ಮೂರನೇ ದಿನವೂ ಮುಂದುವರೆದ ಐಟಿ ಅಧಿಕಾರಿಗಳ ಬಿಬಿಸಿ ಕಚೇರಿ ಸಮೀಕ್ಷೆ!

masthmagaa.com:

ದೆಹಲಿ ಹಾಗೂ ಮುಂಬೈನಲ್ಲಿರೋ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆಯ ಸಮೀಕ್ಷೆ ಮೂರನೇ ದಿನವೂ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿರೋ ಕಚೇರಿಯಲ್ಲಿ ಕನಿಷ್ಠ 10 ಹಿರಿಯ ಉದ್ಯೋಗಿಗಳು ಮನೆಗೆ ಹೋಗದೇ ಸಮೀಕ್ಷೆಗೆ ಸಹಕರಿಸುತ್ತಿದ್ದಾರೆ ಎನ್ನಲಾಗಿದೆ. ಬಿಬಿಸಿ ಸುದ್ಧಿ ಸಂಸ್ಥೆಗೆ ಸಂಬಂಧಪಟ್ಟ ಅಂತಾರಾಷ್ಟ್ರೀಯ ಆದಾಯ ತೆರಿಗೆ ಮತ್ತು ಮಲ್ಟಿನ್ಯಾಷನಲ್‌ ಕಾರ್ಪೋರೇಷನ್‌ಗಳಿಂದ ಫಂಡ್‌ ವರ್ಗಾವಣೆ ಆಗಿರೋದ್ರ ಬಗ್ಗೆ ಮಾಹಿತಿ ಕಲೆ ಹಾಕಲಾಗ್ತಿದೆ. ಈ ಸಮೀಕ್ಷೆ ಇನ್ನೂ ಕೆಲವು ಸಮಯ ನಡೆಯಲಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಇನ್ನು ದೆಹಲಿ ಬಿಬಿಸಿ ಸುದ್ಧಿ ಪ್ರಸಾರ ಎಂದಿನಂತೆ ನಡೆಯುತ್ತಿದ್ದು ಹಲವು ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ ಅಂತ ಬಿಬಿಸಿ ಹೇಳಿದೆ.

-masthmagaa.com

Contact Us for Advertisement

Leave a Reply