ಯುಪಿ ಪ್ರಚಾರದ ವೇಳೆ ರಾಹುಲ್‌ & ಅಖಿಲೇಶ್‌ರನ್ನ ಟೀಕಿಸಿದ ಮೋದಿ

masthmagaa.com:

ಇನ್ನು ಪ್ರಧಾನಿ ನರೇಂದ್ರ ಮೋದಿ ಸತತ ಐದನೇ ದಿನವೂ ಕಾಂಗ್ರೆಸ್‌ ವಿರುದ್ದ ಮೀಸಲಾತಿ ಅಸ್ತ್ರ ಪ್ರಯೋಗ ಮಾಡಿದ್ದಾರೆ.. ʻಕಾಂಗ್ರೆಸ್‌ ಮತ್ತು ಸಮಾಜವಾದಿ ಪಾರ್ಟಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಯ ಹಕ್ಕುಗಳನ್ನ ಕಸಿದುಕೊಳ್ಳೋಕೆ ಬಯಸ್ತಾರೆ. ಅವ್ರ ವೋಟ್‌ ಬ್ಯಾಂಕ್‌ ಬಲಪಡಿಸೋಕೆ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡ್ತಾರೆʼ ಅಂತ ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ರ್ಯಾಲಿ ವೇಳೆ ಈ ಹೇಳಿಕೆ ಕೊಟ್ಟಿದ್ದು, ʻಇಬ್ಬರು ಹುಡುಗರ ಇಬ್ರು ಶಹಾಜಾದಗಳ (ಅಂದ್ರೆ ರಾಹುಲ್‌ ಮತ್ತು ಅಖಿಲೇಶ್‌ ಯಾದವ್‌ರನ್ನ ಕುರಿತು ) ಅವ್ರಿಂದ ನೀವು ಏನೂ ಬಯಸೋಕೂ ಸಾಧ್ಯವಿಲ್ಲ. ಅಖಿಲೇಶ್‌ ಯಾದವ್‌ ಅಧಿಕಾರದಲ್ಲಿದ್ದಾಗ ಕರ್ಫ್ಯೂ ಹೇರಿದ್ರು. ಮಹಿಳೆಯರಿಗೆ ಚಿನ್ನ ಮತ್ತು ಮಂಗಳಸೂತ್ರ ಧರಿಸಿ ಹೊರಗೆ ಹೋಗೋಕೂ ಬಿಡ್ತಿರಲಿಲ್ಲ. ಕಾಂಗ್ರೆಸ್‌ನ ರಾಜಕುಮಾರ, ಎಕ್ಸ್‌-ರೇ ಮಶೀನ್‌ ಇನ್ಸ್ಟಾಲ್‌ ಮಾಡಿ ಮಂಗಳಸೂತ್ರವನ್ನ ಕಸಿದುಕೊಳ್ಳೋದಾಗಿ ಹೇಳಿದ್ದಾರೆʼ ಅಂತ ಟೀಕಿಸಿದ್ದಾರೆ. ಈ ಮೂಲಕ ಸತತ ಐದನೇ ದಿನವೂ ಮುಸ್ಲಿಂ ಮೀಸಲಾತಿ ಮತ್ತು ಸಂಪತ್ತಿನ ಹಂಚಿಕೆ ವಿಚಾರವಾಗಿ ಮೋದಿ ಮಾತಾಡಿದ್ದಾರೆ. ಇತ್ತೀಚೆಗಷ್ಟೇ ʻಕರ್ನಾಟಕದ ಕಾಂಗ್ರೆಸ್‌ ಸರ್ಕಾರ, ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಿದೆ. ಒಬಿಸಿ ಮೀಸಲಾತಿ ಲಿಸ್ಟ್‌ನಲ್ಲಿ ಮುಸ್ಲಿಂನ ಎಲ್ಲಾ ಜಾತಿಯನ್ನ ಸೇರಿಸಿದೆʼ ಅಂತ ಆರೋಪಿಸಿದ್ರು.

