ಎನ್‌ಕ್ರಿಪ್ಶನ್‌ ವ್ಯವಸ್ಥೆಗೆ ಧಕ್ಕೆಯಾದ್ರೆ ಭಾರತ ಬಿಡ್ತೇವೆ: WhatsApp

masthmagaa.com:

WhatsAppನ ಎನ್‌ಕ್ರಿಪ್ಶನ್‌ ವ್ಯವಸ್ಥೆಗೆ ಧಕ್ಕೆಯಾದ್ರೆ ನಾವು ಭಾರತ ತೊರೆಯುತ್ತೇವೆ ಅಂತೇಳಿ ದಿಲ್ಲಿ ಹೈಕೋರ್ಟ್‌ಗೆ WhatsApp ಪರ ವಕೀಲರು ತಿಳಿಸಿದ್ದಾರೆ. ಸೋಶಿಯಲ್‌ ಮೀಡಿಯಾಗೆ ಸಂಬಂಧಿಸಿದಂತೆ 2021ರ ಮಾಹಿತಿ ಮತ್ತು ತಂತ್ರಜ್ಞಾನ ನಿಯಮದಡಿ WhatsApp ಹಾಗೂ ಅದ್ರ ಮಾತೃ ಸಂಸ್ಥೆ ಮೆಟಾ ಕಂಪನಿಯನ್ನ ದಿಲ್ಲಿ ಹೈಕೋರ್ಟ್‌ ವಿಚಾರಣೆ ನಡೆಸಿದೆ. ಈ ವೇಳೆ ಕೋರ್ಟ್‌ಗೆ ಹಾಜರಾದ ವಾಟ್ಸ್‌ಆ್ಯಪ್‌ ಪರ ವಕೀಲ ತೇಜಸ್‌ ಕಾರಿಯಾ, ವಾಟ್ಸ್‌ಆ್ಯಪ್‌ನ ಎಂಡ್-ಟು-ಎಂಡ್‌ ಎನ್‌ಕ್ರಿಪ್ಶನ್‌ ಯಾವುದೇ ವ್ಯಕ್ತಿ ಇನ್ನೊಬ್ಬರಿಗೆ ಕಳುಹಿಸೊ ಮೆಸೇಜ್‌ನ್ನ ಬೇರೆಯವ್ರು ನೋಡಲು ಆಗದಿರೊ ಸುರಕ್ಷತಾ ವ್ಯವಸ್ಥೆ ಹೊಂದಿದೆ. ಈ ವ್ಯವಸ್ಥೆಗೆ ಧಕ್ಕೆಯಾದರೆ ನಾವು ಭಾರತದಿಂದಲೇ ಹೊರಹೋಗುತ್ತೇವೆ. ಜನರು ತಾವು ಕಳುಹಿಸಿದ ಮೆಸೇಜ್‌ನ್ನ ಬೇರೆಯವ್ರು ಓದೊದಿಲ್ಲ, ಖಾಸಗಿತನಕ್ಕೆ ಧಕ್ಕೆಯಾಗೊದಿಲ್ಲ ಅಂತೇಳಿ WhatsAppನ್ನ ಬಳಸ್ತಾರೆ. ಹಾಗಾಗಿ, ಎನ್‌ಕ್ರಿಪ್ಶನ್‌ಗೆ ಧಕ್ಕೆಯಾದರೆ ನಾವು ಭಾರತದಲ್ಲಿ ಮುಂದುವರಿಯೊದಿಲ್ಲ ಅಂತ WhatsApp ಪರ ವಕೀಲರು ದಿಲ್ಲಿ ಹೈಕೋರ್ಟ್‌ಗೆ ತಿಳಿಸಿದ್ದಾರೆ. ಅಂದ್ಹಾಗೆ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇರಿಸಲು ಕೇಂದ್ರ ಸರ್ಕಾರ 2021ರಲ್ಲಿ IT ವಿಭಾಗದಲ್ಲಿ ಕೆಲ ನಿಯಮಗಳನ್ನ ಜಾರಿ ತಂದಿತ್ತು. ಅದನ್ನ ಪ್ರಶ್ನಿಸಿ ವಾಟ್ಸ್‌ಆ್ಯಪ್‌ ದಿಲ್ಲಿ ಹೈಕೋರ್ಟ್‌ ಮೊರೆ ಹೋಗಿತ್ತು. ಇದೀಗ ಅರ್ಜಿಯ ವಿಚಾರಣೆ ವೇಳೆ ಅದ್ರ ವಕೀಲರು ಕೋರ್ಟ್‌ಗೆ ಈ ರೀತಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply