ಮೋದಿ ಸರ್ಕಾರ ವಿರೋಧಿಸಿದ ಆಸ್ಟ್ರೇಲಿಯಾದ ABC Tv ಪತ್ರಕರ್ತೆ!

masthmagaa.com:

ಚುನಾವಣೆ ಹೊತ್ತಲ್ಲೇ ಬ್ರಿಟನ್‌ ಮೂಲದ ಗಾರ್ಡಿಯನ್‌ ಪತ್ರಿಕೆ ಮತ್ತೆ ಮೋದಿ ಸರ್ಕಾರವನ್ನ ಟೀಕಿಸಿ ಲೇಖನ ಪ್ರಕಟಿಸಿದ್ದು ಭಾರತದಲ್ಲಿ ವಿದೇಶಿ ಪತ್ರಕರ್ತರಿಗೆ ಕಿರುಕುಳ ಕೊಡಲಾಗ್ತಿದೆ ಅಂತ ಹೇಳಿದೆ. ಆಸ್ಟ್ರೇಲಿಯಾದ ಖ್ಯಾತ ABC Tv ಚಾನೆಲ್‌ನಲ್ಲಿ ಕೆಲಸ ಮಾಡೋ ಭಾರತ ಮೂಲದ ಪತ್ರಕರ್ತೆ ಮೋದಿ ಸರ್ಕಾರದ ಬಗ್ಗೆ ನೀಡಿರೋ ಹೇಳಿಕೆಯನ್ನ ಉಲ್ಲೇಖಿಸಿ ರಿಪೋರ್ಟ್‌ ಪಬ್ಲಿಷ್‌ ಮಾಡಿದೆ. ಜನವರಿ 2022ರಿಂದ ದಿಲ್ಲಿಯಲ್ಲಿರೋ ABC ಚಾನೆಲ್‌ನಲ್ಲಿ ಕೆಲಸ ಮಾಡ್ತಿದ್ದ, ಅವನಿ ಡಾಯಸ್‌ ಅನ್ನೋ ಪತ್ರಕರ್ತೆ ಒಬ್ರು, ʻಭಾರತ ಸರ್ಕಾರದ ವಿರುದ್ಧ ವರದಿ ಮಾಡೋ ಫಾರೀನ್‌ ಜರ್ನಲಿಸ್ಟ್‌ಗಳಿಗೆ ಉಳಿಗಾಲ ಇಲ್ಲ. ಮೋದಿ ಸರ್ಕಾರದ ವಿರುದ್ಧ ರಿಪೋರ್ಟ್‌ ಮಾಡಿದ್ದಕ್ಕೆ ನನ್ನ ವೀಸಾ ರಿನ್ಯು ಮಾಡದೇ ಬಲವಂತವಾಗಿ ಭಾರತ ಬಿಟ್ಟು ಹೋಗುವಂತೆʼ ಮಾಡಲಾಗಿದೆ ಅಂತ ಆರೋಪ ಮಾಡಿದ್ದನ್ನ ವರದಿಯಲ್ಲಿ ಹೇಳಿದೆ.

