ಕೇಜ್ರಿವಾಲ್‌ ಐಫೋನ್‌ ಅನ್‌ಲಾಕ್‌ ಮಾಡಲು ನಿರಾಕರಿಸಿದ ʻಆ್ಯಪಲ್‌ʼ!

masthmagaa.com:

ದಿಲ್ಲಿ ಲಿಕ್ಕರ್‌ ಪಾಲಿಸಿ ಕೇಸಲ್ಲಿ ಬಂಧಿತರಾಗಿರೋ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ರ ಫೋನ್‌ ವಿಚಾರ ಈಗ ಭಾರೀ ಸುದ್ದಿ ಮಾಡ್ತಿದೆ. ದಾಖಲೆಗಾಗಿ ಹುಡುಕಾಟ ನಡೆಸ್ತಿರೋ ಇಡಿ ಅಧಿಕಾರಿಗಳು ಕೇಜ್ರಿವಾಲ್‌ ಅವರ ಫೋನನ್ನ ವಶಪಡಿಸಿಕೊಂಡಿದ್ದು ಈಗ ಅವ್ರ ಐಫೋನ್‌ ಅನ್‌ಲಾಕ್‌ ಮಾಡುವಂತೆ ED ಈಗ ʻಆ್ಯಪಲ್‌’ ಕಂಪನಿಯನ್ನ ಸಂಪರ್ಕಿಸಿದ್ದಾರೆ. ಆದರೆ ಆ್ಯಪಲ್‌ ಕಂಪನಿ ಇದನ್ನ ನಿರಾಕರಿಸಿದೆ. ʻಐಫೋನ್‌ನ ಮಾಲೀಕರಿಂದ ಮಾತ್ರ ಇದ್ರ ಆ್ಯಕ್ಸೆಸ್‌ ಪಡೆಯೋಕೆ ಸಾಧ್ಯ. ಮಾಲೀಕರು ಹಾಕಿರೋ ಪಾಸ್ವರ್ಡ್‌ ಬಳಸಿ ಫೋನ್‌ ಅನ್‌ಲಾಕ್‌ ಮಾಡಿʼ ಅಂತೇಳಿದೆ. ಅಂದ್ಹಾಗೆ ಅರವಿಂದ್‌ ಕೇಜ್ರಿವಾಲ್‌ ಅವ್ರು ಅರೆಸ್ಟ್‌ ಆದಾಗ ತಮ್ಮ ಐಫೋನ್‌ನ ಸ್ವಿಚ್‌ ಆಫ್‌ ಮಾಡಿದ್ರು. ED ಅಧಿಕಾರಿಗಳಿಗೆ ಪಾಸ್‌ವರ್ಡ್‌ ನೀಡೋಕೆ ನಿರಾಕರಿಸಿದ್ರು. ಹೀಗಾಗಿ ED ಅಧಿಕಾರಿಗಳು ಡೈರೆಕ್ಟಾಗಿ ಆ್ಯಪಲ್‌ ಕಂಪನಿಯತ್ರ ಮನವಿ ಮಾಡ್ಕೊಂಡಿದ್ರು. ಬಟ್‌ ಆಪಲ್‌ ಆಗಲ್ಲ ಅಂತೇಳಿದೆ.

ಇನ್ನು ತಮ್ಮ ಬಂಧನ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಅರವಿಂದ್‌ ಕೇಜ್ರಿವಾಲ್‌ ಇದೀಗ ವಿಚಾರಣೆಗೆ ಕೋರ್ಟ್‌ ಮುಂದೆ ಹಾಜರಾಗಿದ್ದಾರೆ. ಈ ವೇಳೆ ಬಂಧನದಿಂದ ತಮಗೆ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸೋಕೆ ಆಗ್ತಿಲ್ಲ. ಅಲ್ಲದೇ ಈ ತನಿಖೆ ತನ್ನ ಪಕ್ಷವನ್ನ ಮುಗಿಸೋಕೆ ಮಾಡಲಾಗ್ತಿದೆ ಅಂತ ಹೇಳಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರೋ ED, ನಾಳೆ ಯಾರಾದ್ರು ಒಬ್ಬ ರಾಜಕಾರಣಿ ಉಗ್ರ ಕೂಡ ಆಗಿದ್ದು, ಸೇನೆ ವಾಹನವನ್ನ ಉಡಾಯಿಸಿ, ನಾಳೆ ನಾನು ಎಲೆಕ್ಷನ್‌ ಕಂಟೆಸ್ಟ್‌ ಮಾಡ್ಬೇಕು ಅಂದ್ರೆ ಏನ್‌ ಮಾಡ್ತೀರಿ ಅಂತ ಕೇಳಿದೆ.

