ರಷ್ಯಾ: ಸೇನಾ ಬಲ ಹೆಚ್ಚಿಸಲು ರಷ್ಯಾದ ಮಹಿಳಾ ಖೈದಿಯರಿಗೆ ಮನವಿ!

masthmagaa.com:

ಯುಕ್ರೇನ್‌ ವಿರುದ್ಧದ ಹೋರಾಟದಲ್ಲಿ ಆದಷ್ಟು ತನ್ನ ಸೇನೆಯನ್ನ ಬಲಪಡಿಸೋ ಬಗ್ಗೆ ಯೋಚಿಸೋ ರಷ್ಯಾ ಈ ಹಿಂದೆ ನಾನಾ ರೀತಿ ಕ್ರಮಗಳಿಗೆ ಕೈಹಾಕಿತ್ತು. ಇದೀಗ ತನ್ನ ಸೇನೆಯಲ್ಲಿ ಹೆಚ್ಚೆಚ್ಚು ಮಹಿಳೆಯರನ್ನ ಸೇರಿಸಿಕೊಳ್ಳೋಕೆ ರಷ್ಯಾ ಯೋಜಿಸಿದೆ. ಅದಕ್ಕಾಗಿ ರಷ್ಯಾ ಸೇನೆ ಇದೀಗ ಅಲ್ಲಿನ ಜೈಲಿನಲ್ಲಿರೋ ಮಹಿಳಾ ಖೈದಿಯರ ಬಳಿ ಮನವಿ ಮಾಡ್ಕೊಂಡಿದೆ. ಜೊತೆಗೆ…ರಷ್ಯಾ ಸೇನೆಗೆ ಸೇರ್ಕೊಂಡ್ರೆ ನಿಮಗೆ ಜೈಲಿಂದ ಮುಕ್ತಿ ನೀಡ್ತಿವಿ ಹಾಗೂ ರಾಷ್ಟ್ರೀಯ ಮಿನಿಮಮ್‌ ಸ್ಯಾಲರಿಗಿಂತ ಹತ್ತು ಪಟ್ಟು ಜಾಸ್ತಿ ಸ್ಯಾಲರಿ ನೀಡ್ತೀವಿ. ತಿಂಗಳಿಗೆ 2000 ಡಾಲರ್‌… ಅಂದ್ರೆ 1.6 ಲಕ್ಷ ರೂಪಾಯಿ ನೀಡ್ತೀವಿ ಅಂತ ಆಫರ್‌ ಇಟ್ಟಿದ್ದಾರೆ.

-masthmagaa.com

Contact Us for Advertisement

Leave a Reply