ವಿವಾದಿತ ಹೇಳಿಕೆ ನೀಡಿ ಸಾರಿ ಅಂದ ಸಂಗೀತ ನಿರ್ದೇಶಕ ಹಂಸಲೇಖ!

masthmagaa.com:

ನವೆಂಬರ್ 12 ರಂದು ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು, ಪೇಜಾವರ ಶ್ರೀಗಳಾಗಿದ್ದ ಪದ್ಮವಿಭೂಷಣ ವಿಶ್ವೇಷ ತೀರ್ಥರನ್ನು ಟೀಕಿಸಿ ಮಾತಾಡಿದ್ದರು.

ಪೇಜಾವರ ಶ್ರೀಗಳು ದಲಿತರ ಕೇರಿಗೆ ಹೋಗುತ್ತಿದ್ದರು ಸರಿ ಆದ್ರೆ ಅಲ್ಲಿ ಅವರು ಕೋಳಿ ಮಾಂಸ ಕೊಟ್ಟಿದ್ದರೆ ತಿನ್ನುತ್ತಿದ್ದರೇ? ಎಂಬ ಹೇಳಿಕೆ ನೀಡಿ ವಿವಾದಕ್ಕೆ ಈಡಾಗಿದ್ದರು. ಇದಷ್ಟೇ ಅಲ್ಲದೇ ರಾಜಕಾರಣಿಗಳ ಗ್ರಾಮ ವಾಸ್ತವ್ಯವನ್ನೂ ಕೂಡ ಟೀಕಿಸಿದ್ದರು. ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ಮಾಡಿದರು, ಈಗ ಸಿಟಿಯಲ್ಲಿರುವ ಅಶೋಕ್, ಅಶ್ವಥ್ ನಾರಾಯಣ್ ಕೂಡ ಮಾಡುತ್ತಿದ್ದಾರೆ ಎಂದಿದ್ದರು.

ಪೇಜಾವರ ಶ್ರೀಗಳ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಹಿನ್ನೆಲೆಯಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ಅವರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಇಂದು ಬಹಿರಂಗ ಕ್ಷಮೆಯಾಚಿಸಿದ್ದಾರೆ. ನಾನು ಆ ವೇದಿಕೆಯಲ್ಲಿ ಆ ರೀತಿ ಹೇಳಿಕೆ ನೀಡಬಾರದಿತ್ತು. ನನ್ನ ಹೇಳಿಕೆಯನ್ನು ನನ್ನ ಹೆಂಡತಿಯೇ ವಿರೋಧಿಸಿದ್ದಾಳೆ. ನಾನೊಬ್ಬ ಸಂಗೀತ ನಿರ್ದೇಶಕ, ನನ್ನ ಹಾಡುಗಳನ್ನ ಕೇಳಿ ಹೇಗೆ ಜನರೆಲ್ಲ ಖುಷಿಪಡುತ್ತಾರೋ ಹಾಗೆ ನನ್ನ ವ್ಯಕ್ತಿತ್ವವೂ ಕೂಡ ಜನರಿಗೆ ಖುಷಿ ಕೊಡಬೇಕು. ನಾನು ಹಾಗೆ ಮಾತಾಡಿದ್ದು ತಪ್ಪು. ಈ ಕುರಿತು ಕ್ಷಮೆ ಯಾಚಿಸುವುದಾಗಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply