ಭಾರತಕ್ಕಿಂತ ಅಫ್ಘಾನ್‌ನಿಂದಲೇ ಪಾಕ್‌ಗೆ ಸಮಸ್ಯೆ: ಪಾಕ್‌ ರಾಯಭಾರಿ

masthmagaa.com:

ಇನ್ನೊಂದು ಕಡೆ ಅಫ್ಘಾನಿಸ್ತಾನ ನಮಗೆ ತುಂಬಾ ಟ್ರಬಲ್‌ ಮಾಡ್ತಿದೆ ಅಂತ ಪಾಕಿಸ್ತಾನ ಹೇಳಿಕೊಂಡಿದೆ. ಇರಾನ್‌ನಲ್ಲಿರೋ ಪಾಕಿಸ್ತಾನದ ರಾಯಭಾರಿ ಆಸಿಫ್‌ ದುರಾನಿ ಅವ್ರು, ʻಅಫ್ಘಾನಿಸ್ತಾನದ ಆಂತರಿಕ ಪರಿಸ್ಥಿತಿಯಿಂದಾಗಿ ನಮ್ಮ ದೇಶಕ್ಕೆ ಹೆಚ್ಚು ಸಮಸ್ಯೆಯಾಗಿದೆ…ಬ್ಯಾನ್‌ ಆಗಿರೋ ಅಫ್ಘಾನ್‌ನ TTP ಉಗ್ರ ಸಂಘಟನೆಯ ದಾಳಿ ಇತ್ತೀಚೆಗೆ ಪಾಕಿಸ್ತಾನದಲ್ಲಿ ಜಾಸ್ತಿಯಾಗ್ತಿದೆ. ಕಳೆದ 2 ದಶಕಗಳಲ್ಲಿ ಒಟ್ಟು 80,000 ಪಾಕಿಸ್ತಾನಿ ಪ್ರಜೆಗಳು ಉಗ್ರ ದಾಳಿಗೆ ಮೃತಪಟ್ಟಿದ್ದಾರೆ. ಇನ್ನೂ ಕೂಡ ಈ ಸಂಖ್ಯೆ ಏರ್ತಲೇ ಇದೆ. ಇದು ಈ ಹಿಂದೆ ಭಾರತ ಜೊತೆಗೆ ನಡೆದ ಮೂರು ಯುದ್ಧಗಳಿಂದಲೂ ಭಾರೀ ಪರಿಣಾಮ ಬೀರಿದೆ ಅಂತ ಪಾಕಿಸ್ತಾನದ ರಾಯಭಾರಿ ಹೇಳಿದೆ.

-masthmagaa.com

Contact Us for Advertisement

Leave a Reply