ಪ್ಯಾಲೆಸ್ತೀನ್‌ ಸ್ಥಾಪನೆಯಾದ್ರೆ ಶಸ್ತ್ರಾಸ್ತ್ರ ಬದಿಗಿಡ್ತೀವಿ: ಹಮಾಸ್‌

masthmagaa.com:

ಇಸ್ರೇಲ್‌ ಮತ್ತು ಇಸ್ಲಾಮಿಕ್‌ ದೇಶಗಳ ಸಂಘರ್ಷಕ್ಕೆ ಸಂಬಂಧಪಟ್ಟಂತೆ ಈಗ ಅತಿದೊಡ್ಡ ಬೆಳವಣಿಗೆಯಾಗಿದೆ. ಇಸ್ರೇಲ್‌ ವಿರುದ್ದ ಯುದ್ದ ಮಾಡ್ತಿರೋ ಹಮಾಸ್‌ ಇಸ್ರೇಲ್‌ ದೇಶವನ್ನ ಒಪ್ಪಿಕೊಳ್ತೀವಿ ಅಂತ ಅನೌನ್ಸ್‌ಮಾಡಿದೆ. ʻʻಇಸ್ರೇಲ್‌ ಟು ಸ್ಟೇಟ್‌ ಸಲ್ಯೂಷನ್‌ಗೆ ಮುಂದಾಗಬೇಕು, ಸ್ವತಂತ್ರ ಪ್ಯಾಲೆಸ್ತೀನ್‌ ಸ್ಥಾಪನೆಯಾಗಬೇಕು. 1967ರಲ್ಲಿ ನಡೆದ ಮಿಡಲ್‌ಈಸ್ಟ್‌ ಯುದ್ಧದ ವೇಳೆ ಇಸ್ರೇಲ್‌ ವಶಪಡಿಸಿಕೊಂಡ ಪ್ರದೇಶಗಳನ್ನ ಹಿಂದಿರುಗಿಸಿ, ಸ್ವತಂತ್ರ ಪ್ಯಾಲೆಸ್ತೀನ್‌ ಸ್ಥಾಪನೆಯಾದ್ರೆ ನಾವು ಇಸ್ರೇಲ್‌ ಜೊತೆ ಐದು ಅಥ್ವಾ ಅದಕ್ಕೂ ಜಾಸ್ತಿ ವರ್ಷಗಳ ಕಾಲ ಕದನವಿರಾಮಕ್ಕೆ ಮುಂದಾಗ್ತೀವಿ. ನಮ್ಮ ಶಸ್ತ್ರಾಸ್ತ್ರಗಳನ್ನ ಬದಿಗಿಟ್ಟು ರಾಜಕೀಯ ಪಕ್ಷವಾಗಿ ಕನ್ವರ್ಟ್‌ ಆಗ್ತೀವಿʼ ಅಂತೇಳಿದೆ. ಈ ಮೂಲಕ ಇಸ್ರೇಲ್‌ನ್ನ ಅಗ್ರಿ ಮಾಡ್ತೀವಿ ಅನ್ನೋ ಹೇಳಿಕೆ ಕೊಟ್ಟಿದ್ದಾರೆ. ಇಲ್ಲಿ ಹಮಾಸ್‌ನ ಹೇಳಿಕೆ ಯಾಕಿಷ್ಟು ಇಂಪಾರ್ಟೆಂಟ್‌ ಅಂದ್ರೆ ಇಷ್ಟು ದಿನ ಇಸ್ರೇಲ್‌ ದೇಶದ ಸರ್ವನಾಶವೇ ನಮ್ಮ ಗುರಿ ಅಂತ ಹಮಾಸ್‌ ಹೇಳ್ತಿತ್ತು. ಇರಾನ್‌ ಸೇರಿ ಅನೇಕ ಇಸ್ಲಾಮಿಕ್‌ ದೇಶಗಳ ಸಿದ್ದಾಂತ ಕೂಡ ಇದೇ ಇದೆ. ಪಾಕಿಸ್ತಾನವೂ ಇಸ್ರೇಲ್‌ನ್ನ ಒಂದು ದೇಶ ಅಂತ ಕನ್ಸಿಡರ್‌ ಮಾಡಿಲ್ಲ. ಸೌದಿ ಮತ್ತು ಅನೇಕ ಸುನ್ನಿ ದೇಶಗಳು ಇಷ್ಟ ಇದ್ದೋ ಇಲ್ದೆನೋ ಇಸ್ರೇಲ್‌ನ್ನ ವಿರೋಧ ಮಾಡ್ತವೆ. ಯಾಕಂದ್ರೆ ಇಸ್ರೇಲ್‌ ಪರ ನಿಂತುಕೊಂಡ್ರೆ ಮುಸ್ಲಿಂ ಗುಂಪಲ್ಲಿ ಮರ್ಯಾದೆ ಇಲ್ಲ ಅನ್ನೋ ಕಾರಣಕ್ಕೆ. ಜೊತೆಗೆ ಮುಸ್ಲಿಂ ದೇಶದ ಒಳಗೂ ಪಾಲೇಸ್ತೇನ್‌ ಅನ್ನೋದು ಭಾವನಾತ್ಮಕ ವಿಚಾರ. ಇಸ್ರೇಲ್‌ ಇರಲೇಬಾರದು ಅಂತ ಅವರು ಹೇಳ್ತಾರೆ. ಸೋ ಹೀಗಿರುವಾಗಲೇ ಪಾಲೆಸ್ತೇನ್‌ ಪರ ಅಂತ ಯುದ್ದ ಮಾಡ್ತಿರೋ ಹಮಾಸ್‌ಗಳೇ ಈಗ ಇಂಥ ದೊಡ್ಡ ಸ್ಟೇಟ್‌ಮೆಂಟ್‌ ಕೊಟ್ಟಿರೋದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಜೊತೆಗೆ ಇಲ್ಲಿ ಇನ್ನೂ ಒಂದು ಗಮನಿಸಬೇಕಾದ ಅಂಶ ಅಂದ್ರೆ ಹಮಾಸ್‌ಗಳ ಹಿಂದೆ ನಿಂತಿರೋದು ಇರಾನ್‌ . ಇತ್ತೀಚಿಗಷ್ಟೇ ಇರಾನ್‌ ಇಸ್ರೇಲ್‌ಗಳು ಬಡಿದಾಡಿಕೊಂಡಿದ್ವು. ಸೋ ಇರಾನ್‌ ಕೂಡ ಇಸ್ರೇಲ್‌ ಅಸ್ತಿತ್ವವನ್ನ ಒಪ್ಪಲ್ಲ. ಹೀಗಾಗಿ ಹಮಾಸ್‌ಗಳ ಈ ನಿರ್ಧಾರ ಮುಸ್ಲಿಂ ದೇಶಗಳು ಕೂಡ ಇಸ್ರೇಲ್‌ಗೆ ಮಾನ್ಯತೆ ಕೊಡೋಕೆ ಸಿದ್ದವಾಗ್ತಿದ್ದಾವಾ ಅನ್ನೋ ಚರ್ಚೆಗೂ ಕಾರಣವಾಗ್ತಿದೆ. ಯಾಕಂದ್ರೆ ಇಷ್ಟು ದಿನ ಹಮಾಸ್‌ಗಳ ಮೂಲಕವೇ ಇಸ್ರೇಲ್‌ಗೆ ಅನೇಕ ದೇಶಗಳು ಕಾಟ ಕೊಡ್ತಿದ್ವು. ಇವರನ್ನ ಮುಂದೆ ಬಿಟ್ಟು ಅವರ ನಾಶ ಮಾಡ್ತೀವಿ ಅನ್ನೋ ರೀತಿ ನಡ್ಕೋತಿದ್ವು. ಹೀಗಾಗಿ ಈಗ ಹಮಾಸ್‌ ನಾಯಕರ ಬಾಯಲ್ಲಿ ಇಂಥ ಒಂದು ಸ್ಟೇಟ್‌ಮೆಂಟ್‌ ಬಂದಿರೊದು ನಿಜಕ್ಕೂ ಮಿಡಲ್‌ಈಸ್ಟ್‌ನ ಪಾಲಿಗೆ ದೊಡ್ಡ ಬೆಳವಣಿಗೆ ಅಂತಲೇ ಕನ್ಸಿಡರ್‌ ಮಾಡಲಾಗ್ತಿದೆ.

-masthmagaa.com

Contact Us for Advertisement

Leave a Reply