ಯುರೋಪ್‌ ಪ್ರವಾಸ ಕೈಗೊಂಡ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌!

masthmagaa.com:

ಕಳೆದೈದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಯುರೋಪ್‌ ಪ್ರವಾಸ ಕೈಗೊಂಡಿದ್ದಾರೆ. ಫ್ರಾನ್ಸ್‌ನಿಂದ ತಮ್ಮ ಟೂರ್ ಶುರುಮಾಡಿರೊ ಜಿನ್‌ಪಿಂಗ್‌,‌ ಈಗಾಗಲೇ ಫ್ರಾನ್ಸ್‌ ಅಧ್ಯಕ್ಷರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಉಭಯ ದೇಶಗಳ ನಡುವಿನ ಆರ್ಥಿಕತೆ ಹಾಗೂ ಸ್ಟಾಟಜಿಕ್ ವಿಚಾರವಾಗಿ ಸಭೆ ನಡೆದಿದೆ. ಇನ್ನು ಇದೇ ವೇಳೆ ಫ್ರಾನ್ಸ್‌ ಅಧ್ಯಕ್ಷ ಮ್ರಾಕ್ರಾನ್‌, ಯುಕ್ರೇನ್‌ ಸಂಘರ್ಷ ಕುರಿತಂತೆ ಚೀನಾ ಹೆಲ್ಪ್‌ ಮಾಡ್ಬೇಕು ಅಂತ ಕೇಳಿಕೊಂಡಿರೋದಾಗಿ ಯುರೋಪ್‌ ಮಾಧ್ಯಮಗಳು ವರದಿ ಮಾಡಿವೆ. ಇನ್ನು ಫ್ರಾನ್ಸ್‌ ಬಳಿಕ ಸರ್ಬಿಯಾ ಮತ್ತು ಹಂಗೇರಿಗಳಿಗೂ ಜಿನ್‌ಪಿಂಗ್‌ ಭೇಟಿ ನೀಡಲಿದ್ದಾರೆ ಅಂತ ಗೊತ್ತಾಗಿದೆ.. ಅಂದ್ಹಾಗೆ ಸರ್ಬಿಯಾ ಮತ್ತು ಹಂಗೇರಿ ಎರಡೂ ದೇಶಗಳು ರಷ್ಯಾ ಜೊತೆಗೆ ಕ್ಲೋಸ್‌ ಆಗಿವೆ..ರಷ್ಯಾಗೆ ಯುದ್ದ ಸಲಕರಣೆಗಳನ್ನ ನೀಡ್ತಿರೊ ವಿಚಾರವಾಗಿ ಅಮೆರಿಕ ಈ ದೇಶದ ಕಂಪನಿಗಳಿಗೆ ನಿರ್ಬಂಧ ಹೇರ್ತಿದ್ದಂತೆ ಚೀನಾ ಈ ದೇಶಗಳ ಜೊತೆಗೆ ತಾನು ಸಂಬಂಧ ಬೆಳೆಸೋಕೆ ಪ್ರವಾಸ ಮಾಡ್ತಿದೆ. ಅಲ್ಧೆ ಫ್ರಾನ್ಸ್‌ ಜೊತೆಗೂ ರಿಲೇಷನ್‌ ಮತ್ತಷ್ಟು ಬಿಲ್ಡ್‌ ಮಾಡ್ಕೊಂಡು ಅಮೆರಿಕಗೆ ಟಕ್ಕರ್‌ ಕೊಡೋಕೆ ಚೀನಾ ಮುಂದಾಗಿದೆ. ನಿಮಗೆಲ್ಲಾ ಗೊತ್ತಿರೋ ಹಾಗೇ ಈ ಅಮೆರಿಕ ಫ್ರಾನ್ಸ್‌ ಮಿತ್ರ ದೇಶಗಳಾದ್ರೂ ಇತ್ತೀಚಿಗೆ ಅವರ ಸಂಬಂಧ ಅಷ್ಟು ಚೆನ್ನಾಗಿಲ್ಲ. ಅಕುಸ್‌, 5ಐ ಸೇರಿ ಅನೇಕ ಕೂಟಗಳಲ್ಲಿ ಅಮೆರಿಕ ಫ್ರಾನ್ಸ್‌ನ್ನ ಬಿಟ್ಟಿದೆ. ಅವರನ್ನ ಸೇರಿಸಿಕೊಂಡಿಲ್ಲ. ಅಮೆರಿಕದ ಬಹುತೇಕ ನಡೆಗಳು ಬರೀ ಇಂಗ್ಲೀಷ್‌ ದೇಶಗಳ ಕಡೆಗೆ ಅಂದ್ರೆ ಕೆನಡಾ, ಬ್ರಿಟನ್‌, ನ್ಯೂಜಿಲೆಂಡ್‌ ಮತ್ತು ಆಸ್ಟ್ರೇಲಿಯಾ ಕಡೆಗೆ ಮಾತ್ರ ಇದೆ. ಫ್ರಾನ್ಸ್‌ನಿಂದ ಇವರೆಲ್ಲಾ ಒಂದು ಅಂತರವನ್ನ ಕಾಯ್ಕೋತಿದ್ದಾರೆ. ಹೀಗಾಗಿನೇ ಫ್ರಾನ್ಸ್‌ ಏಷ್ಯಾ ದೇಶಗಳ ಜೊತೆಗೆ ಅದರಲ್ಲೂ ಭಾರತ ಮತ್ತು ಚೀನಾ ಜೊತೆಗೆ ಹೆಚ್ಚಿನ ಸಂಬಂಧ ಹೊಂದುವ ಬಗ್ಗೆ ಹೆಚ್ಚಿನ ಮನಸ್ಸು ಮಾಡ್ತಿದೆ. ಹೀಗಾಗಿ ಚೀನಾದ ಈ ಭೇಟಿ ಸಾಕಷ್ಟು ಮಹತ್ವ ಪಡ್ಕೋತಿದೆ.

-masthmagaa.com

Contact Us for Advertisement

Leave a Reply