masthmagaa.com:
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ನ ಪ್ರಬಲ ಎದುರಾಳಿ ಅಲೆಕ್ಸಿ ನಾವಲ್ನಿ ಸಾವಿಗೆ ಸಂಬಂಧಿಸಿದಂತೆ ಇದೀಗ ಹೊಸ ವಿಚಾರವೊಂದು ಹೊರಬಿದ್ದಿದೆ. ಖೈದಿಗಳ ವಿನಿಮಯ ಪ್ರಕ್ರಿಯೆ ಮೂಲಕ ಜೈಲುವಾಸದಲ್ಲಿದ್ದ ಅಲೆಕ್ಸಿ ಬಿಡುಗಡೆಯಾಗೋ ಚಾನ್ಸ್ ಇತ್ತು. ಆದರೆ ಅಧ್ಯಕ್ಷ ಪುಟಿನ್ಗೆ ಹೀಗಾಗೋದು ಇಷ್ಟವಿಲ್ದೇ… ಅಲೆಕ್ಸಿ ಬಿಡುಗಡೆಯನ್ನ ಸಹಿಸ್ಕೊಳ್ಳೋಕೆ ಆಗ್ದೇ ಅವ್ರನ್ನ ಹತ್ಯೆ ಮಾಡಿದ್ರು ಅಂತ ಅಲೆಕ್ಸಿ ಅವ್ರಿಗೆ ಬಹಳ ಹತ್ರವಾಗಿರೋರು ಮಾಹಿತಿ ನೀಡಿದ್ದಾರೆ. ರಷ್ಯಾದ ಸಿಕ್ರೇಟ್ ಸರ್ವೀಸ್ನಲ್ಲಿ ಕೆಲಸ ಮಾಡ್ತಿದ್ದ ಪ್ರಮುಖ ಅಧಿಕಾರಿ Vadim Krasikov ಅವ್ರು ಅಮೆರಿಕದಲ್ಲಿ ಬಂಧನದಲ್ಲಿದ್ದಾರೆ. ಸೋ ಇವ್ರನ್ನ ಅಮೆರಿಕ ರಷ್ಯಾಗೆ ಹಸ್ತಾಂತರಿಸೋ ಪ್ರಕ್ರಿಯೆಯಲ್ಲಿ… ಎಕ್ಸ್ಚೇಂಜ್ ಆಗಿ ಇಬ್ಬರು ಅಮೆರಿಕ ಪ್ರಜೆಗಳ ಜೊತೆ ಅಲೆಕ್ಸಿಯ ರಿಲೀಸ್ ಕೂಡ ಆಗೋದ್ರಲ್ಲಿತ್ತು. ಆದ್ರೆ ಅದಕ್ಕೂ ಮುಂಚೆಯೇ ಪುಟಿನ್ ಇವರನ್ನ ಹತ್ಯೆ ಮಾಡಿದ್ದಾರೆ ಅಂತ ನಾವಲ್ನಿ ಸಹಚರರು ಹೇಳಿದ್ದಾರೆ.
-masthmagaa.com
Contact Us for Advertisement