ನೇಹಾ ಹತ್ಯೆ ಕೇಸ್:‌ 6 ದಿನ ಸಿಐಡಿ ಕಸ್ಟಡಿಗೆ ಆರೋಪಿ ಫಯಾಜ್!

masthmagaa.com:

ರಾಜ್ಯದಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿರೋ ಹುಬ್ಬಳಿಯ ನೇಹಾ ಹತ್ಯೆ ಕೇಸಲ್ಲಿ ಒಂದಷ್ಟು ಬೆಳವಣಿಗೆಗಳು ಆಗಿವೆ. ಘಟನೆ ನಡೆದ ಬಿವಿಬಿ ಕಾಲೇಜಿನ ಬಳಿ ಸ್ಥಳಮಹಜರು ಮಾಡಲಾಗಿದೆ. ಇನ್ನು ಫಯಾಜ್‌ನ್ನ 6ದಿನ ಸಿಐಡಿ ಕಸ್ಟಡಿಗೆ ನೀಡಿ ಹುಬ್ಬಳಿ-ಧಾರವಾಡ 1ನೇ JMFC ಕೋರ್ಟ್‌ ಆದೇಶ ನೀಡಿದೆ. ಇನ್ನು ನೇಹಾ ಹತ್ಯೆ ಘಟನೆ ಖಂಡಿಸಿ ಪ್ರತಿಭಟನೆಗಳು ಮುಂದುವರೆದಿವೆ. ಕಾಂಗ್ರೆಸ್‌ ಬಳಿಕ ಈಗ ಅದ್ರ ಅಂಗ ಸಂಸ್ಥೆ ಅಂತ ಗುರುತಿಸಿಕೊಂಡಿರೊ NSUI ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ ನಡೆಸಿದೆ. ಆರೋಪಿ ಫಯಾಜ್‌ನನ್ನ ಗಲ್ಲಿಗೇರಿಸ್ಬೇಕು ಅಂತೇಳಿ ಹತ್ಯೆ ನಡೆದ ಬಿವಿಬಿ ಕಾಲೇಜಿನ ಎದುರೇ ಬೃಹತ್‌ ಪ್ರತಿಭಟನೆ ನಡೆಸಿದೆ. ಮತ್ತೊಂದು ಕಡೆ ಆರೋಪಿ ಫಯಾಜ್‌ನ ವಿಚಾರಣೆ ನಡೆಸ್ತಿರೊ ವೇಳೆ ಸ್ಪೋಟಕ ಅಂಶಗಳು ಬಹಿರಂಗವಾಗಿವೆ. ನೇಹಾಳನ್ನ ಹತ್ಯೆ ಮಾಡೊಕ್ಕಿಂತ ಐದು ದಿನ ಮುಂಚೆಯೇ ಫಯಾಜ್‌ ಧಾರವಾಡದಲ್ಲಿ ಚಾಕುವನ್ನ ಖರೀದಿಸಿ ತನ್ನ ಬಳಿ ಬ್ಯಾಗ್‌ನಲ್ಲಿ ಇಟ್ಕೊಂಡಿದ್ದ. ಹಾಗೇ ಹತ್ಯೆಗೆ ಪಕ್ಕಾ ಪ್ಲ್ಯಾನ್‌ ಮಾಡಿದ್ದ ಅಂತ ಗೊತ್ತಾಗಿದೆ. ಜೊತೆಗೆ ಹತ್ಯೆ ನಡೆದ ದಿನವೇ ನೇಹಾಳ ಚಲನವಲನವನ್ನ ಪ್ರತಿದಿನ ಗಮನಿಸ್ತಿದ್ದ. ನೇಹಾ ನನ್ನ ಬಿಟ್ಟು ಬೇರೆ ಯಾರಿಗೂ ಸಿಗ್ಬಾರ್ದು ಅನ್ನೊ ಮೆಂಟಾಲಿಟಿ ಹೊಂದಿ ನೇಹಾಳನ್ನ ಹತ್ಯೆ ಮಾಡಿದ್ದಾಗಿ ಫಯಾಜ್ ವಿಚಾರಣೆ ವೇಳೆ ಹೇಳ್ಕೊಂಡಿದ್ದಾನೆ ಅಂತ ಮಾಹಿತಿ ಲಭ್ಯವಾಗಿದೆ. ಜೊತೆಗೆ ಏಪ್ರಿಲ್‌ 18ರಂದು ನೇಹಾ ಪರೀಕ್ಷೆ ಬರಿಯೋಕೆ ಬರೋದನ್ನ ಕಾಯ್ತಿದ್ದ ಫಯಾಜ್‌, ಪಾರ್ಕಿಂಗ್‌ನಲ್ಲಿ ಬೈಕ್‌ ಹ್ಯಾಂಡಲ್‌ನ ಲಾಕ್‌ ಮಾಡ್ದೇ ಆ ದಿನ ಕೊಲೆ ಮಾಡಿ ತಕ್ಷಣವೇ ಬೈಕ್‌ನಲ್ಲಿ ಎಸ್ಕೇಪ್‌ ಆಗಲು ಪ್ಲ್ಯಾನ್‌ ಮಾಡ್ಕೊಂಡಿದ್ದ ಅಂತ ಖುದ್ದು ಅವನೇ ಬಾಯ್ಬಿಟ್ಟಿದ್ದಾನೆ.

-masthmagaa.com

Contact Us for Advertisement

Leave a Reply