ಭಾರತದಲ್ಲಿ ಎಲೆಕ್ಷನ್‌ ಗಮನಿಸಲು ಬಂದ 75 ವಿದೇಶಿ ಪ್ರತಿನಿಧಿಗಳು!

masthmagaa.com:

ವಿಶ್ವದ ದೊಡ್ಡ ಚುನಾವಣೆ ಅಂದ್ರೆ ಭಾರತದ ಲೋಕಸಭೆ ಚುನಾವಣೆ. ಇದನ್ನ ಗಮನಿಸಲು 23 ದೇಶಗಳ 75 ಪ್ರತಿನಿಧಿಗಳು ಇದೀಗ ಭಾರತಕ್ಕೆ ಬಂದಿದ್ದಾರೆ. ಈ ಬಗ್ಗೆ ಖುದ್ದು ಕೇಂದ್ರ ಚುನಾವಣಾ ಆಯೋಗ ಅಧಿಕೃತ ಪ್ರಕಟಣೆ ಹೊರಡಿಸಿದೆ. ಇದ್ರ ಪ್ರಕಾರ, ರಷ್ಯಾ, ಭೂತಾನ್‌, ಮಂಗೋಲಿಯಾ, ಆಸ್ಟ್ರೇಲಿಯಾ, ಮಡಗಾಸ್ಕರ್‌, ಫಿಜಿ, ಕಿರ್ಗಿಜ್‌ ರಿಪಬ್ಲಿಕ್‌, ಮಾಲ್ಡೊವಾ, ಸೀಶೆಲ್ಸ್‌, ಕಾಂಬೋಡಿಯ, ಜಿಂಬಾಂಬ್ವೆ, ಶ್ರೀಲಂಕಾ, ಬಾಂಗ್ಲಾ, ಖಜಕಿಸ್ತಾನ್‌, ಜಾರ್ಜಿಯಾ, ಚಿಲಿ, ಮಾಲ್ಡೀವ್ಸ್‌, ಪಪೂವಾ ನ್ಯೂ ಗಿನಿಯಾ,‌ ಉಜ್ಬೇಕಿಸ್ತಾನ್‌, ಟುಶಿನಿಯಾ, ಫಿಲಿಫೈನ್ಸ್ ಮತ್ತು ನಮೀಬಿಯಾಗಳಿಂದ ಒಟ್ಟು 75 ಎಲೆಕ್ಷನ್‌ ಮ್ಯಾನೇಜ್‌ಮೆಂಟ್‌ ಸಮಿತಿಯ ಇಂಟರ್‌ನ್ಯಾಷನ್‌ ವಿಸಿಟರ್ಸ್ ಭಾರತಕ್ಕೆ ಬಂದಿದ್ದಾರೆ. ಇನ್ನು ಇಂಟರ್‌ನ್ಯಾಶನಲ್‌ ಫೌಂಡೇಷನ್‌ ಫಾರ್‌ ಎಲೆಕ್ಟೋರಲ್‌ ಸಿಸ್ಟಮ್ಸ್‌ (IFES) ಸದಸ್ಯರು ಮತ್ತು ಭೂತಾನ್‌ ಮತ್ತು ಇಸ್ರೇಲ್‌ನ ಮೀಡಿಯಾ ಟೀಮ್ಸ್‌ ಕೂಡ ಭಾಗವಹಿಸಲಿದೆ. ಮೇ 4ರಿಂದ ಶುರುವಾದ ಈ ʻಎಲೆಕ್ಷನ್‌ ವಿಸಿಟರ್ಸ್‌ ಪ್ರೊಗ್ರಾಮ್‌ʼನಲ್ಲಿ ಫಾರಿನ್‌ ವಿಸಿಟರ್‌ಗಳ ಮುಂದೆ ಲೋಕಸಭಾ ಚುನಾವಣಾ ವ್ಯವಸ್ಥೆಯ ಕಾರ್ಯವೈಖರಿ ಬಗ್ಗೆ ಪರಿಚಯಿಸಲು ಚುನಾವಣಾ ಆಯೋಗ ಮೊದ್ಲೆ ಸಕಲ ಸಿದ್ದತೆ ಮಾಡ್ಕೊಂಡಿದೆ. ಜೊತೆಗೆ 75 ವಿಸಿಟಿರ್‌ಗಳ ಈ ಟೀಮ್‌ ಡಿವೈಡ್‌ ಆಗಿ ಮಹಾರಾಷ್ಟ್ರ, ಗೋವಾ, ಗುಜರಾತ್‌, ಕರ್ನಾಟಕ, ಮಧ್ಯ ಪ್ರದೇಶ ಹಾಗೂ ಉತ್ತರ ಪ್ರದೇಶ ಅಂತ 6 ರಾಜ್ಯಗಳಲ್ಲಿ ಚುನಾವಣಾ ಪ್ರಕ್ರಿಯೆಯನ್ನ ಗಮನಿಸಿ, ಮೇ 9ಕ್ಕೆ ತನ್ನ ಕೆಲ್ಸ ಪೂರ್ಣಗೊಳಿಸಲಿದೆ.

masthmagaa.com

Contact Us for Advertisement

Leave a Reply