ನೇಹಾ ಹತ್ಯೆ ಖಂಡಿಸಿ ʻಕೈʼ ಪ್ರತಿಭಟನೆ: ನೇಹಾಳ ತಂದೆಗೆ ಕ್ಷಮೆಯಾಚಿಸಿದ ಸಿಎಂ!

masthmagaa.com:

ಹುಬ್ಬಳ್ಳಿ ನೇಹಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ಬಳಿಕ ಈಗ ಕಾಂಗ್ರೆಸ್‌ ಕೂಡ ಪ್ರತಿಭಟನೆ ನಡೆಸಿದೆ. ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಸಹೋದರ MLC ಚನ್ನರಾಜ್‌ ಹಟ್ಟಿಹೋಳಿ, ಶಾಸಕರಾದ ಆಸೀಫ್‌ ಸೇಠ್, ಬಾಬಾಸಾಹೇಬ್‌ ಪಾಟೀಲ್ ಸೇರಿದಂತೆ ಅನೇಕ ನಾಯಕರು ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ. ಜೊತೆಗೆ ಆರೋಪಿ ಫಯಾಜ್‌ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದು ಗಲ್ಲು ಶಿಕ್ಷೆ ನೀಡುವಂತೆ ತಮ್ಮದೇ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಮತ್ತೊಂದು ಕಡೆ ಮೃತ ನೇಹಾ ತಂದೆ ನಿರಂಜನ್‌ ಹಿರೇಮಠ ಅವ್ರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷಮೆಯಾಚಿಸಿದ್ದಾರೆ. ಸಚಿವ HK ಪಾಟೀಲ್‌ ನೇಹಾಳ ಮನೆಗೆ ಭೇಟಿ ನೀಡಿದ ವೇಳೆ ನಿರಂಜನ್‌ ಜೊತೆ ದೂರವಾಣಿ ಕರೆಯಲ್ಲಿ ಸಿಎಂ ಮಾತಾಡಿದ್ರು. ಈ ವೇಳೆ ʻನಿರಂಜನ್ ವೇರಿ ಸ್ವಾರಿ, ನಿಮ್ಮ ಪರವಾಗಿ ನಾವ್‌ ಇರ್ತೀವಿʼ ಅಂತ ಹೇಳಿದ್ದಾರೆ. ಇನ್ನು ಈ ಬಳಿಕ ಮಾತಾಡಿದ ನಿರಂಜನ್‌, ʻನಾನು ನೇಹಾಳ ಹತ್ಯೆ ಖಂಡಿಸಿ ದು:ಖದಲ್ಲಿದ್ದಾಗ ಮಾಹಿತಿ ಕೊರತೆಯಿಂದ ಸರ್ಕಾರದ ವಿರುದ್ದ ಮಾತನಾಡಿದ್ದೇನೆ. ತನಿಖೆ ದಿಕ್ಕುತಪ್ಪುತ್ತಿದೆ ಅಂತೇಳಿದ್ದೆ. ದಯವಿಟ್ಟು ನನ್ನನ್ನ ಕ್ಷಮಿಸಿ. ಸರ್ಕಾರ ನನ್ನ ಬೆನ್ನ ಹಿಂದೆ ನಿಂತು ಕೆಲ್ಸ ಮಾಡ್ತಿದೆʼ ಅಂತ ಹೇಳಿದ್ದಾರೆ.

ಮತ್ತೊಂದು ಕಡೆ ನೇಹಾ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ. ಇನ್ನು ಆರೋಪಿ ಫಯಾಜ್‌ ಜೊತೆಗಿನ ನೇಹಾಳ ಪೋಟೊಗಳು ʻಫಯಾಜ್‌ನೇಹಾ 2024ʼ ಅನ್ನೊ ಹೆಸರಿನ ಇನ್ಸ್ಟಾಗ್ರಾಮ್‌ ಖಾತೆಯಿಂದ ವೈರಲ್‌ ಆಗ್ತಿದ್ದು ಮತ್ತೊಂದಷ್ಟು ವಿವಾದ ಸೃಷ್ಟಿಸಿದೆ.. ಇದಕ್ಕೆ ಕಡಿವಾಣ ಹಾಕಿ , ಆ ಇನ್ಸ್ಟಾ ಐಡಿಯನ್ನ ಬ್ಲಾಕ್‌ ಮಾಡ್ಬೇಕು ಅಂತೇಳಿ ಮೃತ ನೇಹಾಳ ತಾಯಿ ಗೀತಾ ಹಿರೇಮಠ್‌ ಕ್ರೈಮ್‌ ಪೋಲಿಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಆ ಕಡೆ ನೇಹಾ ಕೇಸ್‌ನ ತನಿಖೆ ಆರಂಭಿಸಿರೊ CID ತಂಡ, ಹುಬ್ಬಳ್ಳಿ-ಧಾರವಾಡ ಪೋಲಿಸ್‌ ಕಮೀಷನರ್‌ ಆಫೀಸ್‌ಗೆ ಭೇಟಿ ನೀಡಿ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನ ಕಲೆ ಹಾಕ್ತಿದೆ. ಇನ್ನು ನೇಹಾಳ ಮರಣೋತ್ತರ ಪರೀಕ್ಷೆಯಲ್ಲಿ 14 ಬಾರಿ ಇರಿದಿದ್ದಾನೆ ಅಂತ ಗೊತ್ತಾಗಿದೆ. ಕುತ್ತಿಗೆಗೆ ಇರಿದಿದ್ದರಿಂದ ರಕ್ತನಾಳ ಕಟ್‌ ಆಗಿ ನೇಹಾ ಸಾವೀಗೀಡಾಗಿದ್ದಾಳೆ ಅಂತ ವರದಿ ತಿಳಿಸಿದೆ.

ಇನ್ನು ಅದೇ ಹುಬ್ಬಳ್ಳಿಯಲ್ಲಿ ಇನ್ನೊಂದು ಘಟನೆ ನಡೆದಿದೆ. ಅಫ್ತಾಬ್‌ ಅನ್ನೋ ಯುವಕನೊಬ್ಬ ಹಿಂದೂ ಸಮುದಾಯದ ಯುವತಿಗೆ ಹಲ್ಲೆ ಮಾಡಲು ಮುಂದಾಗಿದ್ದು ಆಗ ಸ್ಥಳದಲ್ಲಿದ್ದ ಜನರು ಯುವಕನಿಗೆ ಥಳಿಸಿದ್ದಾರೆ. ಸಧ್ಯದ ಮಾಹಿತಿ ಪ್ರಕಾರ ಯುವಕ ಮತ್ತು ಯುವತಿ ಪ್ರೀತಿ ಮಾಡ್ತಿದ್ದು ನೇಹಾ ಪ್ರಕರಣದಿಂದ ಈ ಪ್ರೀತಿಯನ್ನ ಎಂಡ್‌ ಮಾಡ್ಕೊಳ್ಳೋದಾಗಿ ಹುಡುಗಿ ಡಿಸೈಡ್‌ ಮಾಡಿದ್ಲು. ಇದಕ್ಕಾಗಿ ಅಫ್ತಾಬ್‌ ಕೊಟ್ಟಿದ್ದ ಗಿಫ್ಟ್‌ಗಳನ್ನ ಯುವತಿ ವಾಪಸ್‌ ಕೊಟ್ಟು ಬರುವಾಗ ಈ ಹಲ್ಲೆ ನಡೆದಿದೆ. ಈ ಬಗ್ಗೆ ಪೊಲೀಸ್‌ ಕಮಿಷನರ್‌ ರೇಣುಕಾ ಸುಕುಮಾರ್‌ ಮಾತಾಡಿದ್ದಾರೆ. ಆರೋಪಿ ಅಫ್ತಾಬ್‌ನನ್ನ ಅರೆಸ್ಟ್‌ ಮಾಡಲಾಗಿದ್ದು ವಿಚಾರಣೆ ಬಳಿಕ ಜಡ್ಜ್‌ ಮುಂದೆ ಹಾಜರುಪಡಿಸಲಾಗಿದೆ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply