ಮುಸ್ಲಿಮರ ವಿರುದ್ದ ಮೋದಿ ದ್ವೇಷದ ಹೇಳಿಕೆ: ವಿಪಕ್ಷಗಳ ಆರೋಪ!

masthmagaa.com:

ಕಾಂಗ್ರೆಸ್‌ ವಿರುದ್ದ ಮಾತಾಡುವಾಗ ಪ್ರಧಾನಿ ಮೋದಿಯವರು ಕೊಟ್ಟಿರೋ ಹೇಳಿಕೆಯೊಂದು ಈಗ ತೀವ್ರ ವಿವಾದಕ್ಕೆ ಗುರಿಯಾಗಿದೆ. ಮುಸ್ಲಿಮರ ವಿರುದ್ದ ಮೋದಿ ದ್ವೇಷದ ಹೇಳಿಕೆ ಕೊಟ್ಟಿದ್ದಾರೆ ಅಂತ ಕಾಂಗ್ರೆಸ್‌ ಸೇರಿ ಅನೇಕ ವಿಪಕ್ಷಗಳು ಆರೋಪ ಮಾಡಿವೆ. ರಾಜಸ್ಥಾನದ ಚುನಾವಣಾ ರ್ಯಾಲಿ ವೇಳೆ ಮೋದಿ ಒಂದಷ್ಟು ಹೇಳಿಕೆ ಕೊಟ್ಟಿದ್ರು. ʻʻಅವರು ಅಂದ್ರೆ ಕಾಂಗ್ರೆಸ್‌ನವರು ಅಧಿಕಾರದಲ್ಲಿದ್ದಾಗ ದೇಶದ ಸಂಪತ್ತಿನ ಮೇಲೆ ಮೊದಲ ಅಧಿಕಾರ ಮುಸಲ್ಮಾನರಿಗೆ ಇದೆ ಅಂತ ಹೇಳಿದ್ರು. ಇದರ ಅರ್ಥ ಇವ್ರು ಸಂಪತ್ತೆಲ್ಲವನ್ನ ಕೂಡಿಸಿ ಯಾರಿಗೆ ಕೊಡ್ತಾರೆ ಗೊತ್ತಾ? ಯಾರಿಗೆ ಹೆಚ್ಚು ಮಕ್ಕಳಿವೆ ಅವರಿಗೆ ಹಂಚ್ತಾರೆ, ಒಳನುಸುಳುಕೋರರಿಗೆ ಹಂಚ್ತಾರೆ. ನೀವು ಶ್ರಮಪಟ್ಟು ಗಳಿಸಿದ ದುಡ್ಡು ನುಸುಳುಕೋರರಿಗೆ ಕೊಡ್ಬೇಕಾ? ಅಂತ ಕೇಳಿದ್ರು..ಜೊತೆಗೆ ಇದೆಲ್ಲಾ ಕಾಂಗ್ರೆಸ್‌ನ ಮ್ಯಾನಿಫೆಸ್ಟೋದಲ್ಲಿ ಇದೆ. ಅವ್ರು ನಮ್ಮ ತಾಯಂದಿರ, ಅಕ್ಕಂದಿರ ಬಳಿ ಇರೋ ಚಿನ್ನವನ್ನ ಲೆಕ್ಕ ಹಾಕ್ತಾರೆ, ಸರ್ವೇ ಮಾಡ್ತಾರೆ, ನಂತ್ರ ಆ ಸಂಪತ್ತನ್ನ ಹಂಚ್ತಾರೆ. ಯಾರಿಗೆ? ಮನಮೋಹನ್‌ ಸಿಂಗ್‌ ಸರ್ಕಾರ ಹೇಳಿದ ಹಾಗೆ ಸಂಪತ್ತಿನ ಮೇಲೆ ಮೊದಲ ಅಧಿಕಾರ ಇರೋ ಮುಸಲ್ಮಾನರಿಗೆ. ಇದು ಅರ್ಬನ್‌ ನಕ್ಸಲ್‌ ಯೋಚನೆ, ತಾಯಂದಿರೇ, ಅಕ್ಕಂದಿರೇ ಇವ್ರು ನಿಮ್ಮ ಮಂಗಳಸೂತ್ರವನ್ನೂ ಬಿಡಲ್ಲ ಅಂತ ಮೋದಿಯವರು ಹೇಳಿಕೆ ಕೊಟ್ಟಿದ್ರು. ಇದರ ಬೆನ್ನಲ್ಲೇ ಕಾಂಗ್ರೆಸ್‌ ನಾಯಕರು ಮೋದಿಯವರನ್ನ ಮೇಲೆ ಆಕ್ರೋಶ ಹೊರಹಾಕಿದ್ದಾರೆ.ʻʻ INDIA ಕೂಟ ಮೊದಲ ಹಂತದ ಚುನಾವಣೆಯಲ್ಲಿ ಗೆದ್ದ ಕಾರಣದಿಂದ ಮೋದಿಯವರು ದ್ವೇಷ ಭಾಷಣ ಮಾಡಿದ್ದಾರೆ. ಭಾರತದ ಇತಿಹಾಸದಲ್ಲಿ, ಯಾವುದೇ ಪ್ರಧಾನಿ ಕೂಡ ಮೋದಿಯವರ ಥರ ತಮ್ಮ ಹುದ್ದೆಯ ಘನತೆಯನ್ನು ಕಡಿಮೆ ಮಾಡಿಲ್ಲ ಅಂತ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನಾ ಖರ್ಗೆ ಹೇಳಿದ್ದಾರೆ. ಇತ್ತ ರಾಹುಲ್‌ ಗಾಂಧಿ ಪ್ರತಿಕ್ರಿಯಿಸಿ ಮೊದಲ ಹಂತದ ಚುನಾವಣೆಯಲ್ಲಿ ಕೂಟಕ್ಕೆ ಹೆಚ್ಚಿನ ಶಕ್ತಿ ಬಂದಿರೋದಕ್ಕೆ ಮೋದಿ ಭಯಗೊಂಡಿದ್ದಾರೆ. ದೇಶ ಈಗ ಸಮಸ್ಯೆಗಳ ಮೇಲೆ ಮತ ಹಾಕುತ್ತೆ. ದೇಶ ದಾರಿ ತಪ್ಪಲ್ಲ ಅಂತ ಹೇಳಿದ್ದಾರೆ. ಜೊತೆಗೆ ಕಾಂಗ್ರೆಸ್ ಪ್ರಧಾನಿ ಮೋದಿಯವರ ವಿರುದ್ದ ಚುನಾವಣಾ ಆಯೋಗಕ್ಕೂ ದೂರು ಕೊಟ್ಟಿದೆ. ಆದರೆ ಕಾಂಗ್ರೆಸ್‌ನ ಈ ಆರೋಪದ ಹೊರತಾಗಿ ಕೂಡ ಮೋದಿಯವರು ಮತ್ತೆ ಅದೇ ಹೇಳಿಕೆಯನ್ನ ಯುಪಿಯಲ್ಲೂ ನೀಡಿದ್ದಾರೆ. ಸೋಮವಾರ ಅಲಿಗಢನಲ್ಲಿ ಮಾತಾಡ್ತಾ ʻʻನಿಮ್ಮ ಮಂಗಳಸೂತ್ರಕ್ಕೆ ಕಾಂಗ್ರೆಸ್‌ ಆಡಳಿತದಲ್ಲಿ ರಕ್ಷಣೆ ಇಲ್ಲ. ಅವರು ಅಧಿಕಾರಕ್ಕೆ ಬಂದ್ರೆ ಯಾರು ಎಷ್ಟು ಸಂಪಾದನೆ ಮಾಡ್ತಾರೆ ಅಂತ ತನಿಖೆ ಮಾಡ್ತಾರೆ. ನನ್ನ ತಾಯಿ ಮತ್ತು ತಂಗಿಯರು ಚಿನ್ನ ಇಟ್ಕೊಂಡಿದ್ದಾರೆ. ಅದು ಅವರಿಗೆ ಪವಿತ್ರ. ಆದ್ರೆ ಅವರು ಮಂಗಳ ಸೂತ್ರದ ಮೇಲೂ ಕಣ್ಣಿಡ್ತಾರೆ ಅಂತ ಕಾಂಗ್ರೆಸ್‌ ವಿರುದ್ದ ಕಿಡಿಕಾರಿದ್ದಾರೆ.

-masthmagaa.com

Contact Us for Advertisement

Leave a Reply