ಜಪಾನ್-‌ಆಸಿಯಾನ್‌ ದೇಶಗಳ ಸಮಾಗಮ: ಕುತಂತ್ರಿ ಚೀನಾಗೆ ಟಕ್ಕರ್‌

masthmagaa.com:

ದಕ್ಷಿಣ ಚೀನಾ ಸಮುದ್ರದಲ್ಲಿ ಆಗಾಗ ತನ್ನ ಪುಂಡಾಟ ತೋರಿಸೋ ಚೀನಾದ ಅಧಿಪತ್ಯದ ಮನಸ್ಥಿತಿಗೆ ಟಕ್ಕರ್‌ ಕೊಡೋಕೆ ಜಪಾನ್‌, ಆಸಿಯಾನ್‌ ದೇಶಗಳು ಮತ್ತೊಮ್ಮೆ ಜೊತೆಯಾಗಿವೆ. ಭಾನುವಾರ ಈ ರಾಷ್ಟ್ರಗಳು ತಮ್ಮ 50 ವರ್ಷಗಳ ಸಂಬಂಧದ ಸಂಕೇತವಾಗಿ ಸ್ಪೆಶಲ್‌ ಸಮ್ಮೇಳನ ಒಂದನ್ನ ಹಮ್ಮಿಕೊಂಡಿವೆ. ಟೋಕಿಯೋದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ದಕ್ಷಿಣ ಚೀನಾ ಸಮುದ್ರದಲ್ಲಿನ ಹೆಚ್ಚಿನ ಭದ್ರತೆಯ ವಿಚಾರವಾಗಿ ಚರ್ಚೆ ನಡೆಸಲಿವೆ. ಈ ಬಗ್ಗೆ ಶನಿವಾರ ಮಾತನಾಡಿರೋ ಜಪಾನ್‌ ಪ್ರಧಾನಿ ಫುಮಿಯೋ ಕಿಶಿದ, ʻಆಸಿಯಾನ್‌ ರಾಷ್ಟ್ರಗಳ ಬಲವರ್ಧನೆಯಿಂದ ಈ ಭಾಗದಲ್ಲಿ ಸ್ಥಿರವಾದ ಆರ್ಥಿಕತೆಗಳು ಬೆಳೆಯುತ್ತವೆ. ಅಲ್ಲದೇ ಮುಕ್ತ ಅಂತರಾಷ್ಟ್ರೀಯ ಸಹಯೋಗಗಳು ಬಹಳ ಇಂಪಾರ್ಟೆಂಟ್ ಅಂದಿದ್ದಾರೆ. ಎರಡನೇ ಮಾಹಾಯುದ್ಧದ ಟೈಮಲ್ಲಿ ಆಸಿಯಾನ್‌ ದೇಶಗಳನ್ನ ಜಪಾನ್‌ ವಶಪಡಿಸಿಕೊಂಡು ತನ್ನ ವಸಹಾತುಗಳನ್ನಾಗಿ ಮಾಡಿಕೊಂಡಿತ್ತು. ಆದ್ರೆ 1973 ರಿಂದ ಆಸಿಯಾನ್‌ ರಾಷ್ಟ್ರಗಳ ಜೊತೆ ನಿರಂತರವಾಗಿ ಒಳ್ಳೆಯ ಸಂಬಂಧವನ್ನ ಬಿಲ್ಡ್‌ ಮಾಡಿದೆ. ಹಲವಾರು ನೆರವು ಹಾಗೂ ಸಹಕಾರ ಕಾರ್ಯಕ್ರಮಗಳನ್ನ ಜಾರಿಗೆ ತಂದಿದೆ.

-masthmagaa.com

Contact Us for Advertisement

Leave a Reply