ ಕ್ಯಾಂಪೇನ್‌ಗಳನ್ನ ಶುರು ಮಾಡ್ಕೊಂಡಿವೆ. ಅದರಲ್ಲೂ ದಕ್ಷಿಣ ಹಾಗೂ ಮಧ್ಯ ಏಷ್ಯಾದಲ್ಲಿ ಆಕ್ಟಿವ್‌ ಆಗಿರೋ ಸಲಾಫಿ ಜಿಹಾದಿ ಪಡೆ ಇದರಲ್ಲಿ ಪ್ರಮುಖ ಪಾತ್ರವನ್ನ ನಿಭಾಯಿಸ್ತಿದೆ. ಈ ಬಗ್ಗೆ ಕೆಲ ವಿಡಿಯೋಗಳನ್ನ ಹರಿಬಿಟ್ಟು ಬೇರ್ಬೇರೆ ದೇಶಗಳ ಉಗ್ರರಿಗೂ ಈ ದಾಳಿಯಲ್ಲಿ ಭಾಗಿಯಾಗಲು ಒತ್ತಾಯಿಸ್ತಿದೆ ಅಂತ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇತ್ತ ವಿಚಾರದ ಬಗ್ಗೆ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ನ CEO ಜಾನಿ ಗ್ರೇವ್ಸ್‌ ಪ್ರತಿಕ್ರಿಯೆ ನೀಡಿದ್ದಾರೆ, ವಿಶ್ವಕಪ್‌ ಟೂರ್ನಿಗೆ ಬೇಕಾದ ಅಗತ್ಯ ಭದ್ರತಾ ಕ್ರಮಗಳನ್ನ ಅಧಿಕಾರಿಗಳೊಂದಿಗೆ ಸೇರಿ ನಾವು ಕೈಗೊಂಡಿದ್ದೇವೆ, ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ ಅವರು ಹೇಳ್ಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply