ಅಮಿತ್‌ ಶಾ ಜೊತೆ HDK ಚರ್ಚೆ! JDSನಿಂದ ರೇವಣ್ಣ ಉಚ್ಚಾಟನೆ?

masthmagaa.com:

ದೇಶದಲ್ಲಿ ಅತಿದೊಡ್ಡ ಲೈಂಗಿಕ ಹಗರಣ ಅಂತ ಸುದ್ದಿಯಾಗ್ತಿರೋ ಪ್ರಜ್ವಲ್‌ ರೇವಣ್ಣ ಪೆನ್‌ ಡ್ರೈವ್‌ ಕೇಸ್‌ ಹಾಗು ಸಂತ್ರಸ್ಥೆ ಅಪಹರಣ ಕೇಸ್‌ಗಳಲ್ಲಿ ಭಾನುವಾರ ಹಲವು ಬೆಳವಣಿಗೆಗಳಾಗಿವೆ. ನಿನ್ನೆ ರಾತ್ರಿ SIT ಸೆಲ್‌ನಲ್ಲೇ ಇದ್ದ ಹೊಳೆನರಸೀಪುರ ಶಾಸಕ, ಆರೋಪಿ ರೇವಣ್ಣರನ್ನ ಇಂದು ಮತ್ತೆ ಮೆಡಿಕಲ್‌ ಚೆಕಪ್‌ ಮಾಡಿಸಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ಗೂ ಹಾಜರು ಪಡಿಸಲಾಗಿದೆ. ಇನ್ನೊಂದ್‌ ಕಡೆ ಪುತ್ರ, ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಕೂಡ ಫ್ಲೈಟ್‌ ಹತ್ತಿ ವಕೀಲರ ಸಲಹೆ ಮೇಲೆಗೆ ಬೆಂಗಳೂರಿಗೆ ಹೊರಟಿದ್ದಾರೆ ಅನ್ನೋ ಮಾಹಿತಿ ಬಂದಿದೆ. CBI ನೀಡಿದ್ದ ಬ್ಲೂ ಕಾರ್ನರ್‌ ನೋಟಿಸ್‌ನಿಂದಾಗಿ ಎಲ್ಲಾ ಪ್ರಕ್ರಿಯೆಗಳಿಗೆ ವೇಗ ಸಿಕ್ಕಿ, ಪ್ರಜ್ವಲ್‌ ಇಂದೇ ಬೆಂಗಳೂರು ತಲುಪೋ ನಿರೀಕ್ಷೆ ಇದೆ. ಫುಲ್‌ ನ್ಯೂಸ್‌ ರೆಕಾರ್ಡ್‌ ಆಗೋ ಟೈಮಲ್ಲಿ ಪ್ರಜ್ವಲ್‌ ಇನ್ನೂ ಬೆಂಗಳೂರಿಗೆ ರೀಚ್‌ ಆಗಿಲ್ಲ. ಇನ್ನು ಕೇಸ್‌ಗೆ ಸಂಬಂಧಿಸಿದಂತೆ ಸಿದ್ಧರಾಮಯ್ಯ ಮಾತನಾಡಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ತಗೊಳ್ಳಲಾಗುತ್ತೆ ಅಂದಿದ್ರು. ಹೋಮ್‌ ಮಿನಿಸ್ಟರ್‌ ಪರಮೇಶ್ವರ್‌ ಕೂಡ ಕಾನೂನು ಪ್ರಕಾರ ಕ್ರಮ ತಗೊಳ್ಳಲಾಗುತ್ತೆ. ಇಲ್ದಿದ್ರೆ ಮುಂದೊಂದು ದಿನ SIT ಮೇಲೂ ಆರೋಪ ಬರಬಹುದು ಅಂದಿದ್ದಾರೆ. ಇನ್ನು ಜೆಡಿಎಸ್‌ ರಾಜ್ಯಾಧ್ಯಕ್ಷ ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ JDS ನಾಯಕತ ಮಹತ್ವದ ಮೀಟಿಂಗ್‌ ನಡೆದಿದೆ. ಈ ವೇಳೆ ರೇವಣ್ಣ ಬಂಧನದಿಂದ ಪಕ್ಷಕ್ಕೆ ಮುಜುಗರ ಆಗೋ ಸಂದರ್ಭ ಬಂದಿರೋದ್ರಿಂದ, ಅವರನ್ನೂ ಪಕ್ಷದಿಂದ ಅಮಾನತು ಮಾಡೋ ಬಗ್ಗೆ ಚರ್ಚಿಸಲಾಗಿದೆ ಅಂತೇಳಲಾಗಿದೆ. ಇನ್ನು ರೇವಣ್ಣ ಪತ್ನಿ ಭಾವನಿ ರೇವಣ್ಣ ಕೂಡ ಈ ಕೇಸ್‌ನಲ್ಲಿ ಇನ್ವಾಲ್ವ್‌ ಆಗಿದೆ ಅಂತೇಳಲಾಗ್ತಿದ್ದೂ, ಅವರಿಗೂ ವಿಚಾರಣೆ ಭೀತಿ ಎದುರಾಗಿದೆ. ಇನ್ನು ಮಾಜಿ ಸಿಎಂ ಕುಮಾರಸ್ವಾಮಿ ಶನಿವಾರ ಬೆಂಗಳೂರಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾರನ್ನ ಮೀಟ್‌ ಮಾಡಿದ್ದಾರೆ. ಈ ವೇಳೆ ನಡೆದಿರೋ ಬೆಳವಣಿಗಗಳು ಹಾಗೂ ಬಿಜೆಪಿ- ಜೆಡಿಎಸ್‌ ಮೈತ್ರಿ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದಾರೆ ಅಂತೇಳಲಾಗ್ತಿದೆ. ಈ ಅಪಹರಣ ಕೇಸ್‌ನಲ್ಲಿ ಸಂತ್ರಸ್ಥೆಯನ್ನ SIT ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಗೊಂದಲದ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಕೆಲವೊಮ್ಮೆ ಯಾರೋ ನನ್ನನ್ನ ಕರೆದುಕೊಂಡು ಹೋಗಿದ್ರು ಅಂದ್ರೆ, ಇನ್ನ ಕೆಲವೊಮ್ಮೆ ನಾನೇ ಹೋಗಿದ್ದೆ ಅಂತ ಹೇಳಿದ್ದಾರೆ ಎನ್ನಲಾಗಿದೆ. ಬಂಧನದ ಬಳಿಕ ಬೌರಿಂಗ್‌ ಆಸ್ಪತ್ರೆಯಲ್ಲಿ ಮೊದಲ ಪ್ರತಿಕ್ರಿಯೆ ನೀಡಿರೋ ರೇವ‍‍‍ಣ್ಣ, ಕರ್ನಾಟಕದ ಇತಿಹಾಸದಲ್ಲೇ ಇದು ದೊಡ್ಡ ರಾಜಕೀಯ ಷಡ್ಯಂತ್ರ. ಕುತಂತ್ರದಿಂದ ನನ್ನನ್ನ ಅರೆಸ್ಟ್‌ ಮಾಡಿದ್ದಾರೆ. ಇದಕ್ಕೆ ಯಾವುದೇ ಸಾಕ್ಷಿಗಳಿಲ್ಲ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply