ನಿಜ್ಜರ್‌ ಪ್ರಕರಣದಲ್ಲಿ ಭಾರತೀಯರ ಅರೆಸ್ಟ್‌ಗೆ ಜೈಶಂಕರ್‌ ಪ್ರತಿಕ್ರಿಯೆ!

masthmagaa.com:

ಪ್ರತಿದಿನ ಹಾವಿಗೆ ಹಾಲೆರದು, ಈ ಹಾವು ಬೇರೆಯವ್ರನ್ನಷ್ಟೇ ಕಚ್ಚುತ್ತೆ, ನಮಗೇನು ಮಾಡಲ್ಲ ಅನ್ಕೊಳೋದು ಮೂರ್ಖತನ ಆಗುತ್ತೆ. ಈಗ ಖಲಿಸ್ತಾನಿಗಳ ವಿಚಾರದಲ್ಲಿ ಕೆನಡಾ ಪರಿಸ್ಥಿತಿ ಕೂಡ ಅದೇ ರೀತಿ ಆಗಿದೆ. ಭಾರತದಲ್ಲಿ ಅಪರಾಧ ಕೃತ್ಯಗಳನ್ನ ನಡೆಸಿರೋರಿಗೆ ರತ್ನಗಂಬಳಿ ಹಾಸಿ ಕರೆದಿದ್ದು ಕೆನಡಾಗೆ ದುಬಾರಿಯಾಗ್ತಿದೆ. ಭಾರತ ಇದೇ ಸಮಾಜಘಾತುಕರನ್ನ ಬಳಸಿ ಕೆನಡಾದಲ್ಲಿರೋ ತನ್ನ ಶತ್ರುಗಳನ್ನ ಬಡಿದು ಹಾಕ್ತಿದೆ. ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಕೂಡ ಇದಕ್ಕೆ ಜ್ವಲಂತ ಉದಾಹರಣೆ. ಈಗ ನಿಜ್ಜರ್‌ ಪ್ರಕರಣದಲ್ಲಿ ಭಾರತೀಯರು ಅರೆಸ್ಟ್‌ ಆಗಿರೋ ಕುರಿತು ಕೂಡ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಇದೇ ಧಾಟಿಯಲ್ಲಿ ಮಾತಾಡಿದ್ದಾರೆ. ʻಅರೆಸ್ಟ್‌ ಆಗಿರೋರು ಭಾರತದ ಗ್ಯಾಂಗ್‌ಸ್ಟರ್‌ಗೆ ಲಿಂಕ್‌ ಹೊಂದಿರೋರು ಅಂತೇಳಲಾಗ್ತಿದೆ. ಕೆನಡಾ ಪೊಲೀಸರು ಮಾಹಿತಿ ನೀಡೋ ತನಕ ನಾವು ವೈಟ್‌ ಮಾಡ್ಬೇಕಾಗುತ್ತೆ. ಆದ್ರೆ ಭಾರತದ ಪಂಜಾಬ್‌ನಲ್ಲಿ ಕ್ರೈಮ್‌ ನಡೆಸ್ತಿರೋ ಗ್ಯಾಂಗ್‌ಗಳಿಗೆ ಸಪೋರ್ಟ್‌ ನೀಡ್ಬೇಡಿ… ವೀಸಾ ಇಶ್ಯು ಮಾಡ್ಬೇಡಿ ಅಂತ ನಾವು ಕೆನಡಾಗೆ ಮೊದಲಿನಿಂದಲೂ ವಾರ್ನ್‌ ಮಾಡ್ತಲೇ ಬಂದಿದ್ವಿ… ನನಗೆ ಗೊತ್ತಿರೋ ಹಾಗೆ ಸುಮಾರು 25 ಜನ ಖಲಿಸ್ತಾನಿ ಪರ ಅಪರಾಧ ಎಸಗಿರೋರಿಗೆ ಕೆನಡಾ ಜಾಗ ಕೊಟ್ಟಿದೆ. ನಾವು ಅವಾಗಿನಿಂದಲೂ ಇವ್ರನ್ನ ಹಸ್ತಾಂತರ ಮಾಡಿ ಅಂತ ಕೇಳ್ತಾನೆ ಬಂದಿದ್ದೀವಿ. ಆದ್ರೆ ಕೇಳಲಿಲ್ಲ. ಇಲ್ಲಿಯ ಗೂಂಡಾಗಳು ಅಲ್ಲೋಗಿ ಗ್ಯಾಂಗ್‌ವಾರ್‌ ಮಾಡ್ತಿದ್ದಾರೆ. ಈಗ ನಮ್ಮ ಮೇಲೆ ಬ್ಲೇಮ್‌ ಮಾಡ್ತಿದ್ದಾರೆ…. ಕೆನಡಾ ಈ ಪರಿಸ್ಥಿತಿಗೆ ತಲುಪೋಕೆ ಅಲ್ಲಿನ ಆಡಳಿತ ಪಕ್ಷದ ವೋಟ್‌ ಬ್ಯಾಂಕ್‌ ಪಾಲಿಟಿಕ್ಸ್‌ ಕಾರಣ. ಯಾಕಂದ್ರೆ ಆಡಳಿತ ಪಕ್ಷಕ್ಕೆ ಮೆಜಾರಿಟಿ ಇಲ್ಲ. ಖಲಿಸ್ತಾನಿ ಪರ ಜನರ ಬೆಂಬಲದ ಮೇಲೆನೇ ಡಿಪೆಂಡ್‌ ಆಗಿದೆ. ಹೀಗಾಗಿ ಅವ್ರಿಗೆ ಸಪೋರ್ಟ್‌ ಮಾಡ್ತಿದೆ. ಈ ಪ್ರತ್ಯೇಕತಾವಾದಿಗಳು ನಮಗೆ ಪ್ರಾಬ್ಲಂ ಕೊಡೋದಷ್ಟೇ ಅಲ್ಲದೇ ಕೆನಡಾದಲ್ಲಿ ಕೂಡ ಪ್ರಾಬ್ಲಂ ಕ್ರಿಯೇಟ್‌ ಮಾಡ್ತಿದ್ದಾರೆʼ ಅಂತ ಕೆನಡಾ ಅಸ್ತ್ರವನ್ನ ಕೆನಡಾ ಕಡೆಗೆ ವಾಲಿಸಿದ್ದಾರೆ. ಹೀಗಿದ್ರು ಕೂಡ ಕೆನಡಾ ಇನ್ನೂ ಯಾವುದೇ ಎವಿಡೆನ್ಸ್‌ ಕೊಟ್ಟಿಲ್ಲ, ಕೊಟ್ಟ ನಂತ್ರ ಯೋಚನೆ ಮಾಡ್ತೀವಿ ಅಂತ ಹೇಳಿದ್ದಾರೆ. ಅತ್ತ ಕೆನಡಾದಲ್ಲಿರೋ ಭಾರತದ ರಾಯಭಾರಿ ಇದು ಕೆನಡಾದ ಆಂತರಿಕ ವಿಚಾರ ಅಂದಿದ್ದಾರೆ.

-masthmagaa.com

Contact Us for Advertisement

Leave a Reply