ಪಶ್ಚಿಮ ಬಂಗಾಳದಲ್ಲಿ TMC ವಿರುದ್ದ ಪ್ರಧಾನಿ ಮೋದಿ ವಾಗ್ದಾಳಿ

masthmagaa.com:

ʻಕಾಂಗ್ರೆಸ್‌ನವ್ರು ಜನರ ಮೇಲೆ ಪಿತ್ರಾರ್ಜಿತ ತೆರಿಗೆ ಹೇರಿ, ಜನರ ಜೀವನ ಹಾಳು ಮಾಡ್ತಾರೆʼ ಅಂತ ಪ್ರಧಾನಿ ಮೋದಿ ಮತ್ತೆ ಆರೋಪಿಸಿದ್ದಾರೆ. ಪಶ್ಚಿಮ ಬಂಗಾಳದ ಚುನಾವಣಾ ರ್ಯಾಲಿಯಲ್ಲಿ ಮಾತಾಡುವಾಗ ಈ ರೀತಿ ಹೇಳಿದ್ದಾರೆ. ಜೊತೆಗೆ ಟಿಎಂಸಿ ಬಂಗಾಳದ ಯುವ ಜನರ ಜೀವನದ ಜೊತೆ ಆಟವಾಡಿದೆ. ಜಾಬ್‌ ಕೊಡ್ತೀವಿ ಅಂತ ನೇಮಕಾತಿ ಹಗರಣ ನಡೆಸಿ ಸುಮಾರು 26,000 ಜನರ ಜೀವನವನ್ನ ಕಸಿದುಕೊಂಡಿದ್ದಾರೆ. ಲೋನ್‌ ಮಾಡಿ… TMC ಗೆ ಹಣ ಕೊಟ್ಟ ಜನರು ಈಗ ರೋಡಿಗೆ ಬಂದಿದ್ದಾರೆ ಅಂತ ಮೋದಿ ಆಕ್ರೊಶ ಹೊರಹಾಕಿದ್ದಾರೆ. ಜೊತೆಗೆ ಬಿಜೆಪಿ ಸರ್ಕಾರ ತ್ರಿಬಲ್ ತಲಾಖ್‌ ಬ್ಯಾನ್‌ ಮಾಡಿದಾಗ ಅದನ್ನ ಕೂಡ TMC ವಿರೋಧಿಸಿತ್ತು. ಸಂದೇಶ್‌ಖಲಿನಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಸೋಕೂ TMC ಸಪೋರ್ಟ್‌ ನೀಡಿದೆ. TMC ಪುನಃ ಅಧಿಕಾರಕ್ಕೆ ಬಂದ್ರೆ CAA ಜಾರಿಗೆ ತರೋದನ್ನ ನಿಲ್ಲಿಸ್ತೀವಿ ಅಂತೇಳಿದ್ದಾರೆ ಅಂತ ಮಮತಾ ಬ್ಯಾನರ್ಜಿ ವಿರುದ್ದ ಮೋದಿ ಕಿಡಿಕಾರಿದ್ದಾರೆ. ಮತ್ತೊಂದು ಕಡೆ ಪಶ್ಚಿಮ ಬಂಗಾಳದ ಸಂದೇಶ್‌ಖಲಿಯಲ್ಲಿ ಇಡಿ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ CBI ಅಧಿಕಾರಿಗಳು ತನಿಖೆ ಶುರು ಮಾಡಿದ್ದಾರೆ. ಈ ವೇಳೆ ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ಸ್ಪೋಟಕಗಳನ್ನ ಪತ್ತೆಹಚ್ಚಿರೋದಾಗಿ ಅಧಿಕಾರಿಗಳು ಹೇಳ್ಕೊಂಡಿದ್ದಾರೆ. ಇನ್ನು ಸಂದೇಶ್‌ಖಲಿಯಲ್ಲಿ CBI ತನಿಖೆ ವಿರೋಧಿಸಿ ಪಶ್ಚಿಮ ಬಂಗಾಳದ ಸರ್ಕಾರ ಇದೀಗ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಏಪ್ರಿಲ್‌ 10ರಂದು ಕಲ್ಕತ್ತಾ ಹೈಕೋರ್ಟ್‌ ಸಂದೇಶ್‌ಖಲಿ ಪ್ರಕರಣದ ತನಿಖೆ ನಡೆಸಲು CBIಗೆ ನೀಡಿರೋ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಏಪ್ರಿಲ್‌ 29ರಂದು ಸುಪ್ರೀಂ ಕೋರ್ಟ್‌ ಈ ಕೇಸ್‌ ವಿಚಾರಣೆ ನಡೆಸಲಿದೆ.

-masthmagaa.com

Contact Us for Advertisement

Leave a Reply