ಕಾಂಗ್ರೆಸ್‌ನ ಧರ್ಮ ಆಧಾರಿತ ಮೀಸಲಾತಿ ವಿರೋಧಿಸಿದ ಮೋದಿ!

masthmagaa.com:

ಲೋಕಸಭೆ ಚುನಾವಣೆಗೆ ಪ್ರಚಾರ ಆರಂಭಿಸಿರೋ ಪ್ರಧಾನಿ ಮೋದಿ ಸತತ 4ನೇ ದಿನವೂ ಮುಸ್ಲಿಮರನ್ನ ಉಲ್ಲೇಖಿಸಿ ಕಾಂಗ್ರೆಸ್‌ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್, ದಲಿತ ಮತ್ತು ಹಿಂದುಳಿದ ವರ್ಗದವರ ಮೀಸಲಾತಿಯನ್ನ ಮುಸ್ಲಿಮರಿಗೆ ಕೊಡೋಕೆ ಪ್ಲ್ಯಾನ್‌ ಹಾಕಿದೆ ಅಂತ ಆರೋಪ ಮಾಡಿದ್ದಾರೆ. ಚತ್ತೀಸ್‌ಗಢದ ಸರ್ಗುಜಾದಲ್ಲಿ ನಡೆದ ಮಹಾರ್ಯಾಲಿಯಲ್ಲಿ ಮೋದಿ ಭಾಗವಹಿಸಿದ್ರು. ಈ ವೇಳೆ ʻಕಾಂಗ್ರೆಸ್‌ ಪ್ರಣಾಳಿಕೆಗಳು ಬರೀ ಮುಸ್ಲಿಂ ಲೀಗ್‌ನ ಚಿಂತನೆಗಳನ್ನೇ ಪ್ರತಿಬಿಂಬಿಸ್ತಿವೆ. ಕಾಂಗ್ರೆಸ್‌ನ ಒಂದು ಸತ್ಯಾಂಶ ಈಗ ಹೊರಬಿದ್ದಿದೆ…ಇದನ್ನ ಕೇಳಿ ದೇಶದ ಜನರೆಲ್ಲಾ ಬೆಚ್ಚಿಬಿದ್ದಿದ್ದಾರೆ. ನಮ್ಮ ಸಂವಿಧಾನದ ಪ್ರಕಾರ ಧರ್ಮದ ಆಧಾರದ ಮೇಲೆ ಯಾವ್ದೇ ರೀತಿ ಮೀಸಲಾತಿ ನೀಡೋಕೆ ಸಾಧ್ಯವಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್‌ ಕೂಡ ಇದಕ್ಕೆ ವಿರೋಧಿಸಿದ್ರು. ಆದ್ರೆ ಕಾಂಗ್ರೆಸ್‌ ಮಾತ್ರ ಬಹಳ ಹಿಂದೇನೇ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡೋಕೆ ಸಂಕಲ್ಪ ತೊಟ್ಟಿತ್ತು. ಅವರು ದೇಶದ ಜನರಿಗೆ ಮೋಸ ಮಾಡ್ತಿದ್ರು. 2004ರಲ್ಲಿ ಆಂಧ್ರ ಪ್ರದೇಶದಲ್ಲಿ ಕಾಂಗ್ರೆಸ್‌ ಸರ್ಕಾರ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಿದ್ರು. ನಂತ್ರ ನಡೆದ ಎರಡೂ ಚುನಾವಣೆ ವೇಳೆನೂ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡೋದಾಗಿ ಪ್ರತಿಜ್ಞೆ ಮಾಡಿದ್ರು. ಹೀಗೆ ಮಾಡಿ ಒಬಿಸಿ ಅಂದ್ರೆ ಹಿಂದುಳಿದ ವರ್ಗದವರ 15% ಮೀಸಲಾತಿ ತೆಗೆಯೋಕೆ ಕಾಂಗ್ರೆಸ್‌ ಪ್ಲಾನ್‌ ಮಾಡಿತ್ತು. ಅಲ್ದೆ ಹಿಂದೆ ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರವಿದ್ದಾಗ… ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲಾಗಿತ್ತು. ನಂತ್ರ ಬಿಜೆಪಿ ಸರ್ಕಾರ ಬಂದ್ಮೇಲೆ ನಾವು ಸಂವಿಧಾನಕ್ಕೆ ಗೌರವ ಕೊಟ್ಟು ಅದನ್ನ ತಗೆದು ಹಾಕಿದ್ವಿ. ಆದ್ರೆ ಈಗ ಪುನಃ ಕರ್ನಾಟಕದಲ್ಲಿ ಕಾಂಗ್ರೆಸ್‌ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡ್ತಿದೆ. ಈ ಬಾರಿ ಅವ್ರು ಒಬಿಸಿ ಕಣ್ಣಿಗೆ ಮಣ್ಣೆರಚಿ… ಮುಸ್ಲಿಂನ ಎಲ್ಲಾ ಜಾತಿಗಳನ್ನ ಒಬಿಸಿ ಮೀಸಲಾತಿ ಒಳಗೆ ಸೇರಿಸಿದೆ. ಕಾಂಗ್ರೆಸ್‌ ಇದೇ ಫಾರ್ಮುಲಾವನ್ನ ಇಡೀ ದೇಶದ ಮೇಲೆ ಬಳಸೋಕೆ ಹೊರಟಿದೆʼ ಅಂತ ಟೀಕಿಸಿದ್ದಾರೆ. ಅಂದ್ಹಾಗೆ ಮೊನ್ನೆಯಷ್ಟೇ ಪ್ರಧಾನಿ ಮೋದಿ ʻʻಕಾಂಗ್ರೆಸ್‌ ಹಿಂದೂಗಳ ಸಂಪತ್ತನ್ನ ಮುಸ್ಲಿಮರಿಗೆ ಹಂಚೋಕೆ ಹೊರಟಿದೆ ಅಂತೇಳಿದ್ರು. ಅದಾದ ಮೇಲೆ ಒಬಿಸಿ ಮತ್ತು ಎಸ್ಸಿ ಎಸ್ಟಿ ಮೀಸಲಾತಿಯನ್ನ ಮುಸ್ಲಿಮರಿಗೆ ಹಂಚೋಕೆ ನೋಡ್ತಿದೆ ಅಂತೇಳಿದ್ರು. ಈಗ ಮತ್ತೆ ಅದೇ ದಾಟಿಯಲ್ಲಿ ತಮ್ಮ ಮಾತುಗಳನ್ನ ಮುಂದುವರೆಸಿದ್ದಾರೆ. ಅಲ್ದೆ ʻಕಾಂಗ್ರೆಸ್‌ ನಿಮ್ಮ ಪಿತ್ರಾರ್ಜಿತ ಆಸ್ತಿಯನ್ನ ಲೂಟಿ ಮಾಡೋಕೆ ಬಯಸುತ್ತೆ. ಪಿತ್ರಾರ್ಜಿತ ತೆರಿಗೆ ಹೇರೋದಾಗಿ ಕಾಂಗ್ರೆಸ್‌ ಹೇಳಿದೆ. ನೀವು ಕಷ್ಟಪಟ್ಟು ದುಡಿದು ಕೂಡಿಟ್ಟ ಆಸ್ತಿಯನ್ನ ನಿಮ್ಮ ಮಕ್ಕಳಿಗೆ ಸಿಗಲು ಬಿಡಲ್ಲ…ನಿಮ್ಮಿಂದ ಕಸಿದುಕೊಳ್ಳುತ್ತೆ. ನೀವು ಬದುಕಿರೋ ತನಕ ನಿಮ್ಮ ಮೇಲೆ ಪಿತ್ರಾರ್ಜಿತ ತೆರಿಗೆಯ ಹೊರೆ ಹಾಕುತ್ತೆʼ ಅಂತೇಳಿದ್ದಾರೆ. ಈ ಮೂಲಕ ಕಾಂಗ್ರೆಸ್‌ ನಾಯಕ ಸ್ಯಾಮ್‌ ಪಿತ್ರೋಡಾ ಆಡಿರೋ ಮಾತನ್ನೇ ಕಾಂಗ್ರೆಸ್‌ ವಿರುದ್ದ ಬಳಸಿದ್ದಾರೆ.

ಅಂದ್ಹಾಗೆ ಆಸ್ತಿ ಹಂಚಿಕೆ ವಿಚಾರವಾಗಿ ಏಪ್ರಿಲ್‌ 23ರಂದು ಸಂದರ್ಶನದಲ್ಲಿ ಮಾತನಾಡಿದ ಪಿತ್ರೋಡಾ, ಅಮೆರಿಕದಲ್ಲಿ ವಿಧಿಸಲಾಗುತ್ತಿರೊ ಪಿತ್ರಾರ್ಜಿತ ತೆರಿಗೆಯ ಉದಾಹರಣೆ ನೀಡಿದ್ರು. “ಅಮೆರಿಕದಲ್ಲಿ ಪಿತ್ರಾರ್ಜಿತ ತೆರಿಗೆ ಇದೆ. ಒಬ್ಬ 100 ಮಿಲಿಯನ್ ಡಾಲರ್ ಸಂಪತ್ತನ್ನು ಹೊಂದಿದ್ರೆ ಅವನು ಮೃತಪಟ್ಟಾಗ ಕೇವಲ 45 ರಷ್ಟನ್ನ ಮಾತ್ರ ತನ್ನ ಮಕ್ಕಳಿಗೆ ವರ್ಗಾಯಿಸಬಹುದು. 55 ಪರ್ಸೆಂಟ್ ಸರ್ಕಾರವು ತಗೊಳುತ್ತೆ. ಅದು ಇಂಟ್ರಸ್ಟಿಂಗ್ ಲಾ. ನಿಮ್ಮ ಪೀಳಿಗೆಯಲ್ಲಿ ನೀವು ಸಂಪತ್ತನ್ನು ಸಂಪಾದಿಸಿದ್ದೀರಿ. ಮತ್ತು ನೀವು ಈಗ ಹೋಗುವಾಗ, ನಿಮ್ಮ ಸಂಪತ್ತನ್ನು ಸಾರ್ವಜನಿಕರಿಗೆ ಬಿಡಬೇಕು. ಎಲ್ಲವನ್ನೂ ಅಲ್ಲ, ಅದರಲ್ಲಿ ಅರ್ಧದಷ್ಟನ್ನ ಬಿಡಬೇಕು, ಇದು ನ್ಯಾಯೋಚಿ” ಅಂತ ಇಂಟರ್‌ವ್ಯೂನಲ್ಲಿ ಪಿತ್ರೋಡಾ ಹೇಳಿದ್ರು. ಇದು ವಿವಾದಕ್ಕೆ ತಿರುಗಿತ್ತು. ಸ್ವತಃ ಕಾಂಗ್ರೆಸ್‌ ಪಕ್ಷ ಕೂಡ ಪಿತ್ರೋಡ ಹೇಳಿಕೆಯಿಂದ ದೂರ ಉಳಿದಿತ್ತು. ಅವರ ಮಾತು ಅದು ಪಕ್ಷದ ನೀತಿಯನ್ನು ಪ್ರತಿಬಿಂಬಿಸುವುದಿಲ್ಲ” ಅಂತೇಳಿತ್ತು..ಇನ್ನು ಪಿತ್ರೋಡಾ ಕೂಡ, ನಾನು ಅಮೆರಿಕದ ಪಿತ್ರಾರ್ಜಿತ ತೆರಿಗೆ‌ಯ ಉದಾಹರಣೆ ಬಗ್ಗೆ ಕೇವಲ ಸಂದರ್ಶನದಲ್ಲಿ ಹೇಳಿದ್ದೇನೆ ಅಷ್ಟೇ, ಸಾಮಾನ್ಯವಾಗಿ ಜನ ಇಂತಹ ವಿಷಯಗಳ ಬಗ್ಗೆ ಡಿಸ್ಕಸ್‌ ಮಾಡ್ಬೇಕು. ನನ್ನ ಈ ವಿಚಾರಕ್ಕೂ ಮತ್ತು ಕಾಂಗ್ರೆಸ್ ಸೇರಿದಂತೆ ಯಾವ ಪಕ್ಷದ ನೀತಿಗೂ ಇದು ಸಂಬಂಧ ಇಲ್ಲ ಅಂತ ಹೇಳಿದ್ರು. ಆದ್ರೆ ಈ ಕಾಂಗ್ರೆಸ್‌ ಇದರಿಂದ ಅಂತರ ಕಾಯ್ದುಕೊಳ್ಳುವ ಮುನ್ನವೇ ಮೋದಿಯವರು ಅದನ್ನ ಕಾಂಗ್ರೆಸ್‌ ವಿರುದ್ದ ಬಳಸಿದ್ದಾರೆ. ಅಂದಹಾಗೆ ಸ್ಯಾಮ್‌ ಪಿತ್ರೋಡಾ ಅಂದು ರಾಜೀವ್‌ ಗಾಂಧಿಗೂ ಒಡನಾಡಿ. ಈಗ ರಾಹುಲ್‌ ಗಾಂಧಿಯ ವಿದೇಶೀ ಎಂಗೇಜ್‌ಮೆಂಟ್‌ಗಳ ರೂವಾರಿ ಅಂತ ಪರಿಗಣಿಸಲಾಗುವ ವ್ಯಕ್ತಿ. ಇನ್ನೊಂದು ಕಡೆ ಈ ಸಂಪತ್ತಿನ ಹಂಚಿಕೆ ವಿಚಾರವಾಗಿ ಖುದ್ದು ರಾಹುಲ್‌ ಗಾಂಧಿ ಯೂಟರ್ನ್‌ ಹೊಡೆದಿದ್ದಾರೆ. ʻʻನಾವು ಚೆಕ್‌ ಮಾಡ್ತೀವಿ ಅಂತೇಳಿದ್ವಿ ಅಷ್ಟೇ…ಆಕ್ಷನ್‌ ತಗೋಳೋಲ್ಲ. ನಾನು ಎಕ್ಸ್‌ರೇ ಮಾಡ್ತೀವಿ ಅಷ್ಟೇ ಅಂತೇಳಿದ್ದೆ. ಅದರ ಅರ್ಥ ವೆಲ್ತ್‌ ಸರ್ವೆ ಅಂತಷ್ಟೇ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply