ಅದಾನಿ ಗ್ರೂಪ್‌ ವಿದೇಶಿ ಹೂಡಿಕೆದಾರರಿಂದ ನಿಯಮಗಳ ಉಲ್ಲಂಘನೆ!

masthmagaa.com:

ಅದಾನಿ ಗ್ರೂಪ್‌ ಕಂಪನಿಗಳ ಮೇಲೆ ಹೂಡಿಕೆ ಮಾಡಿರೋ ಒಟ್ಟು 12 ಫಾರೀನ್‌ ಫಂಡ್‌ಗಳು ತಮ್ಮ ಹೂಡಿಕೆ ನಿಯಮಗಳನ್ನ ಉಲ್ಲಂಘಿಸಿದೆ ಅಂತ ಸೆಬಿ ತನ್ನ ತನಿಖೆಯಲ್ಲಿ ಪತ್ತೆ ಹಚ್ಚಿರೋದು ವರದಿಯಾಗಿದೆ. ಕಳೆದ ವರ್ಷ ಅದಾನಿ ಗ್ರೂಪ್‌ಗೆ ಫಂಡಿಂಗ್‌ ಮಾಡ್ತಿದ್ದ ಹತ್ತಾರು ವಿದೇಶಿ ಹೂಡಿಕೆದಾರರಿಗೆ ಸೆಬಿ ನೋಟಿಸ್‌ ನೀಡಿತ್ತು. ಸೋ ಇಂತಹ ಸಂಸ್ಥೆಗಳು ಮಾಡಿರೋ ಒಂದೊಂದು ನಿಯಮದ ಉಲ್ಲಂಘನೆ ಮೇಲೆ ಸುಮಾರು 1 ಕೋಟಿ ಪೆನಾಲ್ಟಿ ಹಾಕಲಾಗುತ್ತೆ. ಜೊತೆಗೆ ಸ್ಟಾಕ್‌ ಮಾರ್ಕೆಟ್‌ನಿಂದಲೂ ಇವ್ರನ್ನ ಹೊರ ಇಡಲಾಗುತ್ತೆ ಅಂತ ಮಾಹಿತಿ ಬರ್ತಿದೆ. ಸದ್ಯ ಈ ಬಗ್ಗೆ ಸೆಬಿ ಆಗ್ಲಿ…ಅದಾನಿ ಗ್ರೂಪ್‌ ಆಗ್ಲಿ ಯಾವ್ದೇ ರೀತಿ ಕಮೆಂಟ್‌ ಮಾಡಿಲ್ಲ.

-masthmagaa.com

Contact Us for Advertisement

Leave a Reply