ಇನ್ನು ಕಾಂಗ್ರೆಸ್‌ ಮೇಲಿನ ಆರೋಪಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ರಾಮಯ್ಯ ಪ್ರತಿಕ್ರಿಯೆ ಕೊಟ್ಟಿದ್ದಾರೆ. ʻʻಮುಸ್ಲಿಮರಿಗೆ ನೀಡಲಾಗಿರೊ 4% ಮೀಸಲಾತಿಯನ್ನ ಮುಂದುವರೆಸ್ತಿವಿ ಅಂತ ಹಿಂದಿನ ಬಿಜೆಪಿ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಹೇಳಿದೆ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಮೂಲಕ ಮುಸ್ಲಿಮ ಸಮುದಾಯದ ಮೀಸಲಾತಿಯ ಮುಂದುವರೆಯುತ್ತೆ ಅನ್ನೋ ಹೇಳಿಕೆ ಕೊಟ್ಟಿದ್ದಾರೆ.ʻʻ ಈ ಹಿಂದೆ ಚಿನ್ನಪ್ಪ ರೆಡ್ಡಿ ಆಯೋಗ ಮುಸ್ಲಿಮರಿಗೆ 4% ಮೀಸಲಾತಿ ಕೊಡ್ಬೆಕು ಅಂತೇಳಿತ್ತು. ಅದ್ರಂತೆ ರಾಜ್ಯದಲ್ಲಿ ಸುಮಾರು 20 ವರ್ಷಗಳಿಂದ ಮುಸ್ಲಿಮರಿಗೆ ಇದೇ ಪ್ರಮಾಣದಲ್ಲಿ ಮೀಸಲಾತಿ ಕೊಡಲಾಗ್ತಿದೆ. ಕಳೆದ ಬಾರಿ ಅಧಿಕಾರದಲ್ಲಿದ್ದ ಬೊಮ್ಮಾಯಿ ನೇತೃತ್ವದ ಸರ್ಕಾರ ಕೂಡ ನಾವು ಮುಸ್ಲಿಂ ಮೀಸಲಾತಿಯನ್ನ ಮುಂದುವರೆಸ್ತೇವೆ ಅಂತ ಸುಪ್ರೀಂಕೋರ್ಟ್‌ನಲ್ಲಿ ಹೇಳಿತ್ತು. ಹೀಗಾಗಿ ಈಗ್ಲೂ ಹಿಂದಿನಂತೆ ಮುಸ್ಲಿಂ ಮೀಸಲಾತಿ ಮುಂದುವರೆದಿದೆ ಅಂತ ಸಿಎಂ ಸಿದ್ರಾಮಯ್ಯ ಹೇಳಿದ್ದಾರೆ. ಅಲ್ದೆ ʻಒಬಿಸಿ ಲಿಸ್ಟ್‌ನಲ್ಲಿ ಮುಸ್ಲಿಮರನ್ನ ಕಾಂಗ್ರೆಸ್‌ ಸೇರಿಸಿದ್ದು ಅನ್ನೋ ಆರೋಪ ಶುದ್ದ ಸುಳ್ಳು. ಹಿಂದೆ ದೇವೇಗೌಡ್ರು ಮುಸ್ಲಿಂರಿಗೆ ಮೀಸಲಾತಿ ಜಾರಿಗೊಳಿಸೋ ಬಗ್ಗೆ ಬಹಳ ಹೆಮ್ಮೆಯಿಂದ ಹೇಳ್ಕೊಳ್ತಿದ್ರು. ಈಗಲೂ ಅವ್ರ ನಿಲುವು ಅದೇ ಆಗಿದ್ಯಾ…ಅಥ್ವಾ ನರೇಂದ್ರ ಮೋದಿಯವ್ರಿಗೆ ತಲೆಬಾಗಿ ತಮ್ಮ ಹಿಂದಿನ ನಿಲುವನ್ನ ಬದಲಾಯಿಸ್ತಾರಾ ಅನ್ನೋ ಬಗ್ಗೆ ಸ್ವಲ್ಪ ಜನರಿಗೆ ಕ್ಲಾರಿಟಿ ಕೊಡಿʼ ಅಂತ ಪ್ರಶ್ನೆ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply