masthmagaa.com: ಆಕ್ಸ್​ಫರ್ಡ್​ ಲಸಿಕೆ ಪ್ರಯೋಗಕ್ಕೆ ಒಳಗಾದ ಚೆನ್ನೈ ಮೂಲದ 40 ವರ್ಷದ ಸ್ವಯಂ ಸೇವಕನೊಬ್ಬ ಲಸಿಕೆಯಿಂದ ತನಗೆ ಅಡ್ಡಪರಿಣಾಮಗಳಾಗಿವೆ ಗಂಭೀರ ಆರೋಪ ಮಾಡಿದ್ದಾನೆ. ಜೊತೆಗೆ ತಕ್ಷಣದಿಂದಲೇ ಲಸಿಕೆಯ ಪ್ರಯೋಗ, ಉತ್ಪಾದನೆ ಮತ್ತು ಪೂರೈಕೆಯನ್ನ ನಿಲ್ಲಿಸಬೇಕು. ತನಗಾದ ಆರೋಗ್ಯ ಸಮಸ್ಯೆಗೆ 5 ಕೋಟಿ ರೂಪಾಯಿ ಪರಿಹಾರ ಕೊಡಬೇಕು ಅಂತ ಬೇಡಿಕೆ ಇಟ್ಟಿದ್ದಾನೆ. ಇದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಸೀರಂ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾ, ‘ಲಸಿಕೆಗೂ ಆತನ ಆರೋಗ್ಯದಲ್ಲಾಗಿರುವ ಏರುಪೇರಿಗೂ ಯಾವುದೇ ಸಂಬಂಧವಿಲ್ಲ. ಆತನ ಆರೋಗ್ಯ ಸಮಸ್ಯೆಗೆ ಕಂಪನಿಯನ್ನ ತಪ್ಪಾಗಿ ಹೊಣೆ ಮಾಡಲಾಗ್ತಿದೆ. ಆತನ ಆರೋಗ್ಯ ಸಮಸ್ಯೆ ಬಗ್ಗೆ ವೈದ್ಯಕೀಯ ತಂಡ ಸ್ಪಷ್ಟನೆ ಕೊಟ್ಟಿದೆ. ಆದರೂ ಆತ ಸಾರ್ವಜನಿಕರ ಮುಂದೆ ಹೋಗಿ ಕಂಪನಿಗೆ ಕೆಟ್ಟ ಹೆಸರನ್ನ ತರುತ್ತಿದ್ದಾನೆ. ಇದು ದುರುದ್ದೇಶದಿಂದ ಕೂಡಿದೆ ಅನ್ನೋದು ಗಮನಕ್ಕೆ ಬಂದಿರೋದ್ರಿಂದ ಆತನಿಂದ 100 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ನಷ್ಟ ಪರಿಹಾರವನ್ನ ಕಂಪನಿ ಬಯಸುತ್ತದೆ’ ಅಂತ ಪ್ರಕಟಣೆ ಹೊರಡಿಸಿದೆ. ಅಂದ್ಹಾಗೆ ಲಸಿಕೆ ಪ್ರಯೋಗಕ್ಕೂ ಮುನ್ನ ಸ್ವಯಂಸೇವಕರಿಂದ ಅಗ್ರೀಮೆಂಟ್​ಗೆ ಸಹಿ ಹಾಕಿಸಿಕೊಳ್ಳಲಾಗುತ್ತೆ. ಇದರ ಪ್ರಕಾರ ಸ್ವಯಂಸೇವಕರ ಆರೋಗ್ಯದಲ್ಲಿ ಏರುಪೇರಾದ್ರೆ ಅದಕ್ಕೆRead More →

masthmagaa.com: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 1,291 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, 15 ಜನ ಮೃತಪಟ್ಟಿದ್ಧಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 8.83 ಲಕ್ಷ ದಾಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 11,765 ಆಗಿದೆ. ಕಳೆದ 24 ಗಂಟೆಯಲ್ಲಿ 1,530 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 8.47 ಲಕ್ಷ ದಾಟಿದೆ. ರಾಜ್ಯದಲ್ಲಿ ಇನ್ನೂ ಕೂಡ 24,503 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದ್ರಲ್ಲಿ 374 ಸೋಂಕಿತರು ತೀವ್ರ ನಿಗಾ ಘಟಕದಲ್ಲಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಕೊರೋನಾ ವೈರಾಣು ಅಧಿಕೃತವಾಗಿ ಮೊದಲು ಕಾಣಿಸಿಕೊಂಡಿದ್ದು ಚೀನಾದ ವುಹಾನ್​ನಲ್ಲಿ. ಆದ್ರೀಗ ತನಗಂಟಿರುವ ಕಳಂಕವನ್ನ ದೂರ ಮಾಡುವ ಉದ್ದೇಶದಿಂದ 2019ರ ಬೇಸಿಗೆಯಲ್ಲೇ ಭಾರತ ಮತ್ತು ಬಾಂಗ್ಲಾದೇಶದಲ್ಲಿ ಕೊರೋನಾ ಹುಟ್ಟಿತ್ತು ಅಂತ ಚೀನಾ ಹೇಳಿದೆ. ಅದು ಹೇಗೆ ಅನ್ನೋದಕ್ಕೆ ಒಂದು ಕಥೆ ಬೇರೆ ಸೃಷ್ಟಿ ಮಾಡಿದೆ. ಹೇಳ್ತೀವಿ ನೋಡಿ.. ನೀರಿಗಾಗಿ ಮಂಗಗಳಂತಹ ವನ್ಯಜೀವಿಗಳು ದೊಡ್ಡದಾಗಿ ಜಗಳ ಮಾಡಿವೆ ಅಂತೆ. ಆಗ ಅದನ್ನ ಬಿಡಿಸಲು ಮನುಷ್ಯ ಮಧ್ಯಪ್ರವೇಶಿಸಿದಾಗ ವೈರಾಣು ಮನುಷ್ಯರಿಗೂ ಅಂಟಿರಬಹುದು ಅಂತ ಚೀನಾ ಹೇಳಿದೆ. ಮಂಗಗಳ ನಡುವೆ ದೊಡ್ಡ ಜಗಳ ಅಂತೆ.. ಅದ್ರಿಂದ ಮನುಷ್ಯರಿಗೆ ಸೋಂಕು ಹರಡಿದೆಯಂತೆ. ಚೀನಾದಲ್ಲಿ ಯಾವ್ದು ಮಂಗಗಳಿಲ್ವಾ, ಅಲ್ಲಿ ಅವುಗಳ ಮಧ್ಯೆ ಜಗಳ ನಡೆಯಲ್ವಾ.. ಈ ವೈರಾಣುವನ್ನ ಚೀನಾನೇ ಲ್ಯಾಬ್​ನಲ್ಲಿ ಸೃಷ್ಟಿಸಿ ಜಗತ್ತಿಗೆಲ್ಲಾ ಹರಡಿಸಿದೆ ಅನ್ನೋ ಒಂದು ವಾದ ಈಗಾಗಲೇ ಇದೆ. ಇದಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ತಂಡ ಚೀನಾಗೆ ಹೋಗಿ ತನಿಖೆ ನಡೆಸಲಿದೆ. ಸೋಂಕು ತಮ್ಮ ದೇಶದಲ್ಲಿ ಹುಟ್ಟಿಲ್ಲ ಅನ್ನೋದನ್ನ ಅವ್ರು ಮೊದಲು ಸಾಬೀತು ಮಾಡಲಿ. ಆಮೇಲೆ ಭಾರತದ ವಿಚಾರಕ್ಕೆ ಬರಲಿ.Read More →