ಇನ್ನು ಮಾರ್ಚ್‌ 21ರಂದು ಅರೆಸ್ಟ್‌ ಆಗಿ…ಸದ್ಯ ನ್ಯಾಯಾಂಗ ಬಂಧನದಲ್ಲಿರೋ ಕೇಜ್ರಿವಾಲ್‌ ಅವ್ರ ದೇಹದ ತೂಕ ಸುಮಾರು 4.5 ಕೆಜಿಯಷ್ಟು ಕಡಿಮೆಯಾಗಿದೆ. ಬಿಜೆಪಿ ಕೇಜ್ರಿವಾಲ್‌ ಅವ್ರ ಆರೋಗ್ಯವನ್ನ ಅಪಾಯಕ್ಕೆ ಹಾಕಿದೆ. ಅವ್ರಿಗೆ ಏನಾದ್ರು ಆದ್ರೆ, ಕೇವಲ ದೇಶ ಮಾತ್ರವಲ್ಲ…ಆ ದೇವರು ಕೂಡ ಬಿಜೆಪಿಯನ್ನ ಕ್ಷಮಿಸಲ್ಲ ಅಂತ ದೆಹಲಿ ಸಚಿವೆ ಅತಿಶಿ ಹೇಳಿದ್ದಾರೆ. ಆದ್ರೆ ಈ ಬಗ್ಗೆ ರಿಯಾಕ್ಟ್‌ ಮಾಡಿರೋ ತಿಹಾರ್‌ ಜೈಲಿನ ಅಧಿಕಾರಿಗಳು, ಕೇಜ್ರಿವಾಲ್‌ ಅವ್ರು ಚೆನ್ನಾಗಿದ್ದಾರೆ. ದೇಹದ ತೂಕ ಕಳೆದುಕೊಂಡಿಲ್ಲʼ ಅಂತೇಳಿದ್ದಾರೆ.

ಇನ್ನು ಕೇಜ್ರಿವಾಲ್‌ ಬಂಧನ ನಡುವೆ ಇದೀಗ ದೇಶದ ರಾಜಕಾರಣದಲ್ಲಿ ಹೊಸ ಗುಮಾನಿ ಹುಟ್ಕೊಂಡಿದೆ. ಅರವಿಂದ್‌ ಕೇಜ್ರಿವಾಲ್‌ ಅರೆಸ್ಟ್‌ ಆದಾಗಿನಿಂದ ಆಪ್‌ ನಾಯಕ…ಸಂಸದ ರಾಘವ್‌ ಚಡ್ಡಾ ಅವ್ರು ಸಡನ್‌ ಆಗಿ ನಾಪತ್ತೆಯಾಗಿದ್ದಾರೆ. ಇಂತಹ ಸಮಯದಲ್ಲಿ ರಾಘವ್‌ ಚಡ್ಡಾ ಎಲ್ಹೋಗಿದ್ದಾರೆ ಅಂತ ವಿಪಕ್ಷಗಳು ಪ್ರಶ್ನೆ ಮಾಡ್ತಿವೆ. ಜೊತೆಗೆ ದೆಹಲಿ ಮದ್ಯ ಹಗರಣ ಸಂಬಂಧ ED ಅಧಿಕಾರಿಗಳ ಬಲೆಯಿಂದ ತಪ್ಪಿಸ್ಕೊಳ್ಳಲು ರಾಘವ್‌ ಕಣ್ಮರೆಯಾದ್ರಾ ಅನ್ನೋ ಅನುಮಾನ ರಾಜಕೀಯ ವಲಯದಲ್ಲಿ ಹುಟ್ಕೊಂಡಿದೆ. ಯಾಕಂದ್ರೆ ದೆಹಲಿ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ ರಾಘವ್‌ ಚಡ್ಡಾ ಅವ್ರ ಹೆಸರನ್ನೂ ಮೆನ್ಶನ್‌ ಮಾಡಿತ್ತು. ಆದ್ರೆ ರಾಘವ್‌ ಅವ್ರ X ಖಾತೆ ಪ್ರಕಾರ ಅವ್ರು ಮಾರ್ಚ್‌ 08ರಿಂದ ಲಂಡನ್‌ನಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಅಂತ ಗೊತ್ತಾಗಿದೆ.

ಇನ್ನೊಂದ್ಕಡೆ ಅರವಿಂದ್‌ ಕೇಜ್ರಿವಾಲ್‌ ಅವ್ರ ಬಂಧನ ಖಂಡಿಸಿ ಆಪ್‌ ನಾಯಕರು ಹೊಸ ರೀತೀಲಿ ಪ್ರತಿಭಟನೆ ನಡೆಸೋಕೆ ಮುಂದಾಗಿದ್ದಾರೆ. ಏಪ್ರಿಲ್‌ 7ರಂದು ದೆಹಲಿಯ ಜಂತರ್‌ ಮಂತರ್‌ನಲ್ಲಿ ಸೇರಿ ಉಪವಾಸ ನಡೆಸೋದಾಗಿ ಆಪ್‌ ನಾಯಕ ಗೋಪಾಲ್‌ ರೈ ಅನೌನ್ಸ್‌ ಮಾಡಿದ್ದಾರೆ. ಜೊತೆಗೆ ಆಪ್‌ ಬೆಂಬಲಿಗರಿಗೆ ಈ ಉಪವಾಸದಲ್ಲಿ ಭಾಗಿಯಾಗುವಂತೆ ಕರೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply