ಜಮ್ಮು & ಕಾಶ್ಮೀರದ ಪೂಂಚ್‌ನಲ್ಲಿ ಉಗ್ರರ ದಾಳಿ! ಓರ್ವ ಯೋಧ ಹುತಾತ್ಮ!

masthmagaa.com:

ಕಳೆದ ವರ್ಷವಷ್ಟೇ ಜಮ್ಮು & ಕಾಶ್ಮೀರದ ಪೂಂಚ್‌ ಜಿಲ್ಲೆಯಲ್ಲಿ ಉಗ್ರರ ದಾಳಿಗೆ ಭಾರತದ ಸೈನಿಕರು ಹುತಾತ್ಮರಾಗಿದ್ರು. ಈಗ ಪುನಃ ಅದೇ ಪೂಂಚ್‌ ಜಿಲ್ಲೆಯಲ್ಲಿ ಮತ್ತೊಂದು ಉಗ್ರದಾಳಿ ನಡೆದಿದೆ. ನೆನ್ನೆ ಅಂದ್ರೆ ಮೇ 04ರಂದು ಸೇನಾ ವಾಹನದ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಉಗ್ರರು ಮತ್ತು ಸೇನೆ ನಡುವೆ ನಡೆದ ಈ ಗುಂಡಿನ ಚಕಮಕಿಯಲ್ಲಿ, ದುರಾದೃಷ್ಟವಶಾತ್‌ ಭಾರತೀಯ ವಾಯು ಪಡೆಯ ಯೋಧರೊಬ್ರು ಹುತಾತ್ಮರಾಗಿದ್ದಾರೆ. ಜೊತೆಗ ಐದು ಮಂದಿ ಸೈನಿಕರಿಗೆ ಗಾಯಗಳಾಗಿವೆ. ಗಾಯಗೊಂಡ ಸೈನಿಕರನ್ನ ಚಿಕಿತ್ಸೆಗಾಗಿ ಅಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಸ್ಥಳೀಯ ರಾಷ್ಟ್ರೀಯ ರೈಫಲ್ಸ್‌ ಯುನಿಟ್‌ ಘಟನಾ ಸ್ಥಳವನ್ನ ಸುತ್ತುವರೆದು, ಶೋಧ ಕಾರ್ಯಾಚರಣೆ ಶುರು ಮಾಡಿದ್ದಾರೆ. ಇನ್ನೊಂದ್ಕಡೆ ಭಾರತೀಯ ಸೇನೆ ಮತ್ತು ಪೊಲೀಸರ ತಂಡ ಒಟ್ಟಾಗಿ ಉಗ್ರರ ವಿರುದ್ಧ ಜಂಟಿ ಕಾರ್ಯಚರಣೆ ನಡೆಸ್ತಿದೆ. ಜೊತೆಗ ಭಾರತೀಯ ವಾಯು ಪಡೆಯ ಗರುಡ ಸ್ಪೆಷಲ್‌ ಫೋರ್ಸ್‌ನ್ನ ನಿಯೋಜಿಸಲಾಗಿದೆ.

-masthmagaa.com

Contact Us for Advertisement

Leave a Reply