masthmagaa.com:
ಗುಜರಾತ್ ಗಲಭೆ ಹಾಗೂ ಪ್ರಧಾನಿ ಮೋದಿಯವರನ್ನ ಕುರಿತಂತೆ ಡಾಕ್ಯುಮೆಂಟರಿ ಮಾಡೋಕೆ BBC ಚೀನಾದ huawei ಕಂಪನಿಯಿಂದ ಹಣ ಪಡೆದುಕೊಂಡಿದೆ ಅಂತ ಬಿಜೆಪಿಯ ರಾಜ್ಯಸಭಾ ಸಂಸದ ಹಾಗೂ ಹಿರಿಯ ವಕೀಲ ಮಹೇಶ್ ಜೆಠ್ಮಲಾನಿ ಆರೋಪ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರೋ ಜೆಠ್ಮಲಾನಿ, BBC ಯಾಕೆ ಭಾರತ ವಿರೋಧಿಯಾಗಿದೆ? ಅದಕ್ಕೆ ಹಣ ಎಲ್ಲಿದೆ ಅಂದ್ರೆ ಉತ್ತರ ಚೀನಾದ huawei ಕಂಪನಿಯಿಂದ ಹಣ ಪಡೆದುಕೊಂಡು, ಅದರ ಅಜೆಂಡಾ ಪರವಾಗಿ ವರ್ಕ್ ಮಾಡ್ತಿದೆ. ಇದು ಪ್ರಚಾರಕ್ಕಾಗಿ ಹಣ ಪಡೆದುಕೊಂಡಿರುವ ಡೀಲ್ ಆಗಿದೆ. ಸುದ್ದಿಸಂಸ್ಥೆಯಾಗಿರೋ BBC ಮಾರಾಟಕ್ಕಿದೆ ಅಂತ ಹೇಳಿದ್ದಾರೆ. ಜೊತೆಗೆ ಭಾರತದ ವಿರುದ್ದ ಸುಳ್ಳು ಮಾಹಿತಿಗಳನ್ನ ಶೇರ್ ಮಾಡುವ ದೀರ್ಘ ಇತಿಹಾಸವನ್ನ ಈ ಹಿಂದಿನಿಂದಲೂ ಸಹ BBC ಹೊಂದಿದೆ .00000ಅಂತ ಮತ್ತೊಂದು ಟ್ವೀಟ್ ಮಾಡಿದ್ದಾರೆ.
-masthmagaa.com
Contact Us for Advertisement