masthmagaa.com: ಡೆಲ್ಟಾಗಿಂತಲೂ ಅಪಾಯಕಾರಿಯಾದ ಹೊಸ ಕೊರೋನ ವೈರಸ್ ವೇರಿಯೆಂಟ್ ಈಗ ಭಾರತದಲ್ಲೂ ಕಾಣಿಸಿಕೊಂಡಿದೆ. ಯುಕೆ ಹಾಗೂ ಯುರೋಪ್ ನಲ್ಲಿ ಹಾವಳಿ ಇಡ್ತಿರೋ ಹೊಸ ರೂಪಾಂತರಿ ಯುಕೆ, ರಷ್ಯಾಗಳಲ್ಲಿ ಇದ್ದಕ್ಕಿದ್ದ ಹಾಗೆ ಹೊಸ ಕೊರೋನ ಅಲೆಗೆ ಕಾರಣ ಆಗಿದೆ. ರಷ್ಯಾ ಮಾಸ್ಕೋದಲ್ಲಿ ಮುಂದಿನ ವಾರದಿಂದ ಮತ್ತೆ ಲಾಕ್ ಡೌನ್ ಶುರುವಾಗ್ತಿದೆ. ಇದು ಡೆಲ್ಟಾ ರೂಪಾಂತರಿಯಿಂದ ಮ್ಯುಟೇಶನ್ ಆಗಿರೋ ಹೊಸ ರೂಪಾಂತರಿ ಅಂತ ವಿಜ್ಞಾನಿಗಳು ಹೇಳಿದ್ದಾರೆ. ಇದಕ್ಕೆ AY.4.2 ಅಂತ ಕೋಡ್ ನೇಮ್ ಇಡಲಾಗಿದೆ. ಇದು ಈಗ ಭಾರತದಲ್ಲೂ ಕಾಣಿಸಿಕೊಂಡಿದೆ. ಆದ್ರೆ ತುಂಬಾ ಸಣ್ಣ ಪ್ರಮಾಣದಲ್ಲಿ ಅಂತ ವಿಜ್ಞಾನಿಗಳು ಹೇಳಿದ್ದಾರೆ. ಇದು ಅತ್ಯಂತ ವೇಗವಾಗಿ ಹರಡೋ ಶಕ್ತಿ ಹೊಂದಿದ್ದು, ಲಸಿಕೆ ಇದರ ಮೇಲೆ ಪರಿಣಾಮ ಬೀರುತ್ತಾ ಅನ್ನೋ ಬಗ್ಗೆ ಕೂಡ ಅನುಮಾನ ಶುರುವಾಗಿದೆ. ಯಾಕಂದ್ರೆ UKಯಲ್ಲಿ ಲಸಿಕೆ ಅಭಿಯಾನ ತುಂಬಾ ಚೆನ್ನಾಗಿ ನಡೆದಿದೆ. ಆದ್ರೂ ಕೂಡ ಅಲ್ಲಿ ಕೊರೋನದ ಹೊಸ ಅಲೆ ಈಗ ಜೋರಾಗಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಪಾಕಿಸ್ತಾನದ ಉಗ್ರ ಸಂಘಟನೆಗಳಿಂದ ದುಡ್ಡು ಪಡೆದ ಆರೋಪದ ಮೇಲೆ NIA ಬಂಧಿಸಿದ್ದ ನಾಲ್ವರನ್ನು ದೆಹಲಿ ಕೋರ್ಟ್ ಬಿಡುಗಡೆ ಮಾಡಿದೆ. ಹರಿಯಾಣದ ಪಲ್ವಾಲ್ ಜಿಲ್ಲೆಯ ಅಟ್ಟಾವರ್ ಗ್ರಾಮದಲ್ಲಿ ಮೊಹ್ಮದ್ ಸಲ್ಮಾನ್, ಮೊಹಮ್ಮದ್ ಸಲೀಂ, ಆರಿಫ್ ಗುಲಾಂ ಬಶೀರ್ ಧರಂಪುರಿಯಾ ಮತ್ತು ಮೊಹ್ಮದ್ ಹುಸ್ಸೈನ್ ಮೊಲಾನಿಯನ್ನು NIA ಅರೆಸ್ಟ್​ ಮಾಡಿತ್ತು. ಇವರು ಮಸೀದಿ ಕಟ್ಟೋ ನೆಪದಲ್ಲಿ ಪಾಕ್ ಮೂಲದ ಫಲಾಹ್ ಇ ಇನ್ಸಾನಿಯತ್ ಫೌಂಡೇಷನ್​​ನಿಂದ ದುಡ್ಡು ಪಡೆಯುತ್ತಿದ್ರು. ನಂತರ ಯುವಕರನ್ನು ಭಯೋತ್ಪಾದನೆಗೆ ಸೆಳೆಯಲು ಮತ್ತು ಸ್ಲೀಪರ್​ ಸೆಲ್​ಗಳಿಗಾಗಿ ಆ ದುಡ್ಡು ಬಳಸಲಾಗುತ್ತಿತ್ತು ಅಂತ ಎನ್​ಐಎ ಆರೋಪಿಸಿತ್ತು. ಮೊಹ್ಮದ್ ಸಲ್ಮಾನ್ ಮೊಬೈಲ್​​ನಲ್ಲಿ ಪತ್ತೆಯಾದ 2 ಸಂದೇಶಗಳನ್ನು ಕೂಡ ಚಾರ್ಜ್​ಶೀಟ್​​ನಲ್ಲಿ ಉಲ್ಲೇಖಿಸಿತ್ತು. ಮತ್ತು ಆ ಸಂದೇಶದಲ್ಲಿದ್ದ ಘೀ ಅಂದ್ರೆ ತುಪ್ಪ ಅನ್ನೋ ಪದ ಸ್ಫೋಟಕದ ಕೋಡ್​ವರ್ಡ್​​​ ಆಗಿತ್ತು. ಅದೇ ರೀತಿ ಉಗ್ರರಿಗೆ ಎಲ್ಲಾ ವ್ಯವಸ್ಥೆ ಕಲ್ಪಿಸಿಕೊಡೋದು ಅನ್ನೋದಕ್ಕೆ ಖಿದಾಯತ್ ಅನ್ನೋ ಬಳಸುತ್ತಿದ್ರು ಅಂತ ಎನ್​ಎಐ ತಿಳಿಸಿತ್ತು. ಆದ್ರೆ ಈ ಪದಗಳಿಗೆ ಬೇರೆ ಬೇರೆ ಅರ್ಥವೂ ಇದೆ ಎಂದಿರೋ ಸ್ಪೆಷಲ್ ಕೋರ್ಟ್​ ಜಡ್ಜ್​​​, ಆರೋಪಿಗಳನ್ನುRead More →

masthmagaa.com: ಯುನೈಟೆಡ್ ಕಿಂಗ್​ಡಮ್​​ನ ಫಾರಿನ್ ಸೆಕ್ರೆಟರಿ ಲಿಜ್​​ ಟ್ರುಸ್​​​​ ಭಾರತ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ವಿದೇಶಾಂಗ ಸಚಿವ ಎಸ್​.ಜೈಶಂಕರ್​​, ಪರಿಸರ ಸಚಿವ ಭೂಪೇಂದರ್ ಯಾದವ್​​ರನ್ನು ಭೇಟಿಯಾಗಿದ್ದಾರೆ. ಈ ವೇಳೆ ಉಭಯದೇಶಗಳ ನಡುವಿನ ಹಲವಾರು ತಂತ್ರಜ್ಞಾನ ಮತ್ತು ಮೂಲಭೂತ ಸೌಕರ್ಯಕ್ಕೆ ಸಂಬಂಧಿಸಿದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಅದ್ರಂತೆ ಯುನೈಟೆಡ್ ಕಿಂಗ್​ಡಮ್ ಭಾರತದಲ್ಲಿ ಹಸಿರು ತಂತ್ರಜ್ಞಾನ ಮೂಲಸೌಕರ್ಯ ಯೋಜನೆಗಳಿಗಾಗಿ 7 ಕೋಟಿ ಪೌಂಡ್ ಅಂದ್ರೆ 721 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ ಅಂತ ಭಾರತದಲ್ಲಿರೋ ಬ್ರಿಟಿಷ್ ರಾಯಭಾರಿ ಕಚೇರಿ ತಿಳಿಸಿದೆ. ಇದೇ ವೇಳೆ ಯುನೈಟೆಡ್​ ಕಿಂಗ್​ಡಮ್​​ನ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ನಿಕೋಲಸ್ ಕಾರ್ಟರ್ ಮತ್ತು ನೌಕಾಪಡೆ ಚೀಫ್ ಅಡ್ಮಿರಲ್ ಸರ್ ಟೋನಿ ರಡಾಕಿನ್ ಕೂಡ ಭಾರತ ಪ್ರವಾಸದಲ್ಲಿದ್ದು, ವಿವಿಧ ಸಚಿವರು ಮತ್ತು ಸೇನೆ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ರಾಜ್ಯದಲ್ಲಿ ಇಂದು 378 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, 11 ಜನ ಮೃತಪಟ್ಟಿದ್ಧಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 29,85,227 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 37,995 ಆಗಿದೆ. ಇಂದು 464 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 29,38,312 ಆಗಿದೆ. ರಾಜ್ಯದಲ್ಲಿ ಇನ್ನೂ ಕೂಡ 8,891 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವತ್ತು 1.03 ಲಕ್ಷಕ್ಕು ಅಧಿಕ ಪರೀಕ್ಷೆಗಳನ್ನ ನಡೆಸಲಾಗಿದ್ದು, ಇದುವರೆಗೆ ಒಟ್ಟು 4.99 ಕೋಟಿಗೂ ಹೆಚ್ಚು ಟೆಸ್ಟ್​ಗಳನ್ನ ನಡೆಸಿದಂತಾಗಿದೆ. ರಾಜ್ಯದಲ್ಲಿ ಇದುವರೆಗೆ ಒಟ್ಟು 6.28 ಕೋಟಿಗೂ ಹೆಚ್ಚು ಡೋಸ್ ಕೊರೋನಾ ಲಸಿಕೆ ಹಾಕಲಾಗಿದೆ. ಇಂದು ಮೃತಪಟ್ಟವರು: ಬೆಂಗಳೂರು ನಗರ 7 ದಾವಣಗೆರೆ 1 ಧಾರವಾಡ 1 ಕೋಲಾರ 1 ತುಮಕೂರು 1 -masthmagaa.com Share on: WhatsAppContact Us for AdvertisementRead More →

masthmagaa.com: ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 336 ರೂಪಾಯಿ ಜಾಸ್ತಿಯಾಗಿ, ₹47,805 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ ₹44,550 ಆಗಿದ್ದು ನಿನ್ನೆ ಮತ್ತು ಇವತ್ತು ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಇಲ್ಲ . 1 ಕೆ.ಜಿ ಬೆಳ್ಳಿ ಬೆಲೆ 294 ರೂಪಾಯಿ ಜಾಸ್ತಿಯಾಗಿ 65,294 ಆಗಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 102 ಅಂಕ ಇಳಿಕೆ ಕಂಡು 60,822 ರಲ್ಲಿ ವಾರದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 63 ಅಂಕ ಇಳಿಕೆ ಕಂಡು 18,115 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 3 ಪೈಸೆ ಇಳಿಕೆ ಕಂಡು 74.90 ಆಗಿದೆ (74. ರುಪಾಯಿ 90ಪೈಸೆ ) -masthmagaa.com Share on: WhatsAppContact Us for AdvertisementRead More →

masthmagaa.com: ಜಾಗತಿಕ ವಿಚಾರಕ್ಕೆ ಬಂದ್ರೆ ಇಡೀ ಪ್ರಪಂಚದಲ್ಲಿ ಕಳೆದ 24 ಗಂಟೆಗಳಲ್ಲಿ 4.62 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಜಾಗತಿಕ ಸೋಂಕಿತರ ಸಂಖ್ಯೆ 24.25 ಕೋಟಿ ದಾಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 49.31 ಲಕ್ಷ ದಾಟಿದೆ TOP-5 ಟಾಪ್ 5 ಕೊರೊನಾ ಪೀಡಿತ ರಾಷ್ಟ್ರಗಳ ಅಪ್ಡೇಟ್ ನೋಡೋದಾದ್ರೆ ಅಮೆರಿಕ- 80,000+ ಅಧಿಕ ಭಾರತ – 15,000+ ಬ್ರೆಜಿಲ್- 16,000+ ಯುನೈಟೆಡ್‌ ಕಿಂಗ್‌ಡಮ್ -‌ 51,000+ ರಷ್ಯಾ – 37,000+ -masthmagaa.com Share on: WhatsAppContact Us for AdvertisementRead More →

masthmagaa.com: ರಾಜ್ಯದ ದಕ್ಷಿಣ ಒಳನಾಡು, ಮಲೆನಾಡು, ಕರಾವಳಿಯ ಕೆಲವೊಂದು ಕಡೆ ಇವತ್ತು ಮಳೆಯಾಗಿದೆ. ಕಳೆದ 24 ಗಂಟೆಯಲ್ಲಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆಯಲ್ಲಿ ಅತಿಹೆಚ್ಚು 130 ಮಿಲಿಮೀಟರ್ ಮಳೆಯಾಗಿದೆ. ಮುಂದಿನ 24 ಗಂಟೆಯಲ್ಲಿ ದಕ್ಷಿಣ ಒಳನಾಡು ಮತ್ತು ಮಲೆನಾಡು ಜಿಲ್ಲೆಗಳ ಕೆಲವೊಂದು ಕಡೆ ಭಾರಿ ಮಳೆ, ಬಹುತೇಕ ಕಡೆ ಸಾಧರಣ ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳ ಬಹುತೇಕ ಕಡೆ ಸಾಧರಣ ಮಳೆ ಮತ್ತು ಉತ್ತರ ಒಳನಾಡು ಜಿಲ್ಲೆಗಳ ಕೆಲವೊಂದುಕಡೆ ಸಾಧರಣ ಮಳೆಯಾಗುವ ಸಾಧ್ಯತೆಯಿದೆ ಅಂತ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ. ಅತ್ತ ನಮ್ಮ ಪಕ್ಕದ ಕೇರಳ ಮತ್ತು ಮಾಹೆ ಹಾಗೂ ತಮಿಳುನಾಡು, ಪುದುಚೆರಿ, ಕಾರೈಕಲ್​​ನ ಕೆಲವೊಂದುಕಡೆ ಅಕ್ಟೋಬರ್ 25ನೇ ತಾರೀಖಿನವರೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಅಂತ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ರಾಜ್ಯದಲ್ಲಿ ಇಂದು 365 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, 8 ಜನ ಮೃತಪಟ್ಟಿದ್ಧಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 29,84,849 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 37,984 ಆಗಿದೆ. ಇಂದು 443 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 29,37,848 ಆಗಿದೆ. ರಾಜ್ಯದಲ್ಲಿ ಇನ್ನೂ ಕೂಡ 8,988 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವತ್ತು 1.17 ಲಕ್ಷಕ್ಕು ಅಧಿಕ ಪರೀಕ್ಷೆಗಳನ್ನ ನಡೆಸಲಾಗಿದ್ದು, ಇದುವರೆಗೆ ಒಟ್ಟು 4.98 ಕೋಟಿಗೂ ಹೆಚ್ಚು ಟೆಸ್ಟ್​ಗಳನ್ನ ನಡೆಸಿದಂತಾಗಿದೆ. ರಾಜ್ಯದಲ್ಲಿ ಇದುವರೆಗೆ ಒಟ್ಟು 6.21 ಕೋಟಿಗೂ ಹೆಚ್ಚು ಡೋಸ್ ಕೊರೋನಾ ಲಸಿಕೆ ಹಾಕಲಾಗಿದೆ. ಇಂದು ಮೃತಪಟ್ಟವರು: ಬೆಂಗಳೂರು ನಗರ 4 ದಕ್ಷಿಣ ಕನ್ನಡ 1 ಧಾರವಾಡ 1 ಶಿವಮೊಗ್ಗ 1 ತುಮಕೂರು 1 -masthmagaa.com Share on: WhatsAppContact Us for AdvertisementRead More →

masthmagaa.com: ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 79 ರೂಪಾಯಿ ಕಡಿಮೆಯಾಗಿ, ₹47,469 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 100 ರೂಪಾಯಿ ಜಾಸ್ತಿಯಾಗಿ ₹44,550 ಆಗಿದೆ . 1 ಕೆ.ಜಿ ಬೆಳ್ಳಿ ಬೆಲೆ 504 ರೂಪಾಯಿ ಜಾಸ್ತಿಯಾಗಿ 65,000 ಆಗಿದೆ. -masthmagaa.com Share on: WhatsAppContact Us for AdvertisementRead More →