ಸುಡಾನ್‌ನಲ್ಲಿ ಹಿಂಸಾಚಾರ: ಪ್ರಮುಖ ನಗರ ಸಶಸ್ತ್ರ ಪಡೆಗಳ ವಶ

masthmagaa.com:

ಆಫ್ರಿಕಾದ ಸುಡಾನ್‌ನಲ್ಲಿ ಮತ್ತೆ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ಸುಡಾನ್‌ನ ಸಶಸ್ತ್ರ ಗುಂಪುಗಳು ಸರ್ಕಾರದ ರ‍್ಯಾಪಿಡ್‌ ಸಪೋರ್ಟ್‌ ಫೋರ್ಸ್‌(RSF) ಜೊತೆಗೆನ ಘರ್ಷಣೆಯನ್ನ ತೀವ್ರಗೊಳಿಸಿವೆ. ಶುಕ್ರವಾರ ಅಲ್ಲಿನ ಅಲ್‌-ಜಜೀರ ರಾಜ್ಯದ ರಾಜಧಾನಿ ವಾದ್‌ ಮದಾನಿಯನ್ನ ಸಶಸ್ತ್ರ ಪಡೆಗಳು ವಶಪಡಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ಅಲ್ಲಿನ ನಾಗರೀಕರು ಹಾಗೂ ಪರಿಹಾರ ಕಾರ್ಯಕ್ರಮಗಳನ್ನ ನಡೆಸ್ತಿರೋ ಸಿಬ್ಬಂದಿಗಳಿಗೆ ಅಪಾಯ ಇದೆ ಅಂತ ಅಮೆರಿಕ ವಾರ್ನಿಂಗ್‌ ನೀಡಿದೆ. ಅಲ್ಲದೆ ಮುಂಬರುವ ಅಪಾಯಗಳನ್ನ ತಡೆಯೋಕೆ RSF ತನ್ನ ಕಾರ್ಯಾಚರಣೆಗಳಿಗೆ ಬ್ರೇಕ್‌ ನೀಡಬೇಕು ಅಂತ ಅಮೆರಿಕ ಸ್ಟೇಟ್‌ ಡಿಪಾರ್ಟ್‌ಮೆಂಟ್‌ ವಕ್ತಾರ ಮ್ಯಾಥಿವ್‌ ಮಿಲ್ಲರ್‌ ಹೇಳಿದ್ದಾರೆ. ವಿಶ್ವಸಂಸ್ಥೆ ಕೂಡ ತನ್ನ ನೆರವು ಕಾರ್ಯಾಚರಣೆಗಳನ್ನ ನಿಲ್ಲಿಸಿದೆ. ಅಂದ್ಹಾಗೆ ಈ ವಾದ್‌ ಮದಾನಿ ನಗರದಲ್ಲಿ 86 ಸಾವಿರಕ್ಕೂ ಹೆಚ್ಚು ನಿರಾಶ್ರಿತರಿಗೆ ಆಶ್ರಯ ನೀಡಲಾಗಿದೆ. ಒಟ್ಟಾರೆ ಅಲ್‌-ಜಜೀರ ರಾಜ್ಯದಲ್ಲಿ 5 ಲಕ್ಷಕ್ಕೂ ಹೆಚ್ಚು ಜನರು ಆಶ್ರಯ ಪಡೆದಿದ್ದಾರೆ. ಕಳೆದ ಏಪ್ರಿಲ್‌ನಿಂದ ಸುಡಾನ್‌ ಆರ್ಮಿ ಚೀಫ್‌ ಅಬ್ದೆಲ್‌ ಫತೇಹ್‌ ಅಲ್‌-ಬುರಾಹ್‌ ಹಾಗೂ ಮಾಜಿ RSF ಅಧಿಕಾರಿ ಮೊಹಮದ್‌ ಹಮ್ದಾನ್‌ ದಾಗ್ಲೋ ಪಡೆಗಳ ನಡುವಿನ ಸಂಘರ್ಷದಲ್ಲಿ ಬರೋಬ್ಬರಿ 12,190 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply