ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ರಸ್ತೆ ನಿರ್ಮಾಣ ಮಾಡಿದ ಚೀನಾ!

masthmagaa.com:

ಭಾರತದ ಪಕ್ಕದಲ್ಲಿ ಚೀನಾ ಮೆತ್ತಗೆ ಮಸಲತ್ತು ಮಾಡ್ತಿದೆ ಅನ್ನೋದು ಈಗ ಮತ್ತೊಮ್ಮೆ ಬಯಲಾಗಿದೆ. ವಿಶ್ವದ ಅತೀ ಎತ್ತರದ ಯುದ್ಧಭೂಮಿ ಅಂತ ಕರೆಯಲ್ಪಡೋ ಸಿಯಾಚಿನ್‌ ಗ್ಲೇಸಿಯರ್‌ನ ಹತ್ತಿರದಲ್ಲಿ ಅಂದ್ರೆ ಪಿಒಕೆಯಲ್ಲಿ ಚೀನಾ ಕದ್ದುಮುಚ್ಚಿ ರಸ್ತೆ ನಿರ್ಮಾಣ ಮಾಡ್ತಿದೆ ಅಂತ ಸ್ಯಾಟಲೈಟ್‌ ಚಿತ್ರದಲ್ಲಿ ಗೊತ್ತಾಗಿದೆ. ಪಾಕ್‌ ಆಕ್ರಮಿತ ಕಾಶ್ಮೀರದ ಶಕ್ಸ್ಗಮ್‌ ಕಣಿವೆಯಲ್ಲಿ ಚೀನಾದ ಈ ದುಷ್ಟತನವನ್ನ ಯುರೋಪಿಯನ್‌ ಸ್ಪೇಸ್‌ ಏಜೆನ್ಸಿ ಕ್ಯಾಪ್ಚರ್‌ ಮಾಡಿದೆ. ʻಪಿಒಕೆ ಗಣಿಗಾರಿಕೆ ಮಾಡಿ ಅಲ್ಲಿಂದ ಯುರೇನಿಯಂನಂತಹ ಖನಿಜವನ್ನ ಸಾಗಿಸೋಕೆ ಚೀನಾ ಈ ರಸ್ತೆ ನಿರ್ಮಾಣ ಮಾಡ್ತಿದೆ. ಚೀನಾದ ಕ್ಸಿನ್‌ಜಿಯಾಂಗ್‌ ಪ್ರದೇಶಕ್ಕೆ ಇದನ್ನ ಸಾಗಿಸಲಾಗ್ತಿದೆ. ಜೊತೆಗೆ ಭಾರತದ ವಿರುದ್ದ ರಸ್ತೆ ಸಂಪರ್ಕ ಗಟ್ಟಿ ಮಾಡೊಕೂ ಇದು ಬಳಕೆಯಾಗೋ ಸಾಧ್ಯತೆ ಇದೆ ಅಂತ ರಕ್ಷಣಾ ತಜ್ಞರು ಹೇಳಿದ್ದಾರೆ. ಅಂದ್ಹಾಗೆ 1947ರಿಂದ ಪಾಕ್‌ ಹಿಡಿತದಲ್ಲಿದ್ದ ಈ ಪ್ರದೇಶವನ್ನ 1963ರಲ್ಲಿ ಪಾಕಿಸ್ತಾನ ಚೀನಾಗೆ ಬಿಟ್ಟುಕೊಟ್ಟಿತ್ತು. ಈ ಪ್ರದೇಶದಲ್ಲಿ ಚೀನಾದ ಸಾರ್ವಭೌಮತ್ವವನ್ನ ಕೂಡ ಪಾಕಿಸ್ತಾನ ಗುರುತಿಸಿತ್ತು. ಅಲ್ಲಿಂದ ಚೀನಾ ಇದನ್ನ ಭಾರತದ ವಿರುದ್ದ ಮತ್ತು ಪಾಕಿಸ್ತಾನಕ್ಕೆ ಸಂಪರ್ಕ ಕಲ್ಪಿಸೋಕೆ ಬಳಸಿಕೊಳ್ತಾನೇ ಇದೆ. ಈಗ ದೊಡ್ಡ ಪ್ರಮಾಣದಲ್ಲಿ ಕಾಮಗಾರಿ ಮಾಡ್ತಿದ್ದು ರಹಸ್ಯವಾಗಿ ರಸ್ತೆ ಜಾಲ ಹೆಣೀತಿದೆ ಅಂತ ಯುರೋಪಿಯನ್‌ ಸ್ಪೇಸ್‌ ಏಜೆನ್ಸಿ ಚಿತ್ರಗಳು ಹೇಳ್ತಿವೆ. ಇನ್ನು ಈ ವಿಚಾರಕ್ಕೆ ಸಂಬಂಧಪಟ್ಟಂತೆ ಈ ಬಗ್ಗೆ ಭಾರತ ಸರ್ಕಾರದಿಂದ ಯಾವ್ದೇ ಪ್ರತಿಕ್ರಿಯೆ ಬಂದಿಲ್ಲ.

-masthmagaa.com

Contact Us for Advertisement

Leave a Reply