ಅಧ್ಯಕ್ಷ ಜೊ ಬೈಡನ್‌ ಅವ್ರ ಸಾಕುನಾಯಿಯನ್ನ ಕೊಲ್ಬೇಕು: ಕ್ರಿಸ್ಟಿನೋವ್

masthmagaa.com:

ಅಮೆರಿಕ ಅಧ್ಯಕ್ಷ ಜೊ ಬೈಡನ್‌ ಅವ್ರ ಕಮಾಂಡರ್‌ ಅನ್ನೊ ಸಾಕುನಾಯಿಯನ್ನ ಗುಂಡಿಕ್ಕಿ ಕೊಲ್ಲಬೇಕು ಅಂತ ಅಮೆರಿಕ ರಾಜಕಾರಣಿ ಕ್ರಿಸ್ಟಿ ನೋಮ್‌ ಹೇಳಿದ್ದಾರೆ. ತಮ್ಮ ಆತ್ಮಚರಿತ್ರೆಯಲ್ಲಿ ನಾಯಿಗಳ ಬಗ್ಗೆ ಬರೆದುಕೊಂಡಿರೋ ಅವರು, ನನ್ನ ಕ್ರಿಕೆಟ್‌ ಅನ್ನೊ ಸಾಕು ನಾಯಿ ಆಕ್ರಮಣಕಾರಿ ಬಿಹೇವ್‌ ಮಾಡಿದ್ದಕ್ಕಾಗಿ ನಾನು ಗುಂಡಿಕ್ಕಿ ಕೊಂದಿದ್ದೆ. ಅಧ್ಯಕ್ಷ ಬೈಡನ್ ಅವ್ರ ನಾಯಿ ಕೂಡ ಅದೇ ಥರ ಆಕ್ರಮಣಕಾರಿಯಾಗಿ ಬಿಹೇವ್‌ ಮಾಡುತ್ತೆ. ಈಗಾಗ್ಲೆ 24 ಸೆಕ್ಯುರಿಟಿ ಸಿಬ್ಬಂದಿಗೆ ಆ ನಾಯಿ ಕಚ್ಚಿದೆ. ಹೀಗಾಗಿ ಅಂತಹ ನಾಯಿಗಳಿಂದ ಸೇಫ್‌ ಆಗಿರಲು ಅವುಗಳನ್ನ ಹತ್ಯೆ ಮಾಡ್ಬೇಕು ಅಂತ ಕ್ರಿಸ್ಟಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply