ಕೆಂಪು ಸಮುದ್ರದಲ್ಲಿ ಹೌತಿಗಳ ದಾಳಿ ನಿಲ್ಸೋಕೆ ಅಮೆರಿಕ ಪ್ಲಾನ್‌!

masthmagaa.com:

ಕೆಂಪು ಸಮುದ್ರದಲ್ಲಿರೋ ಹಡಗುಗಳ ಮೇಲೆ ದಿನ ಬೆಳಗಾದ್ರೆ ದಾಳಿ ನಡೆಸುವ ಯೆಮೆನ್‌ನ ಹೌತಿಗಳ ವಿರುದ್ಧ ಅಮೆರಿಕ ಸಮರ ಸಾರಿದೆ. ಹೌತಿಗಳ ಈ ದಾಳಿಗಳಿಂದ ಹಲವು ಶಿಪ್ಪಿಂಗ್‌ ಕಂಪನಿಗಳು ಕೆಲಸ ಮಾಡೋದನ್ನೇ ಸ್ಟಾಪ್‌ ಮಾಡಿವೆ. ಹೀಗಾಗಿ ಇದನ್ನ ತಡೆಯೋಕೆ ಅಮೆರಿಕ ಒಂದು ಪ್ಲಾನ್‌ ಹಾಕಿದೆ. ಕೆಂಪು ಸಮುದ್ರದಲ್ಲಿ ವ್ಯಾಪಾರವನ್ನ ರಕ್ಷಿಸೋಕೆ ಇದೀಗ ಅಮೆರಿಕ ʻಮಲ್ಟಿನ್ಯಾಷನಲ್‌ ಫೋರ್ಸ್‌ʼ ಲಾಂಚ್‌ ಮಾಡೋದಾಗಿ ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್‌ ಆಸ್ಟಿನ್‌ ಅನೌನ್ಸ್‌ ಮಾಡಿದ್ದಾರೆ. ಇನ್ನು ಈ ʻಮಲ್ಟಿನ್ಯಾಷನಲ್‌ ಫೋರ್ಸ್‌ʼ ಒಟ್ಟು 10 ರಾಷ್ಟ್ರಗಳನ್ನ ಒಳಗೊಂಡಿರುತ್ತೆ ಎನ್ನಲಾಗಿದೆ. ಈ ಕುರಿತು ಮಾತನಾಡಿದ ಅವ್ರು, ʻನಾವಿಗೇಷನ್‌ ಸ್ವಾತಂತ್ರ್ಯಅಂದ್ರೆ ಯಾವುದೇ ತೊಂದರೆಗಳಿಲ್ಲದೇ ಸಮುದ್ರದಲ್ಲಿ ಸಂಚರಿಸುವ ಮೂಲ ತತ್ವಗಳನ್ನ ಎತ್ತಿಹಿಡಿಯೋ ದೇಶಗಳು ಸೇರಿ ಯೆಮೆನ್‌ ಹೌತಿಗಳನ್ನ ಎದುರಿಸ್ಬೇಕು. ಮಲ್ಟಿನ್ಯಾಷನಲ್‌ ಫೋರ್ಸ್‌ನ 10 ರಾಷ್ಟ್ರಗಳ ಪೈಕಿ, ಬಹರೇನ್‌, ಕೆನಡಾ, ಫ್ರಾನ್ಸ್‌, ಇಟಲಿ, ಸೆಶೆಲ್ಸ್‌ ಮತ್ತು ಬ್ರಿಟನ್‌ ಸೇರಿಕೊಳ್ಳಲಿದೆʼ ಅಂತ ಆಸ್ಟಿನ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply