masthmagaa.com:
ನವಂಬರ್ನಲ್ಲಿ ನಡೆಯಲಿರುವ ಜಿ20 ಶೃಂಗಸಭೆಯ ವೇಳೆ ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವ್ರನ್ನ ಭೇಟಿ ಮಾಡೋ ಪ್ಲ್ಯಾನ್ನ್ನ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಹೊಂದಿಲ್ಲ ಅಂತ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಹೇಳಿದ್ದಾರೆ. ಜೊತೆಗೆ ಈಗಾಗಲೇ ತಕ್ಕ ಮಟ್ಟಿಗೆ ಇರೊ ಸೌದಿ ಹಾಗೂ ಅಮೆರಿಕದ ಸಂಬಂಧಗಳು, ತೈಲ ಉತ್ಪಾದನೆ ಕಡಿತದಿಂದ ಹದಗೆಟ್ಟಿವೆ ಅಂತ ಸುಲ್ಲಿವಾನ್ ಹೇಳಿದ್ದಾರೆ. ಅಂದ್ಹಾಗೆ ಇತ್ತೀಚಿಗಷ್ಟೇ ಬೈಡೆನ್ ತೈಲ ವಿಷಯವಾಗಿ ಮತ್ತೆ ಸೌದಿ ಜೊತೆಗೆ ಮಾತುಕತೆಗೆ ರೆಡಿ ಇದ್ದಾರೆ ಅಂತ ವೈಟ್ಹೌಸ್ ಹೇಳಿತ್ತು. ಆದ್ರೆ ಇದೀಗ ಆ ರೀತಿ ಯಾವುದೇ ಯೋಜನೆಯಿಲ್ಲ ಅಂತ ಹೇಳಿದೆ.
-masthmagaa.com
Contact Us for Advertisement