ಬೆಂಗಳೂರಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು‌ ಮತದಾರರಿಗೆ ಬಿಗ್‌ ಆಫರ್!

masthmagaa.com:

ಬೆಂಗಳೂರು ಮಹಾನಗರದಲ್ಲಿ ಮತದಾನ ಪ್ರಮಾಣವನ್ನ ಹೆಚ್ಚಿಸೊ ಸಂಬಂಧ ಅನೇಕ ಹೊಟೇಲ್‌ಗಳು ಮತ್ತು ವಾಣಿಜ್ಯ ಸಂಸ್ಥೆಗಳು ಮತದಾರರಿಗೆ ಉಚಿತ ಹಾಗೂ ರಿಯಾಯತಿ ದರದ ಆಫರ್‌ ನೀಡಿವೆ ಅಂತ ಗೊತ್ತಾಗಿದೆ. ಪ್ರಮುಖವಾಗಿ ನಗರದ ನೃಪತುಂಗ ರಸ್ತೆಯಲ್ಲಿರೊ ನಿಸರ್ಗಾ ಗ್ರ್ಯಾಂಡ್‌ ಹೊಟೇಲ್‌ ಮತದಾನದ ದಿನ ಅಂದ್ರೆ ಏಪ್ರಿಲ್‌ 26ರಂದು ಕೈ ಬೆರಳಲ್ಲಿ ಮತ ಚಲಾಯಿಸಿದ ಶಾಹಿ ತೋರಿಸಿದ್ರೆ ಉಚಿತವಾಗಿ ಬೆಣ್ಣೆ ದೋಸೆ, ತುಪ್ಪದ ಲಾಡು ಮತ್ತು ಜ್ಯೂಸ್‌ ನೀಡೊದಾಗಿ ತಿಳಿಸಿದೆ. ಅಲ್ದೇ ಕಳೆದ 2023ರ ವಿಧಾನಸಭಾ ಚುನಾವಣಾ ಮತದಾನದ ವೇಳೆ 5100ಜನರಿಗೆ ಉಚಿತ ಉಪಹಾರ ನೀಡಿದ್ದು, ಸದ್ಯ ಈ ಎಲೆಕ್ಷನ್‌ನಲ್ಲಿ 6500ವರೆ ಜನ ಉಚಿತ ಉಪಹಾರದ ಲಾಭ ಪಡಿಯೋ ನಿರೀಕ್ಷೆ ಇದೆ ಅಂತ ಹೋಟೆಲ್‌ ಮಾಲೀಕರು ತಿಳಿಸಿದ್ದಾರೆ. ಇನ್ನು ನಗರದ ಕೆಲ ಹೋಟೆಲ್‌ಗಳಲ್ಲಿ ಮತದಾನದ ದಿನ ರಿಯಾಯತಿ ದರದಲ್ಲಿ ಉಪಹಾರ ಸಿಗಲಿದೆ. ಅತ್ತ ವೋಟಿಂಗ್‌ ಡೇ Rapido ಕಂಪನಿ ಕೂಡ ಮತದಾರರಿಗೆ ಫ್ರಿ ರೈಡ್ ನೀಡಲು ಮುಂದಾಗಿದೆ. ಬೆಂಗಳೂರು, ಮೈಸೂರು ಮತ್ತು ಮಂಗಳೂರಿನ ಮತದಾರರಿಗೆ ಮತದಾನ ಕೇಂದ್ರಗಳಿಗೆ ತೆರಳೊ ಸಂಬಂಧ ‘VOTE NOW’ ಕೋಡ್ ಬಳಸಿಕೊಂಡು ಫ್ರಿ ರೈಡ್‌ನ ಲಾಭವನ್ನ ಪಡೆಯಬಹುದು ಅಂತ ಕಂಪನಿ ತಿಳಿಸಿದೆ. ಇನ್ನು ಇದೇ ವೋಟಿಂಗ್‌ ಡೇ ನಮ್ಮ ಮೆಟ್ರೋ ಕೂಡ ಪ್ರತಿದಿನಕ್ಕಿಂತ ಹೆಚ್ಚುವರಿಯಾಗಿ 55 ನಿಮಿಷಗಳ ಕಾಲ ತನ್ನ ಕಾರ್ಯ ನಿರ್ವಹಿಸಲಿದೆ. ಅಂದ್ರೆ ಏಪ್ರಿಲ್‌ 26ರಂದು ರಾತ್ರಿ 11:55ರವೆಗೆ ಮೆಟ್ರೋ ಸಂಚಾರ ನಡೆಸಲಿದೆ ಅಂತ ನಮ್ಮ ಮೆಟ್ರೋ ಪ್ರಕಟಣೆ ಹೊರಡಿಸಿದೆ.

-masthmagaa.com

Contact Us for Advertisement

Leave a Reply