ಜೊತೆಗೆ ನರೇಂದ್ರ ಮೋದಿಯವ್ರ ಸರ್ಕಾರದಡಿ ಪತ್ರಕರ್ತರಿಗೆ ಸ್ವಾತಂತ್ರ್ಯ ಇಲ್ಲ…ಅವ್ರ ಮೇಲೆ ಪ್ರೆಶರ್‌ ಹಾಕಲಾಗ್ತಿದೆ ಅಂತ ಅವನಿ ತಮ್ಮ ಪಾಡ್‌ಕಾಸ್ಟ್‌ನ ಕೊನೆಯ ಎಪಿಸೋಡ್‌ನಲ್ಲಿ ಹೇಳಿದ್ದು ಅದನ್ನ ಗಾರ್ಡಿಯನ್‌ ಬರೆದಿದೆ. ಈ ವೇಳೆ, ʻಮೋದಿ ಸರ್ಕಾರದಿಂದ ನನ್ನ ಕೆಲಸ ಕಂಟಿನ್ಯೂ ಮಾಡೋಕೆ ತುಂಬಾ ಕಷ್ಟವಾಗಿದೆ. ಕೆಲ ಈವೆಂಟ್‌ಗಳನ್ನ ನನಗೆ ಅಟೆಂಡ್‌ ಮಾಡೋಕೆ ಬಿಡ್ತಿರಲಿಲ್ಲ. ಯುಟ್ಯೂಬ್‌ನಲ್ಲಿ ಹೊಸ ಸ್ಟೋರಿಗಳನ್ನ ಅಪ್‌ಲೋಡ್‌ ಮಾಡಿದ್ರೆ, ಅದನ್ನ ತೆಗೆದು ಹಾಕೋಕೆ ನೋಟಿಸ್‌ ನೀಡಲಾಗಿತ್ತು. ಈ ಪೈಕಿ ಫಾರೀನ್‌ ಕರೆಸ್ಪಾಂಡೆಂಟ್‌ ಅನ್ನೋ ABCಯ ಎಪಿಸೋಡ್‌ನಲ್ಲಿ ಸಿಖ್‌ ಪ್ರತ್ಯೇಕತಾವಾದಿ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ…ಅದ್ರಲ್ಲಿ ಭಾರತದ ಕೈವಾಡವಿತ್ತು ಅನ್ನೋ ಕೆನಡಾ ಸರ್ಕಾರದ ಆರೋಪಗಳು ಒಳಗೊಂಡಿದ್ವು. ಆದ್ರಿಂದ ನನ್ನ ವೀಸಾವನ್ನ ರಿನ್ಯೂ ಮಾಡೋಕೂ ನಿರಾಕರಿಸಿದ್ರು. ನಂತ್ರ ನನ್ನ ಪರವಾಗಿ ಆಸ್ಟ್ರೇಲಿಯಾ ಭಾರತದ ಜೊತೆ ಲಾಬಿ ಮಾಡಿ…2 ತಿಂಗಳಿಗೆ ನನ್ನ ವೀಸಾ ರಿನ್ಯೂ ಮಾಡಲಾಯ್ತು. ಆದ್ರಿಂದ ಭಾರತದಲ್ಲಿದ್ದುಕೊಂಡು ಸ್ವತಂತ್ರ ಪತ್ರಕರ್ತೆಯಾಗಿ ಕೆಲಸ ಮಾಡೋದು ಕಷ್ಟ ಅಂತ ಕ್ಲಿಯರ್‌ ಆಯ್ತು. ಸೋ, ವಾಪಸ್‌ ಆಸ್ಟ್ರೇಲಿಯಾಗೆ ಹೋದೆʼ ಅಂತ ಅವನಿ ಹೇಳಿಕೆಯನ್ನ ಗಾರ್ಡಿಯನ್‌ ಪಬ್ಲಿಷ್‌ ಮಾಡಿದೆ. ಜೊತೆಗೆ ಭಾರತದಲ್ಲಿ ಮೋದಿ ಸರ್ಕಾರದ ವಿರುದ್ಧ ವರದಿ ಮಾಡೋ ವಿದೇಶಿ ಪತ್ರಕರ್ತರಿಗೆ ಇದುವರೆಗೆ ನಾನಾ ರೀತಿ ತೊಂದರೆ ನೀಡಲಾಗಿದೆ ಅಂತ ಗಾರ್ಡಿಯನ್‌ ಆರೋಪ ಮಾಡಿ ಲೇಖನ ಪ್ರಕಟಿಸಿದೆ. ಅಂದ್ಹಾಗೆ ಇತ್ತೀಚಿಗಷ್ಟೇ ಭಾರತ ಸರ್ಕಾರ ಪಾಕಿಸ್ತಾನದಲ್ಲಿ ಉಗ್ರರನ್ನ ಟಾರ್ಗೆಟ್‌ ಮಾಡಿ ಹತ್ಯೆ ಮಾಡುತ್ತೆ ಅಂತ ಇದೇ ಗಾರ್ಡಿಯನ್‌ ಬರೆದಿತ್ತು. ರಾಮಮಂದಿರ ವಿಚಾರದಲ್ಲೂ ಮೋದಿ ಸರ್ಕಾರವನ್ನ ಟೀಕಿಸಿ ಬರೆಯಲಾಗಿತ್ತು. ಈಗ ಮತ್ತೆ ಚುನಾವಣೆ ಟೈಮಲ್ಲಿ ಮತ್ತೆ ಆರೋಪ ಮಾಡಿದ್ದು ಮಹತ್ವ ಪಡ್ಕೋತಿದೆ.

-masthmagaa.com

Contact Us for Advertisement

Leave a Reply