masthmagaa.com:
ಜಮ್ಮು-ಕಾಶ್ಮೀರದಲ್ಲಿ ಪ್ರಧಾನಮಂತ್ರಿ ಕಾರ್ಯಾಲಯದ ಅಧಿಕಾರಿ ಅಂತ ಹೇಳ್ಕೊಂಡು ತಿರ್ಗಾಡ್ತಿದ್ದ ವ್ಯಕ್ತಿಯನ್ನ ಪೊಲೀಸರು ಬಂಧಿಸಿದ್ದಾರೆ. ಗುಜರಾತ್ನಲ್ಲಿದ್ದ ಕಿರಣ್ ಭಾಯ್ ಪಟೇಲ್ ಅನ್ನೊ ವ್ಯಕ್ತಿ ತಾನು PMO ಅಡಿಷನಲ್ ಡೈರೆಕ್ಟರ್ ಅಂತ ಹೇಳಿಕೊಂಡು ಯಾಮಾರಿಸಿದ್ದಾನೆ. ಈ ಕುರಿತು ಅನುಮಾನಗೊಂಡು ಪೊಲೀಸರು ತನಿಖೆ ನಡೆಸಿದಾಗ ಈತ ನಕಲಿ ಅಧಿಕಾರಿ ಅಂತ ತಿಳಿದು ಬಂದಿದೆ. ಅಂದ್ಹಾಗೆ ಈ ನಕಲಿ ಅಧಿಕಾರಿಯನ್ನ 10 ದಿನಗಳ ಹಿಂದೆಯೇ ಬಂಧಿಸಲಾಗಿದ್ದು, ಅದನ್ನ ರಹಸ್ಯವಾಗಿ ಇಡಲಾಗಿತ್ತು. ಇದೀಗ ಜಮ್ಮು ಕಾಶ್ಮೀರ ಪೊಲೀಸರು ಬಂಧನವನ್ನ ಬಹಿರಂಗಪಡಿಸಿದ್ದಾರೆ.
-masthmagaa.com
Contact Us for Advertisement