ಮೋದಿಯವ್ರ ಹೇಳಿಕೆ ಪರಿಶೀಲಿಸ್ತಿದ್ದೇವೆ: ಚುನಾವಣಾ ಆಯೋಗ

masthmagaa.com:

ಮುಸ್ಲಿಮರ ವಿರುದ್ದ ದ್ವೇಷ ಭಾಷಣ ಮಾಡಿದ್ದಾರೆ ಅಂತ ಆರೋಪಿಸಿ ಪ್ರಧಾನಿ ನರೇಂದ್ರ ಮೋದಿಯವ್ರ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ ದೂರು ಕೊಟ್ಟಿತ್ತು. ಇದೀಗ ಮೋದಿ ವಿರುದ್ಧ ಮಾಡಲಾಗಿರೋ ಆರೋಪಗಳನ್ನ ಪರಿಗಣಿಸ್ತಿದ್ದೇವೆ ಅಂತ ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. ʻಮೋದಿಯವ್ರು ನೀಡಿರೋ ಭಾಷಣವನ್ನ ಎಲ್ಲಾ ಆಂಗಲ್‌ನಿಂದಲೂ ನೋಡಲಾಗ್ತಿದೆ. ನಿಜವಾಗ್ಲೂ ಮೋದಿಯವ್ರು ನಿರ್ದಿಷ್ಟ ಅಲ್ಪಸಂಖ್ಯಾತರ ಸಮುದಾಯವನ್ನ ಟೀಕಿಸಿದ್ರಾ…. ಅಥವಾ ಕಾಂಗ್ರೆಸ್‌ ಅವ್ರಿಗೆ ವೋಟ್‌ ಹಾಕ್ಬಾರ್ದು ಅಂತ ಕೋಮುವಾದಿ ಹೇಳಿಕೆ ನೀಡಿದ್ರಾ… ಅಥ್ವಾ ಈ ಹಿಂದೆ ಕಾಂಗ್ರೆಸ್‌ ಆಡಳಿತದಲ್ಲಿದ್ದವ್ರ ಹಳೆ ಭಾಷಣವನ್ನ ಈಗಿನ ಕಾಂಗ್ರೆಸ್‌ ಪ್ರಣಾಳಿಕೆಗೆ ಹೋಲಿಸೋ ಕೆಲಸವಷ್ಟೇ ಮಾಡಿದ್ರಾ ಅಂತ ಪರಿಶೀಲಿಸಲಾಗ್ತಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply