ಷೇರುಪೇಟೆ: ಅಮೆರಿಕದ ಆರ್ಥಿಕತೆಯಿಂದ ಷೇರುಪೇಟೆ ಕುಸಿತ

masthmagaa.com:

ಸತತ ಐದು ದಿನಗಳ ಕಾಲ ಜಿಂಕೆ ಹಾಗೇ ಜಿಗಿದ ಭಾರತದ ಷೇರುಮಾರುಕಟ್ಟೆ ಇಂದು… ತನ್ನ ಟ್ರೆಂಡ್‌ಗೆ ಬ್ರೇಕ್‌ ಹಾಕಿದೆ. ಜಾಗತಿಕ ಮಾರುಕಟ್ಟೆ… ಪ್ರಮುಖವಾಗಿ ಅಮೆರಿಕದ ಮಾರುಕಟ್ಟೆಯಿಂದ ಭಾರತದ ಷೇರುಮಾರುಕಟ್ಟೆಗೆ ಪೆಟ್ಟು ಬಿದ್ದಿದೆ. ಮಾರ್ಚ್‌ ತ್ರೈಮಾಸಿಕದಲ್ಲಿ ಅಮೆರಿಕದ ಆರ್ಥಿಕತೆ ನೀರಸ ಬೆಳವಣಿಗೆ ತೋರಿಸಿತ್ತು. ಇದ್ರಿಂದ ಹಣದುಬ್ಬರ ಹೆಚ್ಚಾಗಿ, ಅಮೆರಿಕದ ಸೆಂಟ್ರಲ್‌ ಬ್ಯಾಂಕ್‌ ಮೇಲಿನ ಭರವಸೆ ಕುಂಟಿತವಾಗಿದೆ. ಪರಿಣಾಮ ವಾರಾಂತ್ಯದ ವಹಿವಾಟಿನಲ್ಲಿ ನಷ್ಟ ಮಾಡ್ಕೊಂಡು ಕೆಂಪು ಪಟ್ಟಿಗೆ ಇಳಿದಿದೆ. ವಾರದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್‌ 609 ಪಾಯಿಂಟ್ಸ್‌ ಕಡಿಮೆಯಾಗಿ 73,730.16ಕ್ಕೆ ತಲುಪ್ತು. ಇನ್ನು ನಿಫ್ಟಿ 150 ಪಾಯಿಂಟ್ಸ್‌ ಕಳೆದುಕೊಂಡು 22,419.95ಕ್ಕೆ ಇಳಿಕೆಯಾಯ್ತು. ಇನ್ನು ಡಾಲರ್ ಮುಂದೆ ರೂಪಾಯಿ ಮೌಲ್ಯ 5 ಪೈಸೆ ಕಡಿಮೆಯಾಗಿ 83.38 ಆಗಿದೆ. (83 ರೂಪಾಯಿ 38 ಪೈಸೆ).

-masthmagaa.com

Contact Us for Advertisement

Leave a Reply