ಬಿಜೆಪಿ & ಕಾಂಗ್ರೆಸ್‌ ನಾಯಕರಿಗೆ ಚುನಾವಣಾ ಆಯೋಗ ನೋಟಿಸ್‌

masthmagaa.com:

ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ತಮ್ಮ ಚುನಾವಣಾ ಪ್ರಚಾರದ ಭಾಷಣ ವೇಳೆ, ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಅಂತ ಚುನಾವಣಾ ಆಯೋಗದಲ್ಲಿ ದೂರು ದಾಖಲಾಗಿತ್ತು. ಈ ಸಂಬಂಧ ಏಪ್ರಿಲ್‌ 29ರ ಬೆಳಿಗ್ಗೆ 11 ಗಂಟೆಯೊಳಗೆ ಪ್ರತಿಕ್ರಿಯೆ ಕೊಡುವಂತೆ ಎರಡೂ ಪಕ್ಷದ ನಾಯಕರಿಗೆ ಚುನಾವಣಾ ಆಯೋಗ ನೋಟಿಸ್‌ ನೀಡಿದೆ. ಈ ನೋಟಿಸ್‌ನಲ್ಲಿ, ʻತಮ್ಮ ಅಭ್ಯರ್ಥಿಗಳು ಮತ್ತು ಸ್ಟಾರ್‌ ಕ್ಯಾಂಪೇನರ್‌ಗಳ ನಡತೆ ಮತ್ತು ಹೇಳಿಕೆಗಳ ಜವಾಬ್ದಾರಿಯನ್ನ ಖುದ್ದು ಆಯಾ ಪಕ್ಷಗಳೇ ವಹಿಸ್ಬೇಕು. ದೊಡ್ಡ ದೊಡ್ಡ ಅಧಿಕಾರದಲ್ಲಿರೋ ನಾಯಕರು ಪ್ರಚಾರದ ವೇಳೆ ನೀಡೋ ಹೇಳಿಕೆಗಳು ಬಹಳ ಸೀರಿಯಸ್‌ ಪರಿಣಾಮ ಬೀರುತ್ತೆʼ ಅಂತ ಚುನಾವಣಾ ಆಯೋಗ ಉಲ್ಲೇಖಿಸಿದೆ. ಅಂದ್ಹಾಗೆ ʻದೇಶದಲ್ಲಿ ಬಡತನ ಜಾಸ್ತಿಯಾಗ್ತಿದೆ ಅಂತೇಳಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಜನರಿಗೆ ದಾರಿತಪ್ಪಿಸೋ ಹೇಳಿಕೆ ನೀಡ್ತಿದ್ದಾರೆ. ದಕ್ಷಿಣ ಮತ್ತು ಉತ್ತರ ಅಂತ ದೇಶವನ್ನ ವಿಭಜನೆ ಮಾಡಿ, ಚುನಾವಣೆಯ ವಾತಾವರಣ ಹಾಳು ಮಾಡ್ತಿದ್ದಾರೆ. ಸೋ ಅವ್ರ ವಿರುದ್ದ ಕಠಿಣ ಕ್ರಮ ತೆಗೆದ್ಕೊಳ್ಳಿʼ ಅಂತ ಬಿಜೆಪಿ ಚುನಾವಣಾ ಆಯೋಗದ ಬಳಿ ದೂರು ದಾಖಲಿಸಿತ್ತು. ಅತ್ತ ಕಾಂಗ್ರೆಸ್‌ ಕೂಡ, ʻಪ್ರಧಾನಿ ನರೇಂದ್ರ ಮೋದಿಯವ್ರು ದೇಶದಲ್ಲಿ ಧರ್ಮದ ಆಧಾರದ ಮೇಲೆ ಒಡಕು ಮೂಡಿಸೋ ಹೇಳಿಕೆ ಕೊಡ್ತಿದ್ದಾರೆ. ಅವರ ಸ್ಥಾನವನ್ನ ಪರಿಗಣಿಸದೇ ಅವರನ್ನ ಎಲೆಕ್ಷನ್‌ಗೆ ಅನರ್ಹ ಮಾಡ್ಬೇಕು ಅಂತ ಕಾಂಗ್ರೆಸ್‌ ಆರೋಪ ಮಾಡಿತ್ತು. ಅದಕ್ಕೆ ತಕ್ಕಂತೆ ಬಿಜೆಪಿ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವ್ರಿಗೆ ಚುನಾವಣಾ ಆಯೋಗ ಈಗ ನೋಟಿಸ್‌ ಜಾರಿ ಮಾಡಿದೆ. ಇನ್ನು ಚುನಾವಣಾ ಆಯೋಗದ ಈ ನೋಟಿಸ್‌ನಲ್ಲಿ ನರೇಂದ್ರ ಮೋದಿಯವ್ರ ಅಥ್ವಾ ರಾಹುಲ್‌ ಗಾಂಧಿಯವ್ರ ಹೆಸರು ಉಲ್ಲೇಖಿಸಲಾಗಿಲ್ಲ. ಆದರೆ ಅವ್ರ ವಿರುದ್ಧ ಮಾಡಲಾಗಿರೋ ಆರೋಪಗಳನ್ನ ಮಾತ್ರ ಮೆನ್ಶನ್‌ ಮಾಡಲಾಗಿದೆ. ಹೀಗಾಗಿ ಅವರ ಪಕ್ಷದ ಅಧ್ಯಕ್ಷರಿಗೆ ನೋಟಿಸ್‌ ಕೊಡಲಾಗಿದೆ. ಇನ್ನು‌ ನಾಯಕರಿಗೆ ಹೇಳಿಕೆಗಳಿಗೆ ಪಕ್ಷಗಳಿಗೆ ನೋಟಿಸ್ ನೀಡ್ತಿರೋದು ಕೂಡ ಇದೇ ಮೊದಲು ಅಂತಲೂ ಹೇಳಲಾಗ್ತಿದೆ. ಇಷ್ಟು ದಿನ ನಾಯಕರಿಂದ ಸ್ಟೇಟ್‌ಮೆಂಟ್‌ ಬಂದ್ರೆ ಅವರಿಗೂ ನೋಟಿಸ್‌ ಕೊಡಲಾಗ್ತಿತ್ತು. ಆದ್ರೆ ಈಗ ಪಕ್ಷಕ್ಕೆ ನೀಡ್ತಿರೋದು ಇದೇ ಮೊದಲು ಅಂತೇಳಲಾಗ್ತಿದೆ.

-masthmagaa.com

Contact Us for Advertisement

Leave a Reply