ಸರ್ಕಾರಿ ಬಂಗಲೆ ಖಾಲಿ ಮಾಡ್ತೀನಿ ಎಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ!
masthmagaa.com: ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡಿರುವ ಹಿನ್ನೆಲೆಯಲ್ಲಿ ಅಧಿಕೃತ ಬಂಗಲೆಯನ್ನ ಖಾಲಿ ಮಾಡೋದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಬಂಗಲೆ ತೆರವು ಮಾಡಲು ಕಾಲಾವಕಾಶ ಕೇಳೋದಿಲ್ಲ. ಎಲ್ಲಾ ನಿರ್ದೇಶನಗಳನ್ನ ಪಾಲಿಸ್ತೀನಿ ಅಂತ ರಾಹುಲ್ ಲೋಕಸಭಾ ಡೆಪ್ಯೂಟಿ ಸೆಕ್ರಟ್ರಿಗೆ ಪತ್ರ ಬರೆದಿದ್ದಾರೆ. ಇತ್ತ ರಾಹುಲ್ ತಮ್ಮ ಬಂಗಲೆ ಖಾಲಿ ಮಾಡಿದ್ರೆ, ತನ್ನ ತಾಯಿಯೊಂದಿಗೆ ಇರ್ತಾರೆ. ಅಥ್ವಾ ರಾಹುಲ್ ನನ್ನ ಮನೆಗೆ ಬರ್ಬೋದು. ನಾನು ಅವ್ರಿಗಾಗಿ ಮನೆ ಖಾಲಿ ಮಾಡ್ತೀನಿ ಅಂತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಜೊತೆಗೆ ರಾಹುಲ್‌ರ ಅನರ್ಹತೆ ವಿಚಾರದಲ್ಲಿ ನಮಗೆ 19 ಪಕ್ಷಗಳು ಸಪೋರ್ಟ್ ಮಾಡ್ತಿವೆ ನಾವು ಈ ಬಂಗ್ಲೆ ವಿಚಾರದಲ್ಲಿ ಆತಂಕ ಪಡೋದಿಲ್ಲ ಅಂತ ಕಾಂಗ್ರೆಸ್ ಹೇಳಿದೆ. -masthmagaa.com Share on: WhatsAppContact Us for AdvertisementRead More →