ನರೇಂದ್ರ ಮೋದಿ ಹೇಳಿಕೆಯನ್ನ ತಿರುಚಿದ ಪಾಕ್‌ ಆ್ಯಂಕರ್‌!

masthmagaa.com:

ಇತ್ತೀಚಿಗೆ ಕಾಂಗ್ರೆಸ್‌ ವಿರುದ್ದ ಮೋದಿಯವ್ರು ಕೊಟ್ಟ ಹೇಳಿಕೆಯನ್ನ ಪಾಕ್‌ ಮಾಧ್ಯಮಗಳು ತಿರುಚಿದ್ದು ಅರಬ್‌ ಮತ್ತು ಭಾರತದ ಸಂಬಂಧದ ಬಗ್ಗೆ ಮಾತಾಡಿದ್ದಾರೆ. ರಾಜಸ್ಥಾನದ ರ್ಯಾಲಿ ವೇಳೆ ಮೋದಿಯವ್ರು, ಕಾಂಗ್ರೆಸ್‌ರನ್ನ ಟಾರ್ಗೆಟ್‌ ಮಾಡಿ, ʻಅರ್ಬನ್‌ ನಕ್ಸಲರುʼ ಅಂತ ಕರೆದಿದ್ರು. ʻಈ ಅರ್ಬನ್‌ ನಕ್ಸಲರ ಮೈಂಡ್‌ಸೆಟ್‌ ಹೊಂದಿರೋರು ನಿಮ್ಮ ಮಂಗಳಸೂತ್ರವನ್ನ ಕೂಡ ಬಿಡಲ್ಲʼ ಅಂತೇಳಿದ್ರು. ಸೋ ಮೋದಿಯವ್ರ ಈ ಹೇಳಿಕೆಯನ್ನ ತಿರುಚಿರೋ ಪಾಕ್‌ ಆಂಕರ್‌ , ಅರ್ಬನ್‌ ನಕ್ಸಲರನ್ನ ʻಅರಬ್‌ ನಸಲ್‌ʼ ಅಂತ ಬದಲಾಯಿಸಿದ್ದಾರೆ. ಅಂದ್ರೆ ಅರಬ್‌ರ ವಂಶಾವಳಿ ಅಂತ. ʻʻಒಂದು ಕಡೆ ಅರಬ್‌ ನಸಲ್‌ ಮೈಂಡ್‌ಸೆಟ್‌ ಹೊಂದಿರೋರು ನಿಮ್ಮ ಮಂಗಳಸೂತ್ರವನ್ನ ಕೂಡ ಬಿಡಲ್ಲ ಅಂತ ಮೋದಿಯವ್ರು ಹೇಳ್ತಾರೆ. ಆದ್ರೆ ಆ ಕಡೆ ಅರಬ್‌ರು ಮಾತ್ರ ಮೋದಿಯವ್ರನ್ನ ಕರೆದು…ಗೌರವ ನೀಡಿ ಪ್ರಶಸ್ತಿಯನ್ನೆಲ್ಲಾ ಕೊಡ್ತಾರೆ. ಏನಿದು? ಒಂದು ಕಡೆ ಅವರಿಗೆ ಗೌರವ, ಈ ಕಡೆ ಅವ್ರ ಬಗ್ಗೆನೇ ಕೆಟ್ಟ ಹೇಳಿಕೆಗಳನ್ನ ನೀಡ್ತಾರೆʼ ಅಂತ ಆಂಕರ್‌ ಲೈವ್‌ನಲ್ಲೇ ಕೂತು ಹೇಳಿರೋದು ಸಾಕಷ್ಟು ಟ್ರೋಲ್‌ಗೆ ಒಳಗಾಗಿದೆ.

-masthmagaa.com

Contact Us for Advertisement

Leave a Reply