masthmagaa.com:
ಆರ್ಥಿಕ ಸಂಕಷ್ಟದಲ್ಲಿರುವ ಶಿಕ್ಷಣ ಎಡುಟೆಕ್ ಸಂಸ್ಥೆ ಬೈಜೂಸ್ನ ಲೆಕ್ಕಪತ್ರಗಳನ್ನ ಪರಿಶೀಲನೆ ಮಾಡೋಕೆ ಕೇಂದ್ರ ಸರ್ಕಾರ ಸೂಚಿಸಿದೆ. ಕಳೆದ ತಿಂಗಳು ಕಂಪನಿಯ ಲೆಕ್ಕಪರಿಶೋಧಕ ಸಂಸ್ಥೆ ಹಾಗೂ ಮೂವರು ಆಡಳಿತ ಮಂಡಳಿಯ ಸದಸ್ಯರು ರಾಜೀನಾಮೆ ನೀಡಿದ್ದರು. ಇದರಿಂದ ಕಂಪನಿ ತತ್ತರಿಸಿದ್ದು, ಇದರ ನಡುವೆಯೇ ಈ ಬೆಳವಣಿಗೆ ನಡೆದಿದೆ. ಇದು ಬೈಜೂಸ್ನ್ನು ಮತ್ತಷ್ಟು ಇಕ್ಕಟ್ಟಿಗೆ ತಳ್ಳಿದೆ. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ 6 ವಾರಗಳಲ್ಲಿ ವರದಿಯನ್ನ ನೀಡುವಂತೆ ಕೇಳಿದೆ ಅಂತ ಮೂಲಗಳು ಹೇಳಿವೆ. ತಪಾಸಣೆ ನಂತರ ಕಂಪನಿಯ ವ್ಯವಹಾರಗಳ ಆಂತರಿಕ ಮೌಲ್ಯಮಾಪನ ನಡೆಯಲಿದೆ. ತಪಾಸಣೆಯಲ್ಲಿ ಕಂಡು ಬರಲಿರುವ ಅಂಶಗಳನ್ನು ಆಧರಿಸಿ, ವಿಷಯವನ್ನ ಗಂಭೀರ ವಂಚನೆಯ ತನಿಖಾ ಕಛೇರಿಗೆ ಕಳುಹಿಸೋ ಬಗ್ಗೆ ಸರ್ಕಾರ ನಿರ್ಧರಿಸಲಿದೆ.
-masthmagaa.com
Contact Us for Advertisement