ರಾಜ್ಯದಲ್ಲಿ ಯಶಸ್ವಿಯಾಗಿ ಮುಕ್ತಾಯವಾದ ಮೊದಲ ಹಂತದ ಮತದಾನ!

masthmagaa.com:

ರಾಜ್ಯದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆ ಯಶಸ್ವಿಯಾಗಿ ಮುಕ್ತಾಯವಾಗಿದೆ. ರಾಜ್ಯದ 14 ಲೋಕಸಭಾ ಕ್ಷೇತ್ರಗಳು ಸೇರಿದಂತೆ ದೇಶದಲ್ಲಿ ಒಟ್ಟು 13 ರಾಜ್ಯಗಳ 88 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದೆ. ಬೆಳಿಗ್ಗೆ 7ರಿಂದ ಸಂಜೆ 6 ಗಂಟೆಗೆ ಮತದಾನ ಆಗಿದೆ. CM ಸಿದ್ರಾಮಯ್ಯ, DCM ಡಿಕೆ ಶಿವಕುಮಾರ್, ಮಾಜಿ ಪ್ರಧಾನಿ HD ದೇವೇಗೌಡ, R ಅಶೋಕ್‌, HD ಕುಮಾರಸ್ವಾಮಿ ಸೇರಿದಂತೆ ಮುಂತಾದ ನಾಯಕರು ಮತದಾನ ಮಾಡಿದ್ದಾರೆ. ಕೇಜ್ರಿಸ್ಟಾರ್‌ ರವಿಚಂದ್ರನ್‌ , ರಾಕಿಂಗ್‌ ಸ್ಟಾರ್‌ ಯಶ್‌, ಕಿಚ್ಚ ಸುದೀಪ್‌, ಉಪೇಂದ್ರ, ರಚಿತಾ ರಾಮ್‌ ಸೇರಿದಂತೆ ಸ್ಯಾಂಡಲ್‌ವುಡ್‌ನ ನಟ ನಟಿಯರು‌ ಹಲವು ಕ್ಷೇತ್ರದ ಗಣ್ಯರು ತಮ್ಮ ಮತದಾನದ ಹಕ್ಕನ್ನ ಚಲಾವಣೆ ಮಾಡಿದ್ದಾರೆ. ಸಂಜೆ 5ಗಂಟೆತನಕ ಮತದಾನದ ಪ್ರಮಾಣ ಉಡುಪಿ-ಚಿಕ್ಕಮಗಳೂರಲ್ಲಿ- 72.13% ಇತ್ತು. ಹಾಸನದಲ್ಲಿ- 72.13%, ದಕ್ಷಿಣ ಕನ್ನಡ- 71.83%, ಚಿತ್ರದುರ್ಗ- 67%, ತುಮಕೂರು- 72.10%, ಮಂಡ್ಯ- 74.87%, ಮೈಸೂರು- 65.85%, ಚಾಮರಾಜನಗರ- 69.60%, ಬೆಂಗಳೂರು ಗ್ರಾಮಾಂತರ- 61.78%, ಬೆಂಗಳೂರು ಉತ್ತರ- 50.04%, ಬೆಂಗಳೂರು ಕೇಂದ್ರ- 48.61%, ಬೆಂಗಳೂರು ದಕ್ಷಿಣ-49.37%, ಚಿಕ್ಕಬಳ್ಳಾಪುರ- 70.97%, ಕೋಲಾರದಲ್ಲಿ 71.26% ಮತದಾನ ಆಗಿತ್ತು. ಇನ್ನು 14 ಕ್ಷೇತ್ರಗಳಲ್ಲಿ ಸಂಜೆ 5ಗಂಟೆಗೆ ಒಟ್ಟು 63.90% ಮತದಾನ ನಡೆದಿತ್ತು. ಇನ್ನು ಕೇರಳದ ಎಲ್ಲ 20 ಕ್ಷೇತ್ರಗಳಿಗೆ, ರಾಜಸ್ತಾನದ 13, ಮಹಾರಾಷ್ಟ್ರ ಮತ್ತು ಯುಪಿಯ ತಲಾ 8 ಕ್ಷೇತ್ರಗಳಿಗೆ ವೋಟಿಂಗ್‌ ನಡೆದಿದೆ. ಜೊತೆಗೆ ಮಧ್ಯ ಪ್ರದೇಶದ 7, ಬಿಹಾರ ಮತ್ತುಅಸ್ಸಾಂನ ತಲಾ 5, ಛತ್ತೀಸ್‌ಗಢ್‌ ಹಾಗೂ ಪಶ್ಚಿಮ ಬಂಗಾಳದ 3 ಜೊತೆಗೆ ಮಣಿಪುರ, ತ್ರಿಪುರಾ, ಜಮ್ಮು ಮತ್ತು ಕಾಶ್ಮೀರದ ತಲಾ ಒಂದು ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದೆ. ಸಂಜೆ 5ವರೆಗೆ ಛತ್ತೀಸ್‌ಗಢ್‌ದಲ್ಲಿ 72.13 %, ಜಮ್ಮು ಮತ್ತು ಕಾಶ್ಮೀರದಲ್ಲಿ 67.22 %, ಉತ್ತರ ಪ್ರದೇಶದಲ್ಲಿ 52.64%, ಪಶ್ಚಿಮ ಬಂಗಾಳದಲ್ಲಿ 71.84 %, ಮಹಾರಾಷ್ಟ್ರದಲ್ಲಿ 53.51 %, ಕೇರಳದಲ್ಲಿ 63.97% ವೋಟಿಂಗ್‌ ಆಗಿತ್ತು. ಇನ್ನು ರಾಜ್ಯದಲ್ಲಿ ಮತದಾನದ ವೇಳೆ ಚಾಮರಾಜ ನಗರ ಜಿಲ್ಲೆಯ ಇಂಡಿಗನತ್ತ ಗ್ರಾಮದಲ್ಲಿ ಮತದಾನ ಬಹಿಸ್ಕರಿಸಿದ ಗ್ರಾಮಸ್ಥರು, ಮತಗಟ್ಟೆ ಮೇಲೆ ಕಲ್ಲು ತೂರಾಟ ನಡೆಸಿ EVMಗೆ ಹಾನಿ ಮಾಡಿದ್ದಾರೆ. ಇನ್ನು ಮಂಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಬೆಳ್ತಂಗಡಿ ತಾಲೂಕಿನ ಬಾಂಜಾರು ಮಲೆ ಮತಗಟ್ಟೆಯಲ್ಲಿ ನೂರಕ್ಕೆ ನೂರು ಪ್ರತಿಶತದಷ್ಟು ಮತದಾನ ನಡೆದ ದಾಖಲೆ ಬರೆದಿದೆ. ಇನ್ನೊಂದೆಡೆ ಭಾರತದ ಚುನಾವಣೆಗೆ ಗೂಗಲ್‌ ಕೂಡ ಶಾಯಿ ಹಚ್ಚಿದ ಬೆರಳಿದ ಚಿತ್ರವನ್ನ ಹಂಚ್ಕೊಂಡು ಗೂಗಲ್‌ ಡೂಡಲ್‌ನ ಮೂಲಕ ಮತದಾನದ ದಿನವನ್ನ ಸೆಲೆಬ್ರೆಟ್‌ ಮಾಡಿದೆ. ಮತ್ತೊಂದೆಡೆ ಮತದಾನದ ವೇಳೆ ಕರ್ತವ್ಯದಲ್ಲಿದ್ದ ಯೋಧನೊಬ್ಬ ತನ್ನ ಸರ್ವಿಸ್‌ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರೊ ಘಟನೆ ಛತ್ತೀಸ್‌ಗಢ್‌ನ ಪೊಪಾರ್ಚೇಡಿಯಲ್ಲಿ ನಡೆದಿದೆ.

-masthmagaa.com

Contact Us for Advertisement

Leave a Reply