ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ ಷರಿಯಾ ಕಾನೂನು ಜಾರಿ: ಯೋಗಿ!

masthmagaa.com:

ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಕೂಡ ಕಾಂಗ್ರೆಸ್‌ ವಿರುದ್ದ ಆರೋಪ ಮಾಡಿದ್ದಾರೆ.ʻʻಕಾಂಗ್ರೆಸ್‌ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನಾವು ಅಧಿಕಾರಕ್ಕೆ ಬಂದ್ರೆ ದೇಶದಲ್ಲಿ ಷರಿಯಾ ಕಾನೂನು ಜಾರಿಗೊಳಿಸೊ ಬಗ್ಗೆ ತಿಳಿಸಿದೆ ಅಂತ ಹೇಳಿದ್ದಾರೆ. ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಯೋಗಿ, ಷರಿಯಾ ಕಾನೂನಿನ ಬಗ್ಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದೆ. ನಮ್ಮ ದೇಶ ಬಾಬಾಸಾಹೇಬ್‌ ಅಂಬೇಡ್ಕರ್‌ ಅವ್ರು ಬರೆದ ಸಂವಿಧಾನದಿಂದ ಮುನ್ನಡೆಯ ಬೇಕಾ ಅಥ್ವಾ ಷರಿಯಾ ಕಾನೂನಿನಿಂದ ದೇಶದ ಆಡಳಿತ ನಡೀಬೇಕಾ ಅಂತ ಪ್ರಶ್ನಿಸಿದ್ದಾರೆ. ಅಲ್ದೇ ಕಾಂಗ್ರೆಸ್‌ ಮತ್ತು ಅದ್ರ ಮಿತ್ರ ಪಕ್ಷಗಳು ದೇಶಕ್ಕೆ ದ್ರೋಹ ಮಾಡಿವೆ. ಮತ್ತೊಮ್ಮೆ ಸುಳ್ಳು ಭರವಸೆಯೊಂದಿಗೆ ಜನರ ಬಳಿ ಬರ್ತಿವೆ ಅಂತ ಕಿಡಿಕಾರಿದ್ದಾರೆ.

-masthmagaa.com

Contact Us for Advertisement

Leave a Reply