ಜಾಗತಿಕ ಸೇನಾ ಖರ್ಚು ವರದಿ ಮಾಡಿದ SIPRI! ಭಾರತಕ್ಕೆ 4ನೇ ಸ್ಥಾನ!

masthmagaa.com:

ಜಗತ್ತಲ್ಲಿ ಯುದ್ದದ ಕಾರ್ಮೋಡ ಆವರಿಸಿಕೊಳ್ತಿದ್ದಂತೆ ಜಗತ್ತಿನ ಬಹುತೇಕ ದೇಶಗಳು ಶಸ್ತ್ರಾಸ್ತ್ರ ಪೈಪೋಟಿಗೆ ಬಿದ್ದಿರೋದು ಹೊಸ ರಿಪೋರ್ಟ್‌ನಿಂದ ಗೊತ್ತಾಗಿದೆ. ಜಗತ್ತಿನ ಬಹಳಷ್ಟು ದೇಶಗಳು ಮಿಲಿಟರಿಗೆ ಟ್ರಿಲಿಯನ್‌ಗಟ್ಟಲೇ ಹಣ ಸುರಿದಿರೋದು ಬಯಲಾಗಿದೆ. ಕಳೆದ ವರ್ಷ ಅಂದ್ರೆ 2023ರಲ್ಲಿ ಯಾವ ಯಾವ ದೇಶ ಎಷ್ಟೆಷ್ಟು ಹಣ ಖರ್ಚು ಮಾಡಿದ್ವು ಅನ್ನೋ ಬಗ್ಗೆ ಸ್ಟಾಕ್‌ಹೋಮ್‌ ಇಂಟರ್‌ನ್ಯಾಷನಲ್‌ ಪೀಸ್‌ ರಿಸರ್ಚ್‌ ಇನ್ಸ್ಟಿಟ್ಯೂಟ್‌ (SIPRI) ವರದಿ ಮಾಡಿದೆ. ಇದ್ರ ಪ್ರಕಾರ ಒಟ್ಟು ಜಾಗತಿಕವಾಗಿ ಸೇನಾ ಖರ್ಚು 2.4 ಟ್ರಿಲಿಯನ್‌ ಡಾಲರ್‌ ಅಂದ್ರೆ 199.2 ಲಕ್ಷ ಕೋಟಿ ರೂಪಾಯಿಗೆ ರೀಚ್‌ ಆಗಿದೆ. ಈ ಮೂಲಕ 2022ಕ್ಕೆ ಹೋಲಿಸಿದ್ರೆ, ಕಳೆದ ವರ್ಷ 2023ರಲ್ಲಿ ಜಾಗತಿಕ ಮಿಲಿಟರಿ ಖರ್ಚು ಒಟ್ಟು 6.8% ಏರಿಕೆಯಾಗಿದೆ. ಇನ್ನು ಸೇನೆ ಮೇಲೆ ಖರ್ಚು ಮಾಡೋ ಟಾಪ್‌ 10 ದೇಶಗಳ ಪೈಕಿ ಭಾರತ 4ನೇ ಸ್ಥಾನದಲ್ಲಿದ್ದು, 2023ರಲ್ಲಿ ಸೇನೆಗಾಗಿ ಒಟ್ಟು 83.6 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 6.93 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಿದೆ. ಮೊದಲ ಸ್ಥಾನದಲ್ಲಿ ಅಮೆರಿಕ ಇದ್ದು ಒಟ್ಟು 916 ಬಿಲಿಯನ್‌ ಡಾಲರ್‌ ಅಂದ್ರೆ 76.02 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಿದೆ. ಎರಡನೇ ಸ್ಥಾನದಲ್ಲಿ ಚೀನಾವಿದ್ದು ಒಟ್ಟು 296 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 24.56 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಿದೆ. ರಷ್ಯಾ 109 ಬಿಲಿಯನ್‌ ಡಾಲರ್‌ ಅಂದ್ರೆ 9.04 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಿ ಮೂರನೇ ಸ್ಥಾನದಲ್ಲಿದೆ. 5ನೇ ಸ್ಥಾನದಲ್ಲಿ ಸೌದಿ ಅರೇಬಿಯಾ, 75.8 ಬಿಲಿಯನ್‌ ಡಾಲರ್‌ ಅಂದ್ರೆ 6.29 ಲಕ್ಷ ಕೋಟಿ ರೂಪಾಯಿ. 6ನೇ ಸ್ಥಾನದಲ್ಲಿ ಬ್ರಿಟನ್‌, 74.9 ಬಿಲಿಯನ್‌ ಡಾಲರ್‌ ಅಂದ್ರೆ 6.21 ಲಕ್ಷ ಕೋಟಿ ರೂಪಾಯಿ. 7ನೇ ಸ್ಥಾನದಲ್ಲಿ ಜರ್ಮನಿ, 66.8 ಬಿಲಿಯನ್‌ ಡಾಲರ್‌ ಅಂದ್ರೆ 5.54 ಲಕ್ಷ ಕೋಟಿ ರೂಪಾಯಿ. 8ನೇ ಸ್ಥಾನದಲ್ಲಿ ಯುಕ್ರೇನ್‌, 64.8 ಬಿಲಿಯನ್‌ ಡಾಲರ್‌ ಅಂದ್ರೆ 5.37 ಲಕ್ಷ ಕೋಟಿ ರೂಪಾಯಿ. 9ನೇ ಸ್ಥಾನದಲ್ಲಿ ಫ್ರಾನ್ಸ್‌, 61.3 ಬಿಲಿಯನ್‌ ಡಾಲರ್‌ ಅಂದ್ರೆ 5.08 ಲಕ್ಷ ಕೋಟಿ ರೂಪಾಯಿ. ಕೊನೆಯದಾಗಿ 10ನೇ ಸ್ಥಾನದಲ್ಲಿ ಜಪಾನ್‌ ಇದ್ದು, 2023ರಲ್ಲಿ ಒಟ್ಟು 50.32 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 4.17 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಿದೆ.

-masthmagaa.com

Contact Us for Advertisement

Leave a Reply