ಭಾರತಕ್ಕೆ ಉಳಿದ ರಷ್ಯಾನ್‌ S-400 ಸಿಸ್ಟಮ್‌ 2025ರೊಳಗೆ ಡಿಲಿವರಿ!

masthmagaa.com:

ರಷ್ಯಾದಿಂದ ಭಾರತಕ್ಕೆ ಬರಬೇಕಿರೋ S-400 ಏರ್‌ ಡಿಫೆನ್ಸ್‌ ಸಿಸ್ಟಮ್‌ನ್ನ ರಷ್ಯಾ 2025ರ ಒಳಗೆ ಡೆಲಿವರ್‌ ಮಾಡೋದಾಗಿ ಹೇಳ್ಕೊಂಡಿದೆ. ಯುಕ್ರೇನ್‌ ಜೊತೆಗಿನ ಸಂಘರ್ಷದಿಂದ ಪಾಶ್ಚಿಮಾತ್ಯ ದೇಶಗಳು ರಷ್ಯಾ ಮೇಲೆ ನಿರ್ಬಂಧಗಳು ಹೇರಿದ ಕಾರಣ ಡಿಫೆನ್ಸ್‌ ಸಿಸ್ಟಮ್‌ ಡಿಲಿವರಿ ಮಾಡೋಕೆ ವಿಳಂಬವಾಗಿದೆ. ಆದ್ರೆ ಮುಂದಿನ ವರ್ಷ ನಾವು ಭಾರತಕ್ಕೆ ಕೊಟ್ಬಿಡ್ತೀವಿ ಅಂತೇಳಿದ್ದಾರೆ. ಅಂದ್ಹಾಗೆ 2018ರ ಅಕ್ಟೋಬರ್‌ನಲ್ಲಿ ಐದು S-400 ಸಿಸ್ಟಮ್‌ಗಳ ಆಮದು ಮಾಡ್ಕೊಳ್ಳೋಕೆ, 5.4 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 44.8 ಸಾವಿರ ಕೋಟಿ ರೂಪಾಯಿ ಒಪ್ಪಂದವನ್ನ ಭಾರತ ರಷ್ಯಾ ಜೊತೆ ಮಾಡಿಕೊಂಡಿತ್ತು. ಈಗ ಆಲ್ರೆಡಿ ಮೂರು ಬಂದಿವೆ. ಇನ್ನೆರಡು ಬರಬೇಕು. ಇದನ್ನ ಮುಂದಿನ ವರ್ಷ ಕೊಡ್ತೀವಿ ಅಂತ ರಷ್ಯಾ ಹೇಳ್ತಿದೆ.

-masthmagaa.com

Contact Us for Advertisement

Leave a Reply