ಬ್ರೆಜಿಲ್‌ನ ಸಂಗೀತ ಕಾರ್ಯಕ್ರಮವೊಂದ್ರಲ್ಲಿ 16 ಲಕ್ಷ ಜನ ಹಾಜರು!

masthmagaa.com:

ಬ್ರೆಜಿಲ್‌ನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದು ಐತಿಹಾಸಿಕ ದಾಖಲೆ ಬರೆದಿದೆ. ಅಲ್ಲಿನ ರಿಯೋ ಡಿ ಜನೈರೊ ಪ್ರಾಂತ್ಯದಲ್ಲಿರೊ ಪ್ರಸಿದ್ದ ಕೊಪಕಬಾನಾ ಬೀಚ್‌ನಲ್ಲಿ ಅಮೆರಿಕದ ಖ್ಯಾತ ಗಾಯಕಿ ಹಾಗೂ ನಟಿಯೂ ಆಗಿರೊ ಮಡೋನಾ ಲೂಯಿಸ್‌ ಸಿಕ್ಕೋನ್‌ ಅವ್ರು ನಡೆಸಿದ ಉಚಿತ ಸಂಗೀತ ಕಾರ್ಯಕ್ರಮಕ್ಕೆ ಒಂದಲ್ಲ ಎಡರಲ್ಲ ಬರೋಬ್ಬರಿ 16 ಲಕ್ಷ ಜನ ಹಾಜರಾಗಿದ್ದಾರೆ. ಇನ್ನು ತಮ್ಮ 40 ವರ್ಷ ವೃತ್ತಿ ಜೀವನದ ಕೊನೆಯ ಸಂಗೀತ ಕಾರ್ಯಕ್ರಮದಲ್ಲಿ ಇಷ್ಟೊಂದು ಜನ ಅಭಿಮಾನಿಗಳನ್ನ ಕಂಡಿದ್ದೇ ಇದೇ ಮೊದಲು ಅಂತ 65 ವರ್ಷದ ಮಡೋವಾ ಸಂತಸ ವ್ಯಕ್ತಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply