ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಮೇಲೆ ಗುಂಡಿನ ದಾಳಿ!

masthmagaa.com:

ಅಪ್ರಾಪ್ತೆ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣದ ಸಂಬಂಧ ಪೊಲೀಸರು ಆರೋಪಿ ಮೇಲೆ ಗುಂಡಿನ ದಾಳಿ ನಡೆಸಿ ಅರೆಸ್ಟ್‌ ಮಾಡಿರೋ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಅಪ್ರಾಪ್ತೆ ಬಾಲಕಿ ಜೊತೆ ಸ್ನೇಹ ಬೆಳೆಸಿ, ಪ್ರೀತಿಸೋದಾಗಿ ಹೇಳಿ… ಅತ್ಯಾಚಾರ ನಡೆಸಿ ಆಕೆ ಗರ್ಭಿಣಿಯಾಗಲು ಕಾರಣನಾದ ಸದ್ದಾಂ ಹುಸೇನ್‌ ಅನ್ನೋ ಆರೋಪಿಯನ್ನ ಪೊಲೀಸರು ಇದೀಗ ಅರೆಸ್ಟ್‌ ಮಾಡಿದ್ದಾರೆ. ಅಂದ್ಹಾಗೆ ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್‌ ಆಗೋಕೆ ಪ್ರಯತ್ನಿಸಿದ ಕಾರಣ ಪೊಲೀಸರು ಆತನ ಎಡಗಾಲಿಗೆ ಗುಂಡು ಹಾರಿಸಿದ್ದಾರೆ. ಸದ್ಯ ಈತನನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಹಲ್ಲೆಯಿಂದ ಗಾಯಗೊಂಡ ವಿದ್ಯಾಗಿರಿ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಸಂಗಮೇಶ ಮತ್ತು ಕಾನ್ಸ್‌ಟೇಬಲ್‌ ಅರುಣ್‌ ಅವ್ರಿಗೂ ಆಸ್ಪತ್ರೆಲೀ ಚಿಕಿತ್ಸೆ ನೀಡಲಾಗ್ತಿದೆ.

-masthmagaa.com

Contact Us for Advertisement

Leave a Reply