ಆಪತ್ಬಾಂಧವನಾದ ಭಾರತದ ನೌಕಾ ಪಡೆ: ಪಾಕ್‌ ಸಿಬ್ಬಂದಿಯ ರಕ್ಷಣೆ!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಅರಬ್ಬಿ ಸಮುದ್ರದಲ್ಲಿ ಇರಾನ್‌ನ ಮೀನುಗಾರಿಕಾ ಹಡಗೊಂದನ್ನ ಸಂಕಷ್ಟದಿಂದ ಪಾರು ಮಾಡಿ ಓರ್ವ ಪಾಕ್‌ ಸಿಬ್ಬಂದಿಯನ್ನ ಭಾರತೀಯ ಯುದ್ದನೌಕೆ ರಕ್ಷಣೆ ಮಾಡಿದೆ. ಅಂದ್ಹಾಗೆ ಏಪ್ರೀಲ್‌ 30 ರಂದು ಅರಬ್ಬಿ ಸಮುದ್ರದಲ್ಲಿ ಕಡಲ್ಗಳ್ಳರನ್ನ ನಿಗ್ರಹಿಸಲು ಭಾರತದ INS ಸುಮೇಧಾ ಯುದ್ದನೌಕೆ ಗಸ್ತು ತಿರಗ್ತಿತ್ತು. ಈ ವೇಳೆ ಅಪಾಯದಲ್ಲಿದ್ದ ಇರಾನ್‌ನ ಈ ಹಡಗು ತನ್ನ ಸಹಾಯಕ್ಕಾಗಿ ಕರೆ ನೀಡಿತ್ತು. ತಕ್ಷಣವೇ ನೆರವಿಗೆ ಧಾವಿಸಿದ ಭಾರತೀಯ ನೌಕಾ ಪಡೆ ಹಡಗಿನಲ್ಲಿದ್ದ ಓರ್ವ ಪಾಕ್‌ ಸಿಬ್ಬಂದಿಯನ್ನ ರಕ್ಷಿಸಿ, ತುರ್ತು ಚಿಕಿತ್ಸೆ ನೀಡಿದೆ ಅಂತ ಖುದ್ದು ನೌಕಾ ಪಡೆ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply