masthmagaa.com:
ಎಲ್ಲ ವಿರೋಧ ಪಕ್ಷಗಳು ಒಟ್ಟಾಗಿ ಕೆಲಸ ಮಾಡಿದ್ರೆ ಬಿಜೆಪಿಯನ್ನು ಕೇವಲ 50 ಸೀಟ್ಗಳಿಗೆ ಕಟ್ಟಿಹಾಕಬಹುದು ಅಂತ ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ. ಅಲ್ದೇ ಈ ಅಭಿಯಾನಕ್ಕೆ ನನ್ನನ್ನು ನಾನು ಸಮರ್ಪಿಸಿಕೊಳ್ಳುತ್ತಿದ್ದೇನೆ. ಇದಕ್ಕಾಗಿ ವಿರೋಧ ಪಕ್ಷಗಳ ಜೊತೆಗೆ ಬಲಿಷ್ಠ ಮೈತ್ರಿಕೂಟಕ್ಕಾಗಿ ಕೆಲಸ ಮಾಡುತ್ತಿದ್ದೇನೆ ಅಂತ ಹೇಳಿದ್ರು. ಜೆಡಿಯು ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಈ ಬಗ್ಗೆ ಮಾತನಾಡಿದ ನಿತೀಶ್ ಕುಮಾರ್ ಬಿಹಾರದ ಸಾಮಾಜಿಕ ಮತ್ತು ಕೋಮು ಸೌಹಾರ್ದ ಕದಡೋಕೆ ಬಿಜೆಪಿ ಪ್ರಯತ್ನಿಸಬಹುದು. ಅವರ ಪ್ರಯತ್ನಗಳನ್ನು ನಾವು ವಿಫಲಗೊಳಿಸಬೇಕು ಅಂತ ಹೇಳಿದ್ದಾರೆ.
-masthmagaa.com
Contact Us for Advertisement