masthmagaa.com ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದ ಕೃಷಿ ಕಾಯ್ದೆಗಳ ವಿರುದ್ಧ ಪಂಜಾಬ್, ಹರಿಯಾಣ, ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ನಿಲ್ಲುವ ಲಕ್ಷಣ ಕಾಣ್ತಿಲ್ಲ. ದೆಹಲಿಯ ಬುರಾರಿ ಕ್ರೀಡಾಂಗಣದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ಪೊಲೀಸರು ಅನುಮತಿ ನೀಡಿದ್ರೂ ಕೂಡ ರೈತರು ಈಗ ಅಲ್ಲಿಗೆ ಹೋಗಲ್ಲ ಅಂತಿದ್ದಾರೆ. ಅದು ಕ್ರೀಡಾಂಗಣವಲ್ಲ, ಓಪನ್ ಜೈಲ್​. ಹೀಗಾಗಿ ಅಲ್ಲಿಗೆ ಹೋಗುವ ಬದಲು ದೆಹಲಿಗೆ ಮುತ್ತಿಗೆ ಹಾಕ್ತೀವಿ. ದೆಹಲಿಯ 5 ಎಂಟ್ರಿ ಪಾಯಿಂಟ್​ಗಳನ್ನ ಬಂದ್ ಮಾಡ್ತೀವಿ. ನಮ್ಮ ಬಳಿ ನಾಲ್ಕೈದು ತಿಂಗಳಿಗಾಗುವಷ್ಟು ರೇಷನ್ ಇದೆ ಅಂತ ರೈತ ಸಂಘಟನೆಗಳು ಎಚ್ಚರಿಕೆ ಕೊಟ್ಟಿವೆ. ಮತ್ತೊಂದುಕಡೆ ರೈತರು ಪ್ರತಿಭಟನೆಯನ್ನ ಕೈಬಿಟ್ಟು ಡಿಸೆಂಬರ್ 3ರಂದು ಮಾತುಕತೆಗೆ ಬರಬೇಕು ಅಂತ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ. ಅತ್ತ ಹರಿಯಾಣ ಮತ್ತು ಪಂಜಾಬ್ ರಾಜ್ಯಗಳ ಸಂಘರ್ಷ ಕೂಡ ಜೋರಾಗಿದೆ. ರೈತರ ಪ್ರತಿಭಟನೆಯಿಂದ ಹರಿಯಾಣದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗಿ ಏನಾದ್ರೂ ಅನಾಹುತವಾದ್ರೆ ಅದಕ್ಕೆ ಪಂಜಾಬ್ ಸರ್ಕಾರವೇ ನೇರ ಹೊಣೆ ಅಂತ ಹರಿಯಾಣ ಸಿಎಂ ಮನೋಹರ್​ಲಾಲ್ ಖಟ್ಟರ್ ಎಚ್ಚರಿಸಿದ್ದಾರೆ.Read More →

masthmagaa.com: ಹೈದ್ರಾಬಾದ್​ನಲ್ಲಿ ರೋಹಿಂಗ್ಯಾಗಳು ಅಕ್ರಮವಾಗಿ ವಾಸಿಸುತ್ತಿದ್ದರೆ ಗೃಹ ಸಚಿವ ಅಮಿತ್ ಶಾ ಏನ್ ಮಾಡ್ತಿದ್ದಾರೆ ಅಂತ ಕೇಳಿದ್ದ AIMIM ಪಕ್ಷದ ಮುಖ್ಯಸ್ಥ ಅಸಾದುದ್ದಿನ್ ಓವೈಸಿಗೆ ಸ್ವತಃ ಅಮಿತ್ ಶಾ ಅವರೇ ಉತ್ತರ ಕೊಟ್ಟಿದ್ದಾರೆ. ಏನ್ ಹೇಳಿದ್ದಾರೆ ಅಂದ್ರೆ, ‘ಅಕ್ರಮ ವಾಸಿಗಳ ವಿರುದ್ಧ ನಾನು ಕ್ರಮ ತೆಗೆದುಕೊಳ್ಳಲು ಮುಂದಾದ್ರೆ ಇವ್ರು ಸಂಸತ್​ನಲ್ಲಿ ಗದ್ದಲ ಎಬ್ಬಿಸಿಬಿಡ್ತಾರೆ. ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾಗಳನ್ನ ಹೊರಹಾಕಬೇಕೆ ಅಂತ ಒವೈಸಿ ಅವರು ಲಿಖಿತ ರೂಪದಲ್ಲಿ ಬರೆದು ಕೊಡಲಿ. ಆಮೇಲೆ ಏನು ಮಾಡಬೇಕು ಮಾಡ್ತೀನಿ. ಸಂಸತ್​ನಲ್ಲಿ ಇದರ ಬಗ್ಗೆ ಚರ್ಚೆ ನಡೆದಾಗ ಇವರ ಪರ ವಹಿಸಿ ಮಾತನಾಡೋದು ಯಾರು ಅಂತ ಇಡೀ ದೇಶಕ್ಕೆ ಗೊತ್ತು. ದೇಶದ ಜನ ಟಿವೀಲಿ ಲೈವ್ ನೋಡಿದ್ದಾರೆ’ ಅಂತ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಅಂದ್ಹಾಗೆ ಗ್ರೇಟರ್ ಹೈದ್ರಾಬಾದ್​ ಮುನಿಸಿಪಲ್ ಕಾರ್ಪೊರೇಷನ್​ (GHMC) ಚುನಾವಣೆಗೆ ಸಂಬಂಧಿಸಿದಂತೆ ಇವತ್ತು ಅಮಿತ್ ಶಾ ರೋಡ್ ಶೋ ನಡೆಸಿದ್ರು. ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ಹೈದ್ರಾಬಾದ್​ ನಗರಕ್ಕೆ ನಿಜಾಮ ಸಂಸ್ಕೃತಿಯಿಂದ ಮುಕ್ತಿ ನೀಡುತ್ತೇವೆ. ಪ್ರಜಾಪ್ರಭುತ್ವ ತತ್ವಗಳುಳ್ಳ ಹೊಸRead More →

masthmagaa.com: ಉತ್ತರಪ್ರದೇಶದಲ್ಲಿ ‘ಲವ್​ ಜಿಹಾದ್​’ ತಡೆ ಕಾನೂನು ಜಾರಿಗೆ ಬಂದ ಮರುದಿನವೇ ಮೊದಲ ಕೇಸ್ ದಾಖಲಾಗಿದೆ. ಕೇವಲ ಉತ್ತರಪ್ರದೇಶ ಮಾತ್ರವಲ್ಲ ದೇಶದಲ್ಲಿ ದಾಖಲಾದ ಮೊದಲ ಕೇಸ್ ಇದಾಗಿದೆ. ಯುವತಿಯನ್ನ ಬಲವಂತವಾಗಿ ಮತ್ತು ಹೆದರಿಸಿ ಬೆದರಿಸಿ ಮತಾಂತರ ಮಾಡಲು ಯತ್ನಿಸಿದ ಆರೋಪದಡಿ ಉಬೈಸ್​ ಎಂಬುವವನ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಉತ್ತರಪ್ರದೇಶದ ಬರೇಲಿಯಲ್ಲಿ ಈ ಘಟನೆ ನಡೆದಿದೆ. ಸದ್ಯ ಆರೋಪಿಯು ಮನೆಯಿಂದ ಓಡಿ ಹೋಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಅಂದ್ಹಾಗೆ ಲವ್ ಜಿಹಾದ್ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಗೆ ನಿನ್ನೆಯಷ್ಟೇ ರಾಜ್ಯಪಾಲೆ ಆನಂದಿ ಬೇನ್ ಪಟೇಲ್ ಸಹಿ ಹಾಕಿದ್ದರು. ಇದರ ಪೂರ್ತಿ ಹೆಸರು, ‘ಉತ್ತರಪ್ರದೇಶ ಪ್ರೊಹಿಬಿಷನ್ ಆಫ್ ಅನ್​ಲಾಫುಲ್​​ ಕನ್ವರ್ಷನ್​​ ಆಫ್ ರಿಲೀಜಿಯನ್ ಆರ್ಡಿನೆನ್ಸ್​​-2020’ ಅಂತ. ಇದರ ಪ್ರಕಾರ ಬಲವಂತವಾಗಿ ಮತಾಂತರ ಮಾಡಿದ್ರೆ 1ರಿಂದ 10 ವರ್ಷ ಜೈಲು ಶಿಕ್ಷೆ ಮತ್ತು 15 ಸಾವಿರ ರೂಪಾಯಿ ದಂಡ ವಿಧಿಸಬಹುದು. ಅದೇ ಎಸ್​ಸಿ-ಎಸ್​​ಟಿ ಸಮುದಾಯದ ಅಪ್ರಾಪ್ತ ಬಾಲಕಿಯರು ಮತ್ತು ಮಹಿಳೆಯರನ್ನ ಮತಾಂತರ ಮಾಡಿದ್ರೆ 1ರಿಂದ 10 ವರ್ಷ ಜೈಲುRead More →

masthmagaa.com: ಸೋಂಕಿತ ಗರ್ಭಿಣಿಯಿಂದ ಮಗುವಿಗೆ ಕೊರೋನಾ ಸೋಂಕು ಹರಡುತ್ತಾ ಅನ್ನೋದು ಇದುವರೆಗೆ ದೃಢಪಟ್ಟಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಇದನ್ನೇ ಹೇಳ್ತಾ ಬರ್ತಿದೆ. ಆದ್ರೆ ಸಿಂಗಾಪುರ್​ನಲ್ಲಿ ಸೋಂಕಿತ ಮಹಿಳೆ ಜನ್ಮ ನೀಡಿದ ಮಗುವಿನಲ್ಲಿ ಕೊರೋನಾ ವಿರುದ್ಧ ಪ್ರತಿಕಾಯಗಳು (Antibodies) ಕಂಡುಬಂದಿವೆ. ಮಗುವಿನ ದೇಹದಲ್ಲಿ ಕೊರೋನಾ ವಿರುದ್ಧ ಶಕ್ತಿಯೇನೋ ರೂಪುಗೊಂಡಿದೆ. ಆದ್ರೆ ಕೊರೋನಾ ವಿರುದ್ಧ ಹೋರಾಡುವ ಪ್ರತಿಕಾಯಗಳು ರೂಪುಗೊಳ್ಳಬೇಕು ಅಂದ್ರೆ ಅವರಿಗೆ ಸೋಂಕು ತಗುಲಬೇಕು. ಹೀಗಾಗಿ ಸೋಂಕಿತ ಗರ್ಭಿಣಿಯಿಂದ ಮಗುವಿಗೂ ಕೊರೋನಾ ಸೋಂಕು ಹರಡುತ್ತಾ ಅನ್ನೋ ಅನುಮಾನ ಮತ್ತಷ್ಟು ಗಟ್ಟಿಯಾಗಿದೆ. ಅಂದ್ಹಾಗೆ ಈ ಗರ್ಭಿಣಿಗೆ ಮಾರ್ಚ್​ ಟೈಮಲ್ಲಿ ಕೊರೋನಾ ಸೋಂಕು ದೃಢಪಟ್ಟಿತ್ತು. ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಅವರು ಎರಡು ವಾರಗಳ ಬಳಿಕ ಡಿಸ್ಚಾರ್ಜ್ ಆಗಿದ್ದರು. ಇದೀಗ ಅವರು ಜನ್ಮಕೊಟ್ಟ ಗಂಡು ಮಗುವಿನ ದೇಹದಲ್ಲಿ ಕೊರೋನಾ ವಿರುದ್ಧ ಪ್ರತಿಕಾಯಗಳು ಸೃಷ್ಟಿಯಾಗಿವೆ. ‘ಗರ್ಭಾವಸ್ಥೆಯಲ್ಲೇ ಕೊರೋನಾ ವಿರುದ್ಧ ನನ್ನ ದೇಹದಲ್ಲಿದ್ದ ಪ್ರತಿಕಾಯಗಳನ್ನ ಮಗುವಿಗೂ ಟ್ರಾನ್ಸ್​ಫರ್​ ಮಾಡಿದ್ದೇನೆ ಅಂತ ವೈದ್ಯರು ಅನುಮಾನ ವ್ಯಕ್ತಡಿಸಿದ್ದಾರೆ’ ಅಂತ ಮಹಿಳೆ ಹೇಳಿದ್ದಾರೆ. ಗರ್ಭಾವಸ್ಥೆ ಅಥವಾ ಡೆಲಿವರಿ ಸಮಯದಲ್ಲಿ ಗರ್ಭಿಣಿಯು ತನ್ನRead More →

masthmagaa.com: ಕೊರೋನಾ ವೈರಸ್​ಗೆ ಲಸಿಕೆ ಬಂದ ಬಳಿಕವೂ ಮಾಸ್ಕ್ ಧರಿಸುವುದು ಸೇರಿದಂತೆ ಹಲವು ಮುಂಜಾಗ್ರತಾ ಕ್ರಮಗಳು ದೀರ್ಘಾವಧಿವರೆಗೆ ಮುಂದುವರಿಯಲಿದೆ ಅಂತ ಐಸಿಎಂಆರ್ ಪ್ರಧಾನ ನಿರ್ದೇಶಕ ಬಲ್ರಾಮ್ ಭಾರ್ಗವ ಹೇಳಿದ್ದಾರೆ. ಮಾಸ್ಕ್ ಅನ್ನೋದು ಬಟ್ಟೆಯ ಲಸಿಕೆ ಇದ್ದಂತೆ. ಕೊರೋನಾ ಹರಡುವುದನ್ನ ತಡೆಯುವುದರಲ್ಲಿ ಮಾಸ್ಕ್ ನೀಡಿದ ಕೊಡುಗೆಯನ್ನ ಮರೆಯಲು ಸಾಧ್ಯವಿಲ್ಲ. ಭಾರತದಲ್ಲಿ ಒಟ್ಟು 5 ಲಸಿಕೆಗಳ ಮಾನವ ಪ್ರಯೋಗ ನಡೆಯುತ್ತಿದೆ. ಎರಡು ಲಸಿಕೆಗಳನ್ನ ಭಾರತವೇ ಅಭಿವೃದ್ಧಿಪಡಿಸುತ್ತಿದ್ದು, ಮೂರು ಲಸಿಕೆಗಳು ಬೇರೆ ದೇಶದ್ದಾಗಿದೆ. ಆದ್ರೆ ಕೋರೊನಾವನ್ನ ಕೊನೆಗಾಣಿಸಲು ಲಸಿಕೆಯಿಂದ ಮಾತ್ರ ಸಾಧ್ಯವಿಲ್ಲ. ಹೀಗಾಗಿ ನಾವು ಮುಂಜಾಗ್ರತಾ ಕ್ರಮಗಳನ್ನ ಪಾಲಿಸಲೇಬೇಕು ಅಂತ ಅವರು ಹೇಳಿದ್ದಾರೆ. ಜೊತೆಗೆ ಕೊರೋನಾ ಬಂದು ಗುಣಮುಖರಾದವರನ್ನ ಕೂಡ ಮಾಸ್ಕ್ ರಕ್ಷಿಸುತ್ತೆ ಅಂತ ಬಲ್ರಾಮ್ ಭಾರ್ಗವ ಹೇಳಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 41,810 ಜನರಿಗೆ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದ್ದು, 496 ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 93.92 ಲಕ್ಷ ದಾಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 1,36,696 ಆಗಿದೆ. ಕಳೆದ 24 ಗಂಟೆಗಳಲ್ಲಿ 42,000+ ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 88.02 ಲಕ್ಷ ದಾಟಿದೆ. ದೇಶದಲ್ಲಿ ಇನ್ನೂ ಕೂಡ 4.53 ಲಕ್ಷ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾರತದಲ್ಲಿ ಗುಣಮುಖ ಪ್ರಮಾಣ 93.71%ಗೆ ಏರಿಕೆಯಾಗಿದ್ದು, ಸಾವಿನ ಪ್ರಮಾಣ 1.46% ರಷ್ಟಿದೆ. ನವೆಂಬರ್‌ 28ರಂದು 12.83 ಲಕ್ಷ ಕೊರೋನಾ ಪರೀಕ್ಷೆಗಳನ್ನ ನಡೆಸಲಾಗಿದ್ದು, ಇದುವರೆಗೆ ಒಟ್ಟು 13.95 ಕೋಟಿ ಟೆಸ್ಟ್​ಗಳನ್ನ ನಡೆಸಿದಂತಾಗಿದೆ. -masthmagaa.com     Share on: WhatsAppContact Us for AdvertisementRead More →

masthmagaa.com: ಭಾರತದಿಂದ ಕೆನಾಡಕ್ಕೆ 107 ವರ್ಷಗಳ ಹಿಂದೆ ಕಳ್ಳಸಾಗಣೆ ಮಾಡಿದ್ದ ಅನ್ನಪೂರ್ಣ ದೇವಿಯ ಮೂರ್ತಿಯನ್ನ ಭಾರತಕ್ಕೆ ವಾಪಸ್ ತರಲಾಗುತ್ತಿದೆ ಅಂತ ಪ್ರಧಾನಿ ಮೋದಿ ಹೇಳಿದ್ದಾರೆ. ಮನ್​ ಕಿ ಬಾತ್​ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ‘ಈ ಮೂರ್ತಿಯನ್ನ 1913ರಲ್ಲಿ ವಾರಣಾಸಿಯ ದೇವಸ್ಥಾನವೊಂದರಿಂದ ಕಳ್ಳತನ ಮಾಡಲಾಗಿತ್ತು. ಬಳಿಕ ಅದನ್ನ ಹೊರ ದೇಶಕ್ಕೆ ಕಳ್ಳಸಾಗಣೆ ಮಾಡಲಾಗಿತ್ತು. ಅದನ್ನೀಗ ಕೆನಡಾದಿಂದ ಭಾರತಕ್ಕೆ ವಾಪಸ್ ತರುವ ಪ್ರಕ್ರಿಯೆ ನಡೀತಿದೆ’ ಹೇಳಿದ್ರು. ಇನ್ನು ನೂತನ ಕೃಷಿ ಕಾಯ್ದೆಗಳ ಬಗ್ಗೆ ಮಾತನಾಡಿದ ಪ್ರಧಾನಿ, ‘ಈ ಕಾಯ್ದೆಗಳು ರೈತರಿಗೆ ಹೊಸ ಹಕ್ಕು ಮತ್ತು ಅವಕಾಶಗಳನ್ನ ನೀಡಿದೆ. ಕೊರೋನಾ ವೈರಸ್​​ ಸಾಂಕ್ರಾಮಿಕ ಕಾಲದಲ್ಲಿ ಸಿಖ್ ಸಮುದಾಯವು ಜನರಿಗೆ ಆಹಾರ ನೀಡುವ ಸಂಪ್ರದಾಯವನ್ನು ಹೇಗೆ ಮುಂದುವರಿಸಿದೆ ಅನ್ನೋದನ್ನ ನಾವು ನೋಡಿದ್ದೇವೆ’ ಅಂತ ಹೇಳಿದ್ರು. ಪಂಜಾಬ್, ಹರಿಯಾಣ, ದೆಹಲಿಯಲ್ಲಿ ರೈತರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲೇ ಪ್ರಧಾನಿ ಮೋದಿ ಈ ರೀತಿ ಹೇಳಿದ್ದಾರೆ. -masthmagaa.com Share on: WhatsAppContact Us for AdvertisementRead More →