ಟೆಸ್ಲಾ vs ಟೆಸ್ಲಾ! ಭಾರತದ ಕಂಪನಿ ಮೇಲೆ ಕೇಸ್‌ ಹಾಕಿದ ಮಸ್ಕ್‌ ಕಂಪನಿ!

masthmagaa.com:

ಎಲಾನ್‌ ಮಸ್ಕ್‌ರ ಟೆಸ್ಲಾ ಕಂಪನಿ ಇದೀಗ ಟೆಸ್ಲಾ ಕಂಪನಿ ವಿರುದ್ದ ಕೇಸ್‌ ದಾಖಲಿಸಿದೆ. ಕನ್ಫ್ಯೂಸ್‌ ಆದ್ರಾ! ಹಾಗಾದ್ರೆ ಇಲ್ಕೇಳಿ…. ಮಸ್ಕ್‌ರ ಕಾರು ತಯಾರಿಕಾ ಕಂಪನಿ ಇದೀಗ ಭಾರತದಲ್ಲಿರೋ ʻಟೆಸ್ಲಾ ಪವರ್‌ʼ ಅನ್ನೋ ಹೆಸರಿನ ಬ್ಯಾಟರಿ ತಯಾರಿಕಾ ಕಂಪನಿ ಮೇಲೆ ಮೊಕದ್ದಮೆ ಹೂಡಿದೆ. ಭಾರತದ ಟೆಸ್ಲಾ ಪವರ್‌ ಕಂಪನಿ ಮಸ್ಕ್‌ರ ಟೆಸ್ಲಾ ಕಂಪನಿಯ ಟ್ರೇಡ್‌ಮಾರ್ಕ್‌ ಉಲ್ಲಂಘಿಸಿ, ತಮ್ಮ ಪ್ರಾಡಕ್ಟ್‌ಗಳನ್ನ ಪ್ರಮೋಟ್‌ ಮಾಡ್ತಿದೆ ಅಂತ ಆರೋಪಿಸಿದೆ. ಇದೇ ವಾರ ದಿಲ್ಲಿ ಹೈಕೋರ್ಟ್‌ನಲ್ಲಿ ನಡೆದ ಈ ವಿಚಾರಣೆ ವೇಳೆ, ʻಈ ಬಗ್ಗೆ ಏಪ್ರಿಲ್‌ 2022ರಲ್ಲಿ ನೋಟಿಸ್‌ ನೀಡಿದ್ರೂ, ಟೆಸ್ಲಾ ಪವರ್‌ ಅನ್ನೋ ಹೆಸ್ರಲ್ಲಿ ಭಾರತದ ಕಂಪನಿ ತನ್ನ ಪ್ರಾಡಕ್ಟ್‌ಗಳ ಜಾಹೀರಾತು ನೀಡೋದನ್ನ ಕಂಟಿನ್ಯೂ ಮಾಡಿದೆ ಅಂತೇಳಿದೆ. ಮಸ್ಕ್‌ರ ಟೆಸ್ಲಾ ವಿರುದ್ಧ ವಾದಕ್ಕಿಳಿದ ಭಾರತದ ಟೆಸ್ಲಾ ಪವರ್‌, ʻನಾವು ಪ್ರಮುಖ ಆಸಿಡ್‌ ಬ್ಯಾಟರಿಗಳನ್ನ ತಯಾರಿಸ್ತೀವಿ ಅಷ್ಟೇ, ಯಾವ್ದೇ ರೀತಿ ಎಲೆಕ್ಟ್ರಿಕ್‌ ವಾಹನಗಳನ್ನ ತಯಾರಿಸೋ ಉದ್ದೇಶ ನಮಗಿಲ್ಲʼ ಅಂತೇಳಿದೆ.

-masthmagaa.com

Contact Us for Advertisement

Leave a Reply