ಕೊನೆಗೂ ನೆರವೇರಲಿದೆ ಅಲೆಕ್ಸಿ ನಾವಲ್ನಿಯ ಅಂತ್ಯಕ್ರಿಯೆ!

masthmagaa.com:

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವ್ರ ಪ್ರಬಲ ಎದುರಾಳಿ ಅಲೆಕ್ಸಿ ನವಾಲ್ನಿ ಅವ್ರ ಮೃತದೇಹ ಅಂತೂ ಇಂತೂ ಸಾಕಷ್ಟು ಬೇಡಿಕೆ ನಂತ್ರ ಅಲೆಕ್ಸಿ ಅವ್ರ ತಾಯಿಗೆ ಹಸ್ತಾಂತರಿಸಲಾಗಿದೆ. ಇದೀಗ ಅವ್ರ ಅಂತ್ಯಕ್ರಿಯೆ ಮಾರ್ಚ್‌ 1 ರಂದು ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ನಡೆಯಲಿದೆ. ಹೀಗಂತ ಅಲೆಕ್ಸಿ ಅವ್ರ ಪತ್ನಿ ಯುಲಿಯಾ ನಾವಲ್ನಿ ಅವ್ರು ಅನೌನ್ಸ್‌ ಮಾಡಿದ್ದಾರೆ. ಈ ವೇಳೆ ಅವ್ರು ʻಅಂತ್ಯಕ್ರಿಯೆ ಶಾಂತಿಯುತವಾಗಿ ಸಾಗುತ್ತೆ ಅಂತ ಹೇಳಲಾಗೋದಿಲ್ಲ. ಅಲೆಕ್ಸಿ ಅವ್ರಿಗೆ ಕೊನೆಯ ಬಾರಿ ನೋಡೋಕೆ ಬರೋರನ್ನ ಕೂಡ ಪೊಲೀಸ್‌ ಅರೆಸ್ಟ್‌ ಮಾಡಿದ್ರೂ ಮಾಡ್ಬೋದುʼ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply